Advertisement

ಉತ್ತಮ ಪರಿಸರಕ್ಕಾಗಿ ಹಾವುಗಳ ರಕ್ಷಣೆ ಅಗತ್ಯ

03:17 PM May 05, 2019 | Team Udayavani |

ಚಿಕ್ಕಮಗಳೂರು: ಶುದ್ಧ ಅಮ್ಲಜನಕ ಮತ್ತು ಉತ್ತಮ ಪರಿಸರಕ್ಕಾಗಿ ಹಾವುಗಳನ್ನು ಸಂರಕ್ಷಿಸಬೇಕು ಎಂದು ಸ್ನೇಕ್‌ ನರೇಶ್‌ ಸಲಹೆ ನೀಡಿದರು.

Advertisement

ಭಾರತ ಸೇವಾದಳದ ಜ್ಞಾನ ಜ್ಯೋತಿ ಘಟಕ ನಗರದ ಆಜಾದ್‌ ಪಾಕ್‌ ರ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ನಡೆಸುತ್ತಿರುವ ಉಚಿತ ಮಕ್ಕಳ ಬೇಸಿಗೆ ಶಿಬಿರದಲ್ಲಿ ಅವರು ಹಾವುಗಳ ಸಂರಕ್ಷಣೆ ಕುರಿತು ಮಕ್ಕಳಿಗೆ ಉಪಯುಕ್ತ ಮಾಹಿತಿ ನೀಡಿದರು.

ಹಾವುಗಳು ರೈತರ ಮಿತ್ರ. ಅವುಗಳಿಂದ ಭೂಮಿಯಲ್ಲಿರುವ ಇಲಿಗಳು ಮತ್ತು ವಿಷದ ಹುಳುಗಳ ಸಂತಾನ ಕಡಿಮೆಯಾಗುತ್ತದೆ. ವಾತಾವರಣದಲ್ಲಿರುವ ವಿಷವನ್ನು ಉಸಿರಿನ ಮೂಲಕ ಒಳಗೆಳೆದುಕೊಳ್ಳುವ ಹಾವುಗಳು ಶುದ್ಧ ಅಮ್ಲಜನಕವನ್ನು ವಾತಾವರಣಕ್ಕೆ ಬಿಡುತ್ತವೆ. ಇದರಿಂದಾಗಿ ಕಲುಷಿತ ವಾತಾವರಣ ಶುದ್ಧವಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಜಾತಿಯ ಹಾವುಗಳನ್ನು ಮಕ್ಕಳಿಗೆ ಪ್ರದರ್ಶಿಸುವ ಮೂಲಕ ಅವುಗಳ ಬಗ್ಗೆ ಮಾಹಿತಿ ನೀಡಿದ ಅವರು, ಹಾವುಗಳು ಯಾವುದೇ ಕಾರಣಕ್ಕೂ ಯಾರಿಗೂ ಸುಮ್ಮನೆ ಕಚ್ಚುವುದಿಲ್ಲ. ಗಾಬರಿ ಅಥವಾ ಆತ್ಮರಕ್ಷಣೆಗಾಗಿ ಅವು ಕಚ್ಚುತ್ತವೆ ಎಂದು ತಿಳಿಸಿದರು.

ಭಾರತ ಸೇವಾದಳದ ತಾಲೂಕು ಸಂಘಟಕ, ಶಿಬಿರದ ಸಂಯೋಜಕ ಎಸ್‌.ಈ. ಲೋಕೇಶ್ವರಾಚಾರ್‌ ಮಾತನಾಡಿ, ಈ ಭೂಮಿಯ ಮೇಲೆ ಬದುಕಲು ಮನುಷ್ಯರಿಗಿರುವಷ್ಟೇ ಹಕ್ಕು ಪ್ರಾಣಿ ಪಕ್ಷಿಗಳಿಗೂ ಇದೆ. ಉತ್ತಮ ಪರಿಸರಕ್ಕಾಗಿ ಕಾಡು ಮತ್ತು ವನ್ಯಜೀವಿಗಳನ್ನು ಸಂರಕ್ಷಿಸುವ ಅಗತ್ಯವಿದೆ. ಈಗಲಾದರು ಎಚ್ಚೆತ್ತು ಅರಣ್ಯ ಮತ್ತು ಪ್ರಾಣಿ ಸಂಕುಲ ರಕ್ಷಿಸದಿದ್ದರೆ ನಮ್ಮ ಮುಂದಿನ ಪೀಳಿಗೆ ಅವುಗಳನ್ನು ಚಿತ್ರದಲ್ಲಿ ಮಾತ್ರ ನೋಡಬೇಕಾಗುತ್ತದೆ ಎಂದು ಎಚ್ಚರಿಸಿದರು.

Advertisement

ಇದೇ ಸಂದರ್ಭದಲ್ಲಿ ಹಾವುಗಳನ್ನು ಮಕ್ಕಳಿಗೆ ನೀಡಿ, ಅವುಗಳನ್ನು ಸ್ಪರ್ಶಿಸುವ ಮೂಲಕ ಹಾವಿನ ಬಗ್ಗೆ ಧೈರ್ಯ ಮೂಡಿಸುವ ಕೆಲಸವನ್ನು ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next