Advertisement

ಅಂತೂ ಬಂತು ಮಳೆ

12:01 PM Jun 13, 2019 | Naveen |

ಚಿಕ್ಕಮಗಳೂರು: ಜಿಲ್ಲೆಗೆ ಮುಂಗಾರು ಮಳೆ ಪ್ರವೇಶಿಸಿದ್ದು, ಮಲೆನಾಡು ಭಾಗಗಳಲ್ಲಿ ಸತತವಾಗಿ ಮಳೆಯಾಗುತ್ತಿದೆ. ಮುಂಗಾರು ಪ್ರವೇಶಿಸಿದೆಯಾದರೂ ಅಬ್ಬರದ ಮಳೆ ಸುರಿಯುತ್ತಿಲ್ಲ. ಆಗಾಗ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ತಾಲೂಕುಗಳಲ್ಲಿ ಗಾಳಿಯೊಂದಿಗೆ ಸತತವಾಗಿ ತುಂತುರು ಮಳೆಯಾಗುತ್ತಿದೆ. ಚಿಕ್ಕಮಗಳೂರು ನಗರ ಸೇರಿದಂತೆ ವಿವಿಧೆಡೆಗಳಲ್ಲಿ ಆಗಾಗ ತುಂತುರು ಮಳೆ ಸುರಿಯುತ್ತಿದೆ.

Advertisement

ಧರೆಗುರುಳಿದ ಮರ, ಸಂಚಾರ ಅಸ್ತವ್ಯಸ್ತ: ಬಾಳೆಹೊನ್ನೂರು ಸಮೀಪದ ಕಣತಿ ಬಳಿ ಮಳೆಗೆ ದೊಡ್ಡ ಮರವೊಂದು ರಸ್ತೆ ಮೇಲೆ ಬಿದ್ದ ಪರಿಣಾಮ ಗಂಟೆಗೂ ಹೆಚ್ಚು ಕಾಲ ಬಾಳೆಹೊನ್ನೂರು-ಚಿಕ್ಕಮಗಳೂರು ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ರಸ್ತೆಯ ಮೇಲೆ ಬಿದ್ದಿದ್ದ ಮರವನ್ನು ತೆರವುಗೊಳಿಸಿದ ನಂತರ ಸಂಚಾರ ವ್ಯವಸ್ಥೆ ಪುನರಾರಂಭಗೊಂಡಿತು.

ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲೂ ರಾತ್ರಿ ಬೀಸಿದ ಗಾಳಿಗೆ ಮರ ಹಾಗೂ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಮುರಿದು ಬಿದ್ದಿದ್ದವು. ರಸ್ತೆಗೆ ಅಡ್ಡಲಾಗಿ ವಿದ್ಯುತ್‌ ಕಂಬಗಳೂ ಬಿದ್ದಿದ್ದು, 4ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.

ಎಲ್ಲೆಲ್ಲಿ ಎಷ್ಟೆಷ್ಟು?
ಚಿಕ್ಕಮಗಳೂರು ತಾಲೂಕಿನ ಚಿಕ್ಕಮಗಳೂರು 5.2ಮಿ.ಮೀ., ವಸ್ತಾರೆ 11.4ಮಿ.ಮೀ., ಜೋಳದಾಳು 12ಮಿ.ಮೀ., ಆಲ್ದೂರು 16.8ಮಿ.ಮೀ., ಕೆ.ಆರ್‌.ಪೇಟೆ 5.1ಮಿ.ಮೀ., ಅತ್ತಿಗುಂಡಿ 18.5ಮಿ.ಮೀ., ಸಂಗಮೇಶ್ವರಪೇಟೆ 3.7ಮಿ.ಮೀ., ಬ್ಯಾರವಳ್ಳಿ 2.2ಮಿ.ಮೀ., ಮಳಲೂರು 4.3, ದಾಸರಹಳ್ಳಿಯಲ್ಲಿ 6.8ಮಿ.ಮೀ. ಮಳೆಯಾಗಿದೆ. ಕಡೂರು ತಾಲೂಕಿನ ಸಖರಾಯಪಟ್ಟಣ 3.3ಮಿ.ಮೀ., ಕೊಪ್ಪ ತಾಲೂಕಿನ ಕೊಪ್ಪ 8.2ಮಿ.ಮೀ., ಹರಿಹರಪುರ 11.4, ಜಯಪುರ 3.8ಮಿ.ಮೀ., ಕಮ್ಮರಡಿ 9.7ಮಿ.ಮೀ., ಬಸರಿಕಟ್ಟೆಯಲ್ಲಿ 10.8ಮಿ.ಮೀ ಮಳೆಯಾಗಿದೆ. ಮೂಡಿಗೆರೆ ತಾಲೂಕಿನ ಮೂಡಿಗೆರೆ 12.2ಮಿ.ಮೀ., ಕೊಟ್ಟಿಗೆಹಾರ 14.8ಮಿ.ಮೀ., ಜಾವಳಿ 10.1, ಗೋಣಿಬೀಡು 12.3ಮಿ.ಮೀ., ಕಳಸ 13.4, ಎನ್‌.ಆರ್‌ಪುರ ತಾಲೂಕಿನ ಎನ್‌.ಆರ್‌.ಪುರ 0.6ಮಿ.ಮೀ., ಬಾಳೆಹೊನ್ನೂರು 3.4, ಶೃಂಗೇರಿ ತಾಲೂಕಿನ ಶೃಂಗೇರಿ 22.8ಮಿ.ಮೀ., ಕಿಗ್ಗಾ 21.8, ಕೆರೆಕಟ್ಟೆಯಲ್ಲಿ 70.4ಮಿ.ಮೀ. ಬುಧವಾರ ಮಳೆ ಸುರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next