Advertisement

ಜ.1ರಿಂದ ಕನ್ನಡ ಜಾನಪದ ನಿತ್ಯೋತ್ಸವ ಕಾರ್ಯಕ್ರಮ

04:37 PM Dec 29, 2019 | Naveen |

ಚಿಕ್ಕಮಗಳೂರು: ಜಿಲ್ಲಾ ಕನ್ನಡ ಜಾನಪದ ಪರಿಷತ್‌, ತಾಲೂಕು, ಹೋಬಳಿ ಘಟಕಗಳ ಸಂಯುಕ್ತಾಶ್ರಯದಲ್ಲಿ ಕನ್ನಡ ಜಾನಪದ ಪರಿಷತ್‌ ವತಿಯಿಂದ ಸುಗ್ಗಿ ಹಬ್ಬದಲ್ಲಿ ಜಾನಪದ ಸಂಭ್ರಮ ಕಾರ್ಯ ಯೋಜನೆ ರೂಪಿಸಿದ್ದು, ಜಿಲ್ಲೆಯಲ್ಲಿ ಜ.1ರಿಂದ 31ರವರೆಗೆ ನಿತ್ಯವೂ ಕನ್ನಡ ಜಾನಪದ ನಿತ್ಯೋತ್ಸವ ಏರ್ಪಡಿಸಲಾಗಿದೆ ಎಂದು ಕನ್ನಡ ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್‌ ತಿಳಿಸಿದ್ದಾರೆ.

Advertisement

ಹೇಳಿಕೆ ನೀಡಿರುವ ಅವರು, ಸುಗ್ಗಿಹಬ್ಬದ ಅಂಗವಾಗಿ ಜ.1 ರ ಬೆಳಗ್ಗೆ 7.30 ಕ್ಕೆ ಕಡೂರಿನ ಅಜ್ಜಂಪುರ ಜಿ. ಸೂರಿ ಪ್ರತಿಷ್ಠಾನದ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ, ಅದೇ ದಿನ ಮಧ್ಯಾಹ್ನ 2 ಗಂಟೆಗೆ ಘಂಟೆಗೆ ಚಿಕ್ಕಮಗಳೂರಿನ ಲಾಲ್‌ ಬಹದ್ದೂರು ಶಾಸ್ತ್ರಿ ಪದವಿ ಪೂರ್ವ ಕಾಲೇಜಿನ ಅವರಣದಲ್ಲಿ ಜಾನಪದ ನಿತ್ಯೋತ್ಸವ ಕಾರ್ಯಕ್ರಮಕ್ಕೆ ಸಂಸ್ಕೃತಿ ಚಿಂತಕಿ ಪಲ್ಲವಿ ಸಿ.ಟಿ.ರವಿ ಚಾಲನೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ|ಜಾನಪದ ಬಾಲಾಜಿ ಆಶಯನುಡಿ ನುಡಿಯಲಿದ್ದಾರೆ. ಜಾನಪದದ ಸ್ಥಿತಿಗತಿ ಕುರಿತು ಸಾಹಿತಿ ಚಿಂತಕ ಎಸ್‌.ಎಸ್‌. ವೆಂಕಟೇಶ್‌ ಮಾತನಾಡಲಿದ್ದು, ಮುಖ್ಯ ಅತಿಥಿಗಳಾಗಿ ಚಿಕ್ಕಮಗಳೂರು ತಾಲೂಕು ಕನ್ನಡ ಜಾನಪದ ಪರಿಷತ್‌ ಅಧ್ಯಕ್ಷ ಬಿ.ಆರ್‌.ಜಗದೀಶ್‌ ಮತ್ತು ಜಿಲ್ಲಾ
ಕನ್ನಡ ಜಾನಪದ ಪರಿಷತ್‌ ಕಾರ್ಯದರ್ಶಿ ಎ.ಆರ್‌.ಪ್ರಕಾಶ್‌ ಮತ್ತು
ಉಪಪ್ರಾಂಶುಪಾಲ ಲೀಲಾವತಿ ಭಾಗವಹಿಸಲಿದ್ದಾರೆ. ಪ್ರಾಸ್ತಾವಿಕ ವಾಗಿ ಜಿಲ್ಲಾ ಕನ್ನಡ ಜಾನಪದ ಪರಿಷತ್‌ ಅಧ್ಯಕ್ಷ ಸೂರಿಶ್ರೀನಿವಾಸ್‌ ಮಾತನಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಾಲ್‌ ಬಹದ್ದೂರು ಶಾಸ್ತ್ರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿದ್ದಪ್ಪ ಟಕ್ಕಳಕಿ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕೊಪ್ಪ ತಾಲೂಕಿನ ಜಯಪುರದ ಬಿ.ಜಿ.ಎಸ್‌. ಕಾಲೇಜು ಆವರಣದಲ್ಲಿ ಜ.11ರ ಬೆಳಗ್ಗೆ 11ಕ್ಕೆ ಸಾಹಿತಿ ಚಂದ್ರಕಲಾ ಅವರು
ಜನಪದರು ಮತ್ತು ಕುಟುಂಬ ಮಹತ್ವ ಕುರಿತು ಮಾತನಾಡಲಿದ್ದು ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜನವರಿ 14 ರ ಸಂಜೆ 7ಕ್ಕೆ ಕಡೂರು ರೋಟರಿ
ಕ್ಲಬ್‌ ಆವರಣದಲ್ಲಿ ರೋಟರಿ ಕ್ಲಬ್‌ ಅಧ್ಯಕ್ಷ ಎಚ್‌.ಕೆ.ಮಂಜುನಾಥ್‌ ಅಧ್ಯಕ್ಷತೆಯಲ್ಲಿ ಮಲ್ಲಿಗೆ ಸುಧೀರ್‌ ಮತ್ತು ಬೀರೂರು ಮಲ್ಲಿಗೆ ಬಳಗದವತಿಯಿಂದ ಜಾನಪದ ಗೀತಗಾಯನ ನಡೆಯಲಿದೆ. ಜ.15 ರ ಸಂಜೆ 7ಕ್ಕೆ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಜಾನಪದ ಸಂಭ್ರಮವನ್ನು ಅಜ್ಜಂಪುರ ತಾಲ್ಲೂಕು ಕಾಟಿಗನೆರೆ ಗ್ರಾಮದಲ್ಲಿ ಜಾನಪದದ ಗೀತಗಾಯನ ಮತ್ತು ಸೋಬಾನೆ ಪದಗಳು ಭಜನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಜ.21ಕ್ಕೆ ಗಿರಿಯಾಪುರ ಗುರುಕೃಪಾ ಪ್ರೌಢಶಾಲಾ ಆವರಣದಲ್ಲಿ ಅವರು ಜನಪದರಲ್ಲಿ ಜೀವನ ಮೌಲ್ಯಗಳು ಮತ್ತು ಸುಗ್ಗಿಹಬ್ಬದ ಮಹತ್ವ ಕುರಿತು ಆರ್‌.ಜಿ.ಕೃಷ್ಣಸ್ವಾಮಿ ಮಾತನಾಡಲಿದ್ದಾರೆ. ಮೂಡಿಗೆರೆ ತಾಲೂಕು ಕನ್ನಡ ಜಾನಪದ ಪರಿಷತ್‌ ಅಧ್ಯಕ್ಷ ಭಕ್ಕಿ ಮಂಜುನಾಥ್‌ ಗೀತಗಾಯನ ನಡೆಸಿಕೊಡಲಿದ್ದಾರೆ. ಜ.26ರ ಸಂಜೆ 7ಕ್ಕೆ ಕಡೂರು ಪಟ್ಟಣದ ಹಿರೇನಲ್ಲೂರು ಶ್ರೀನಿವಾಸ್‌ ಮನೆ ಅಂಗಳದಲ್ಲಿ ಉಪನ್ಯಾಸಕ ಡಾ| ಲಿಂಗದಹಳ್ಳಿ ಹಾಲಪ್ಪ ಅವರು
ಹಾಲುಮತ ಪರಂಪರೆಯಲ್ಲಿ ಜಾನಪದ ಸಂಸ್ಕೃತಿ ಕುರಿತು ಮಾತನಾಡಲಿದ್ದಾರೆ.

Advertisement

ಜಿಲ್ಲೆಯ ವಿವಿದೆಡೆ ನಡೆಯುವ ಜಾನಪದ ಸಿರಿ ಸಂಭ್ರಮದ ನಿತ್ಯೋತ್ಸವದಲ್ಲಿ ಜನಪದರಲ್ಲಿ ಸುಗ್ಗಿ ಹಬ್ಬಗಳು, ಜಾನಪದ ಮತ್ತು ಮಹಿಳೆ, ಜಾನಪದ ಮತ್ತು ಸಂಸ್ಕೃತಿ. ಜನಪದರ ಜೀವನ ಮೌಲ್ಯಗಳು, ಲಾವಣಿ ಪ್ರಕಾರಗಳ ಪ್ರಾತ್ಯಕ್ಷಿಕೆ, ಜಾನಪದ ಗೀತ ಗಾಯನ, ಸೋಬಾನೆ ಪದಗಳು, ಜನಪದರಲ್ಲಿ ಸಾಹಿತ್ಯ ಮೆರಗು, ಮಲೆನಾಡಿನ ಪ್ರಸಿದ್ದ ಜಾನಪದ ಕಲೆಗಳಲ್ಲೊಂದಾದ ಅಂಟಿಕೆ-
ಪಿಂಟಿಕೆ ಪ್ರಾತ್ಯಕ್ಷಿಕೆ, ಜನಪದದಲ್ಲಿ ಹಾಸ್ಯ ಅಸಾದಿ ಪದಗಳು, ಜನಪದರಲ್ಲಿ ಕೃಷಿ, ಜನಪದರ ಕುಟುಂಬ ಸೊಬಗು, ಜನಪದರು ಕಂಡ ಬದುಕು, ಹೀಗೆ ಹತ್ತು ಹಲವು ವಿಷಯದ ಬಗ್ಗೆ ಜಿಲ್ಲೆಯ ಜಾನಪದ ಕಲಾವಿದರು, ಸಾಹಿತಿಗಳು, ಚಿಂತಕರು. ಜಾನಪದ ವಿದ್ವಾಂಸರು ಮಾತನಾಡಲಿದ್ದಾರೆ. ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next