Advertisement

ಕಸ್ತೂರಿರಂಗನ್‌ ವರದಿ ಯುಪಿಎ ಸರ್ಕಾರದ ಕೂಸು

03:52 PM Apr 15, 2019 | Team Udayavani |

ಬಾಳೆಹೊನ್ನೂರು: ಕಸ್ತೂರಿರಂಗನ್‌ ವರದಿ ಯುಪಿಎ ಸರ್ಕಾರದ ಪಾಪದ ಕೂಸಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿ ಬಿಜೆಪಿ ಸರ್ಕಾರದ ಮೇಲಿದೆ ಎಂದು ಉಡುಪಿ – ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಪಟ್ಟಣದ ಜೆ.ಸಿ. ವೃತ್ತದಲ್ಲಿ ಬಿಜೆಪಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮತಯಾಚಿಸಿ ಅವರು ಮಾತನಾಡಿದರು. ಒಬ್ಬ ಬಾಹ್ಯಕಾಶ ವಿಜ್ಞಾನಿಯನ್ನು ವರದಿ ತಯಾರಿಸಲು ಬಿಟ್ಟಿದ್ದು, ಕಾಂಗ್ರೆಸ್‌ ಮಾಡಿದ ಮಹಾ ಅಪರಾಧ. ಸೆಟಲೈಟ್‌ ಸರ್ವೇ ಮೂಲಕ ವರದಿ ತಯಾರಿಸಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದು, ಈ ಬಗ್ಗೆ ಮರು ಸರ್ವೇ ಮಾಡಿ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ.

ವರದಿ ತಯಾರಿಸದೆ ಜನತೆಗೆ ಮಹಾ ಅಪರಾಧ ಮಾಡಿದೆ ಎಂದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಕಸ್ತೂರಿರಂಗನ್‌ ವರದಿಯಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ಗಮನಕ್ಕೆ ತಂದಿದ್ದು, ಉತ್ತಮ ವಕೀಲರನ್ನು ನೇಮಿಸಿ ಅರಣ್ಯವಾಸಿಗಳಿಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದಿಂದ ನೆರೆ ಹಾಗೂ ಬರ ಪರಿಹಾರ ನಿಧಿ  ವಿತರಿಸಿದ್ದರೂ ಸಹ ರಾಜ್ಯ ಸರ್ಕಾರ ಪರಿಹಾರದ ಹಣ ನೀಡುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಇತ್ತೀಚೆಗೆ ಪುಲ್ವಾಮಾ ದಾಳಿಯ ಬಗ್ಗೆ 2 ವರ್ಷದ ಹಿಂದೆಯೇ ನಮಗೆ ಮಾಹಿತಿ ಇತ್ತೆಂದು ಹೇಳುತ್ತಿದ್ದು, ಈ ಮಾಹಿತಿಯನ್ನು ಕೇಂದ್ರ ಹಾಗೂ ರಕ್ಷಣಾ ಇಲಾಖೆಗೆ ತಿಳಿಸಿದ್ದರೆ ಘಟನೆಯನ್ನು ತಡೆಯಬಹುದಿತ್ತು. ಆದರೆ, ವಿಚಾರ ಗೊತ್ತಿದ್ದರೂ ಸಂವಿಧಾನದಡಿಯಲ್ಲಿ ಪ್ರಮಾಣ ವಚನ ಸ್ವೀಕರಿದ ಮುಖ್ಯ ಮಂತ್ರಿಯವರು ತಪ್ಪೆಸಗಿದ್ದಾರೆ. ಪರೋಕ್ಷವಾಗಿ ಈ ಘಟನೆಯಲ್ಲಿ ಅವರು ಪಾಲುದಾರರಾಗಿದ್ದಾರೆ ಎಂದು ದೂರಿದರು.

Advertisement

ಮುಂಬೈ ದಾಳಿಯಲ್ಲಿ 184 ಜನ ಉಗ್ರಗಾಮಿಗಳಿಂದ ಸಾವನ್ನಪ್ಪಿದ್ದು, ಅಂದಿನ ಪ್ರಧಾನ ಮಂತ್ರಿ ಘಟನೆಯನ್ನು ಖಂಡಿಸಿ ಮೌನವಹಿಸಿದ್ದೇ ಭಯೋತ್ಪಾದನೆ ಬೆಳೆಯಲು ಕಾರಣ ಎಂದು ಆರೋಪಿಸಿದರು. ಪುಲ್ವಾಮಾ ಘಟನೆ ನಡೆದು 11 ದಿನಗಳಲ್ಲೇ ಮೋದಿಯವರು ಸೈನ್ಯಕ್ಕೆ ಪರಮಾ ಧಿಕಾರ ನೀಡಿ ಪಾಕಿಸ್ತಾನಕ್ಕೆ ನುಗ್ಗಿ ಉಗ್ರ ಗಾಮಿಗಳ ನೆಲೆಗಳನ್ನು ಧ್ವಂಸಗೊಳಿಸಿದ್ದಾರೆ. ಉಗ್ರಗಾಮಿಗಳ ಬಗ್ಗೆ ಶೃಂಗೇರಿ ಕ್ಷೇತ್ರದ ಶಾಸಕರು ಪಾಕ್‌ ಪ್ರಧಾನಿ ಬಗ್ಗೆ ಮಾತನಾಡುತ್ತಿದ್ದುದ್ದನ್ನು ಖಂಡಿಸಿ ದೇಶದ ಯೋಧರ ರಕ್ಷಣೆಯ ಬಗ್ಗೆ ಚಿಂತಿಸಲು ಮುಂದಾಗಬೇಕು. ಸುಭದ್ರ ಸರ್ಕಾರಕ್ಕಾಗಿ ಬಿಜೆಪಿಗೆ ಮತ ನೀಡಬೇಕೆಂದು ಕರೆ ನೀಡಿದರು.

ಮಾಜಿ ಶಾಸಕ ಡಿ.ಎನ್‌. ಜೀವರಾಜ್‌ ಮಾತನಾಡಿ, ಹಾಲಿ ಸಂಸದೆ ಶೋಭಕರಂದ್ಲಾಜೆಯವರು 569 ಕೋಟಿ ರೂ. ಸಿ.ಆರ್‌.ಎಫ್‌. ಯೋಜನೆಯಡಿ ಅನುದಾನ ತಂದು ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇನ್ನೂ ಹಲವಾರು ಯೋಜನೆಗಳನ್ನು ಜನತೆಗೆ ನೀಡಿದ್ದು, ಈ ಬಗ್ಗೆ ಕಾಂಗ್ರೆಸ್‌ ಹಾಗೂ ಜೆ.ಡಿಎಸ್‌. ನವರು
ಅಧ್ಯಯನ ಮಾಡಬೇಕು ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಡ್ಯಕ್ಕೆ 8 ಸಾವಿರ ಕೋಟಿ ಹಾಗೂ ಹಾಸನಕ್ಕೆ 560 ಕೋಟಿ ರೂ. ಕಾಮಗಾರಿಗೆ ಟೆಂಡರ್‌ ಕರೆದಿದ್ದು, ಇನ್ನುಳಿದ ಜಿಲ್ಲೆಗಳು ಮುಖ್ಯಮಂತ್ರಿಗಳಿಗೆ ಕಾಣುತ್ತಿಲ್ಲ. ಅಕ್ರಮ-ಸಕ್ರಮದ ಅರ್ಜಿ ಬಗ್ಗೆ ಶಾಸಕರು ಯಾವುದೇ
ಸಭೆಯನ್ನು ಕರೆಯದೇ ಇದ್ದು ನಮ್ಮ ಅವಧಿಯಲ್ಲಿ ಸ್ಥಿರೀಕರಣಗೊಂಡ ಅರ್ಜಿಗಳಿಗೆ ಹಕ್ಕು ಪತ್ರ ವಿತರಿಸುತ್ತಿದ್ದು ನಮ್ಮದೆಂದು ಹೇಳಿಕೊಳ್ಳುತ್ತಿರುವುದು ನಾಚಿಕೆಯ ಸಂಗತಿಯಾಗಿದೆ ಎಂದರು.

ಜಿಪಂ ಸದಸ್ಯ ಎ.ಎನ್‌. ರಾಮಸ್ವಾಮಿ , ಕೆ.ಟಿ. ವೆಂಕಟೇಶ್‌, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಟಿ.ಎಂ ಉಮೇಶ್‌, ತಾಲೂಕು ಅಧ್ಯಕ್ಷ ಭಾಸ್ಕರ್‌ ವೆನಿಲ್ಲಾ ಇತರರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next