Advertisement

Chikkamagaluru; ಮುಳ್ಳಯ್ಯನಗಿರಿಯಲ್ಲಿ ಭಾರೀ ಬೆಂಕಿ: ಆವರಿಸಿದ ದಟ್ಟ ಹೊಗೆ

07:24 PM Feb 11, 2024 | Team Udayavani |

ಚಿಕ್ಕಮಗಳೂರು: ಚಿಕ್ಕಮಗಳೂರು ಅರಣ್ಯ ವ್ಯಾಪ್ತಿಯಲ್ಲಿ ಬರುವ ಚೆನ್ನಗೊಂಡನಹಳ್ಳಿ ಅರಣ್ಯದಲ್ಲಿ ಬೆಂಕಿ ಹತ್ತಿಕೊಂಡಿದ್ದು ಅರಣ್ಯ ಸಂಪತ್ತು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗುತ್ತಿದೆ‌.

Advertisement

ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣ, ಪಶ್ಚಿಮಘಟ್ಟ ಸಾಲು ಮುಳ್ಳ ಯ್ಯನಗಿರಿಗೆ ಹೊಂದಿಕೊಂಡಿ ರುವ ಚೆನ್ನಗೊಂಡನಹಳ್ಳಿ ಪ್ರದೇಶದಲ್ಲಿನ ಅರಣ್ಯ ಪ್ರದೇಶದಲ್ಲಿ ಬೆಂಕಿ ಹತ್ತಿಕೊಂಡಿದ್ದು ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ಹರ ಸಾಹಸ ಪಡುತ್ತಿದ್ದಾರೆ.

ಬೆಂಕಿಯ ಕೆನ್ನಾಲಿಗೆ ಈಗಾಗಲೇ ಸಾಕಷ್ಟು ಅರಣ್ಯ ಪ್ರದೇಶವನ್ನು ವ್ಯಾಪಿಸಿದೆ. ಬಿಸಿಲ ಧಗೆ ಮತ್ತು ಗಾಳಿಯಿಂದ ಬೆಂಕಿಯನ್ನು ನಂದಿಸಲು ಸಾಧ್ಯವಾಗದೆ ಅರಣ್ಯ ಇಲಾಖೆ ಸಿಬಂದಿಗಳು ಪರದಾಡುತ್ತಿದ್ದಾರೆ.

ಕ್ಲಿಷ್ಟಕರ ಪ್ರದೇಶದಲ್ಲಿ ಬೆಂಕಿ‌ ಆವರಿಸಿದ್ದು, ಅಗ್ನಿ ಶಾಮಕ ದಳದ ಸಿಬಂದಿಗಳು ಸ್ಥಳಕ್ಕೆ ತೆರಳಿದ್ದರು ಬೆಂಕಿ ನಂದಿಸಲು ಸಾಧ್ಯವಾಗುತ್ತಿಲ್ಲ, ಕಾಡುಪ್ರಾಣಿ ಗಳು, ಸರಿಸೃಪಗಳು, ಜೀವ ಜಂತುಗಳು, ಜೀವ ಉಳಿಸಿ ಕೊಳ್ಳಲು ಹರಸಾಹಸ ಪಡುವಂತಾಗಿದೆ.

ಅಮೂಲ್ಯ ಔಷಧಗುಣವುಳ್ಳ ಸಸ್ಯ ಸಂಪತ್ತು, ಮರಗಿಡಗಳು ಈಗಾಗಲೇ ಬೆಂಕಿಗೆ ಆಹುತಿ ಯಾಗಿವೆ. ಪ್ರವಾಸಿಗರು ಮಾಡಿದ ಕಿಡಿ ಗೇಡಿತನದಿಂದ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಿದೆ ಎನ್ನ ಲಾಗುತ್ತಿದ್ದು, ಕಾಡಾನೆಗಳ ಹಿಂಡು ಜಿಲ್ಲೆಯಲ್ಲಿ ಬೀಡು ಬಿಟ್ಟಿವೆ, ಚಿಕ್ಕೊಳಲೆಯಲ್ಲಿ ಬೀಡು ಬಿಟ್ಟಿರುವ ಆನೆಗಳು ಸ್ಥಳದಿಂದ ಕದಲುತ್ತಿಲ್ಲ, ಮತ್ತೊಂದು ಕಡೆ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ಹೈರಾಣಾಗಿದ್ದಾರೆ.
ಬೆಂಕಿಯ ಕೆನ್ನಾಲಿಗೆ ರಸ್ತೆ ಬದಿಯಲ್ಲೂ ವ್ಯಾಪಿಸಿರುವು ದರಿಂದ ಭಾನುವಾರ ರಜಾ ದಿನದಂದು ಮುಳ್ಳಯ್ಯನಗಿರಿ ಪ್ರದೇಶಕ್ಕೆ ತೆರಳಿದ್ದ ಪ್ರವಾಸಿಗರು ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ವಾಹನಗಳು ಜಾಮ್ ಆಗಿವೆ. ಅಗ್ನಿ ಶಾಮಕ‌ದಳದ ಸಿಬಂದಿಗಳು ಬೆಂಕಿ ನಂದಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ.

Advertisement

‘ಪ್ರವಾಸಿಗರು ಮಾಡಿರುವ ಕೀಡಿಗೇಡಿತನದಿಂದ ಪಶ್ಚಿಮ ಘಟ್ಟ ಪ್ರದೇಶದ ಮುಳ್ಳಯ್ಯನ ಗಿರಿ ಸಮೀಪದ ಚೆನ್ನಗೊಂಡ ನಹಳ್ಳಿ ಪ್ರದೇಶದಲ್ಲಿ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಿದೆ. ದುರ್ಗಮ ಪ್ರದೇಶವಾಗಿರುವು ದರಿಂದ ಬೆಂಕಿ ನಂದಿಸಲು ಕಷ್ಟವಾಗುತ್ತಿದೆ. ಗಾಳಿ ಮತ್ತು ಒಣಗಿದ ಮರಗಳ ಎಲೆಗಳಿಂದ ಬೆಂಕಿ ಸಾಕಷ್ಟು ವ್ಯಾಪಿಸುತ್ತಿದೆ ಎಂದು ಹೆಸರು ಹೇಳಲಿಚ್ಚಿಸದ ಸಿಬಂದಿ ತಿಳಿಸಿದರು.

ಒಂದು ಕಡೆ ಕಾಡಾನೆಗಳ ನಿಯಂತ್ರಣ ಅವುಗಳ ಚಲನ ವಲನ ನಿಗಾ ಇಡಬೇಕು. ಮತ್ತೊಂದು ಕಡೆ ಯಾರೋ ಮಾಡಿರುವ ಕಿಡಿಗೇಡಿ ಕೃತ್ಯ ದಿಂದ ಬೆಂಕಿ ಹತ್ತಿದ್ದು ಬೆಂಕಿ ನಂದಿಸುವ ಕಾರ್ಯವನ್ನು ಮಾಡಬೇಕಿದ್ದು ಹೈರಾಣಾಗಿ ಹೋಗಿದ್ದೇವೆಂದು ತಮ್ಮ ಅಳಲು ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next