Advertisement

ನಿಲ್ಲಿಸಿದ್ದ ಮಿನಿ ಗೂಡ್ಸ್ ವಾಹನಕ್ಕೆ ಗೂಡ್ಸ್ ಲಾರಿ ಹಿಂಬದಿಯಿಂದ ಡಿಕ್ಕಿ; ವಾಹನಗಳು ಜಖಂ

09:42 AM Oct 20, 2023 | Team Udayavani |

ಚಿಕ್ಕಮಗಳೂರು: ನಿಲ್ಲಿಸಿದ ಮಿನಿ ಗೂಡ್ಸ್ ವಾಹನಕ್ಕೆ ಗೂಡ್ಸ್ ಲಾರಿಯೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ರಭಸಕ್ಕೆ ಮಿನಿ ಗೂಡ್ಸ್ ಪಲ್ಟಿಯಾದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ನಿದ್ದೆ ಬರುತ್ತಿದ್ದೆ ಎಂದು ಚಾಲಕ ರಸ್ತೆ ಬದಿ ನಿಲ್ಲಿಸಿ ಮಿನಿ ಗೂಡ್ಸ್ ನಲ್ಲೇ ಚಾಲಕ ಮಲಗಿದ್ದು, ಅಶೋಕ್ ಲೆಲ್ಯಾಂಡ್ ಲಾರಿ ಚಾಲಕ ನಿದ್ದೆ ಮಂಪರಿನಲ್ಲಿ ಬಂದು ಇನ್ನೊಂದು ವಾಹನದ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಎರಡು ವಾಹನಗಳು ಫುಲ್ ಜಖಂಗೊಂಡಿವೆ.

ಬೆಂಗಳೂರಿನಿಂದ ಮಂಗಳೂರಿಗೆ ಪ್ರೊಫೆಷನಲ್ ಕೋರಿಯರ್ ತೆಗೆದುಕೊಂಡು ಹೋಗುತ್ತಿದ್ದ ಲಾರಿ ಇದಾಗಿದ್ದು, ಬೇಲೂರಿನಿಂದ ಮೂಡಬಿದ್ರೆಗೆ ಫೀಡ್ಸ್ ಲೋಡಾಗಿದ್ದ ಗೂಡ್ಸ್ ಮಿನಿ ವಾಹನ ರಸ್ತೆ ಬದಿ ನಿಲ್ಲಿಸಿತ್ತು. ರಾಷ್ಟ್ರೀಯ ಹೆದ್ದಾರಿ  ಬಣಕಲ್ ನಲ್ಲಿ ಈ ಅಪಘಾತ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next