Advertisement

ಚಿಕ್ಕಮಗಳೂರು: ಚಾಲಕ-ನಿರ್ವಾಹಕರ ಬೇಜವಾಬ್ದಾರಿ, ವಿದ್ಯಾರ್ಥಿಗಳ ಮೋಜು ಮಸ್ತಿ

12:27 PM Jun 20, 2022 | Team Udayavani |

ಚಿಕ್ಕಮಗಳೂರು: ವಿದ್ಯಾಥಿಗಳಿಗೆ ಬಸ್ಸಿನ ಬಾಗಿಲಿನಲ್ಲಿ ನೇತಾಡುವ ಅಭ್ಯಾಸಗಳು ಸಾಮಾನ್ಯವಾಗಿದೆ. ಆದರೆ ಬಸ್‌ ನ ಚಾಲಕ ಅಥವಾ ನಿರ್ವಾಹಕರು ನಿರ್ಲಕ್ಷ್ಯ ವಹಿಸಿದರೆ ಅಪಾಯ ಖಂಡಿತ.

Advertisement

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಬೆಂಗಳೂರು – ಹೊರನಾಡು ಸರಕಾರಿ ಬಸ್ ನಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು, ಸ್ವಲ್ಪ ಕಾಲು ಅಥವಾ ಕೈ ಜಾರಿದ್ರೆ ಸಾಕು ಜೀವಕ್ಕೆ ದೊಡ್ಡ ಆಪತ್ತು ಎದುರಾಗುವ ಪರಿಸ್ಥಿತಿ ಇದೆ.

ಇತರ ಸರಕಾರಿ ಬಸ್ಸುಗಳಲ್ಲಿ ಸ್ಥಳವಿದ್ದರೂ ವಿದ್ಯಾರ್ಥಿಗಳು ಪ್ರತಿ ದಿನ ಬೆಂಗಳೂರು – ಹೊರನಾಡು ಬಸ್ಸಿನಲ್ಲಿ ಹಿಂಬದಿಯ ಡೋರ್ ನಲ್ಲಿಯೇ ನಿಂತು 20- 30 ಕಿಲೋಮೀಟರ್ ಶಾಲಾ ಕಾಲೇಜುಗಳಿಗೆ ಪ್ರಯಾಣಿಸುತ್ತಾರೆ.

ಸುಂಕಾಸಾಲೆ, ಜಾವಳಿ, ಬಾಳೂರು, ಕೊಟ್ಟಿಗೆಹಾರ ಮುಂತಾದ ಕಡೆಯಿಂದ ಬಸ್ಸಿಗೆ ಹತ್ತುವ ಕೆಲ ವಿದ್ಯಾರ್ಥಿಗಳು ಬಸ್ಸಿನಲ್ಲಿ ಹಿಂಬದಿಯ ಡೋರ್ ನಲ್ಲಿ ನೇತಾಡಿಕೊಂಡು ಪ್ರಯಾಣಿಸುವುದು ಕಂಡುಬಂದಿದೆ. ಬಸ್ಸಿನ ಒಳಗಡೆ ಸ್ಥಳವಿದ್ದರೂ ಬಸ್ಸಿನ ನಿರ್ವಾಹಕರು ಒಳಗೆ ಕಳಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next