Advertisement
ಬಜರಂಗಳದ ಜಿಲ್ಲಾ ಸಂಚಾಲಕ ಶ್ಯಾಮ್ ವಿ. ಗೌಡ ನೇತೃತ್ವದಲ್ಲಿ ನಗರದ ಹೊರವಲಯದಲ್ಲಿ ಜನರಿಗೆ ಕುರಿ ಮಾಂಸವನ್ನು ಮಾರಾಟ ಮಾಡಲಾಯಿತು. ಚನ್ನರಾಯ ಪಟ್ಟಣದಿಂದ ಕುರಿಗಳನ್ನು ರೈತರಿಂದ ಖರೀದಿಸಿದ್ದು ಅವುಗಳನ್ನು ಜಟ್ಕಾಕಟ್ ಮೂಲಕ ವಧಿಸಿ ಸ್ಥಳದಲ್ಲೇ 600 ರೂ.ಗೆ ಮಾಂಸ ಮಾರಾಟ ಮಾಡಲಾಗಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಾಂಸವನ್ನು ನೀಡಲಾಗಿದ್ದು ಹೋಮ್ ಡೆಲಿವರಿಯ ಸೌಲಭ್ಯವನ್ನೂ ನೀಡಲಾಗಿದೆ ಎಂದು ನಾಯಕರು ತಿಳಿಸಿದ್ದಾರೆ.
Related Articles
Advertisement
ಈ ಮಧ್ಯೆ ಮೈಸೂರಿನ ಅನೇಕ ಕಡೆ ಹಿಂದೂಗಳು ರವಿವಾರ ತಮ್ಮವರ ಅಂಗಡಿಗಳಿಂದಲೇ ಮಾಂಸ ಖರೀದಿಸುತ್ತಿದುದು ಕಂಡು ಬಂತು.
ಹಲಾಲ್ ಮಾಡುವ ಮರಿಗಳನ್ನು ನಾವು ಎಷ್ಟೋ ವರ್ಷಗಳಿಂದ ಸೇವನೆ ಮಾಡುತ್ತಿದ್ದರೂ ಈಗ ಅನಗತ್ಯವಾಗಿ ಸಂಬಂಧ ಇಲ್ಲದ ವಿಷಯಗಳನ್ನು ಎತ್ತಿಕೊಂಡು ಶಾಂತಿ ಕದಡುವುದು ಎಷ್ಟು ಸರಿ? ಹಲಾಲ್ ಅವರ (ಅಲ್ಪಸಂಖ್ಯಾಕರ) ಪದ್ಧತಿ. ಅದು ಅವರವರ ನಂಬಿಕೆಗಳಾಗಿವೆ. ನಾವೂ ಹಬ್ಬ-ಹರಿದಿನಗಳಲ್ಲಿ ಮರಿ ಕೊಯ್ಯುವುದಿಲ್ಲವೇ? ರಕ್ತ ಕೆಳಗೆ ಚೆಲ್ಲುವುದಿಲ್ಲವೇ? ಈಗ ಏಕಾಏಕಿ ಯಾಕೆ ವಿವಾದ ಸೃಷ್ಟಿಸಲಾಗಿದೆ?
-ಸಿದ್ದರಾಮಯ್ಯ, ವಿಪಕ್ಷ ನಾಯಕ