Advertisement
ಕಳೆದ 3 ದಿನಗಳ ಹಿಂದೆ ದಿಢೀರನೆ ಭಾರೀ ಮಳೆ ಸುರಿದು ಗುಡ್ಡ ಕುಸಿತವಾಗಿದ್ದಲ್ಲದೆ, ನದಿಯ ನೀರು ಪ್ರವಾಹದಂತೆ ಉಕ್ಕಿ ಹರಿದಿದ್ದರಿಂದಾಗಿ ಗ್ರಾಮಸ್ಥರು ಹೊರಬರಲಾರದೆ ನಡುಗಡ್ಡೆಯಲ್ಲಿ ಸಿಲುಕಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಗ್ರಾಮಸ್ಥರನ್ನು ರಕ್ಷಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ.
Related Articles
Advertisement
ಜಿಲ್ಲಾಡಳಿತದ ಕೋರಿಕೆಗೆ ಸ್ಪಂದಿಸಿದ ರಾಜ್ಯ ಸರ್ಕಾರ ಶನಿವಾರ ಸಂಜೆ ಯೋಧರ ತಂಡವನ್ನು ಮೂಡಿಗೆರೆಗೆ ಕಳಿಸಿತ್ತು. ಭಾನುವಾರ 8 ಗಂಟೆಗೆ ಕಾರ್ಯಾಚರಣೆ ಆರಂಭಿಸಿದ ಯೋಧರ ತಂಡ ಸತತ 5 ರಿಂದ6 ಗಂಟೆ ಕಾರ್ಯಾಚರಣೆ ನಡೆಸಿ ಯೋಧರ ತಂಡ ಆಲೇಖಾನ್ ಹೊರಟ್ಟಿ ಗ್ರಾಮದಲ್ಲಿ ಸಿಲುಕಿದ್ದ ಸುಮಾರು 78 ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಭಾನುವಾರ ಬೆಳಗ್ಗೆ 8 ಗಂಟೆಯಿಂದ ಗುಡ್ಡಗಾಡು ಪ್ರದೇಶದಲ್ಲಿ 4 ರಿಂದ 5 ಕಿಮೀ ರಸ್ತೆ ಮಾಡಿಕೊಂಡು ಆಲೇಖಾನ್ ಹೊರಟ್ಟಿ ಗ್ರಾಮವನ್ನು ಪ್ರವೇಶಿಸಿದ ಯೋಧರ ತಂಡ ರ್ಯಾಕ್ ಮತ್ತು ಹಗ್ಗದ ಸಹಾಯದಿಂದ ಜನರನ್ನು ಸುರಕ್ಷಿತವಾಗಿ ಹ್ರೆರತಂದರು. ವಾಪಸ್ ಬರುವ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದವರು, ವೃದ್ಧರನ್ನು ಯೋಧರು ನಾಲ್ಕೈದು ಕಿಮೀ ಹೆಗಲ ಮೇಲೆ ಹೊತ್ತು ತಂದಿದ್ದಾರೆ. ಯೋಧರಿಂದ ರಕ್ಷಿಸಲ್ಪಟ್ಟ ಜನರನ್ನು ಕೊಟ್ಟಿಗೆಹಾರದಲ್ಲಿ ತೆರೆಯಲಾಗಿರುವ ನಿರಾಶ್ರಿತರ ಕೇಂದ್ರದಲ್ಲಿ ಬಿಡಲಾಗಿದೆ.