ಕೊಟ್ಟಿಗೆಹಾರ: ಚುನಾವಣೆ ಹತ್ತಿರ ಬರುತ್ತಿದ್ದಂತೆ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲೇ ಮತದಾನ ಬಹಿಷ್ಕಾರದ ಕೂಗು ಮತ್ತೆ ಮುಂದುವರೆದಿದೆ.
ಮೂಲಭೂತ ಸೌಕರ್ಯ ನೀಡುವಂತೆ ಆಗ್ರಹಿಸಿ ಬಿದರುತಳ, ಮಧುಗುಂಡಿ, ದುರ್ಗದಹಳ್ಳಿ ಗ್ರಾಮದ ಅತಿವೃಷ್ಟಿ ನಿರಾಶ್ರಿತರಿಂದ ಮತದಾನ ಬಹಿಷ್ಕರಿಸುವುದಾಗಿ ಹೇಳಿದ್ದಾರೆ.
2019ರಲ್ಲಿ ಸುರಿದ ಧಾರಾಕಾರ ಮಳೆಗೆ ಮಧುಗುಂಡಿ, ದುರ್ಗದಹಳ್ಳಿ, ಬಿದರುತಳ ಗ್ರಾಮದಲ್ಲಿ ಭೂ ಕುಸಿತವಾಗಿತ್ತು, ಗ್ರಾಮಕ್ಕೆ ಗ್ರಾಮಗಳೇ ಗುರುತು ಸಿಗದಂತೆ ಕೊಚ್ಚಿ ಹೋಗಿತ್ತು ಈ ವೇಳೆ ನಿರಾಶ್ರಿತರಿಗೆ ಬಣಕಲ್ ಬಳಿ ಜಾಗದ ವ್ಯವಸ್ಥೆ ಮಾಡಿದ್ದ ಜಿಲ್ಲಾಡಳಿತ ಯಾವುದೇ ಮೂಲಭೂತ ಸೌಕರ್ಯ ಒದಗಿಸಿರಲಿಲ್ಲ ಅಂದಿನಿಂದ ಇಂದಿನವರೆಗೆ ಬದುಕಿಗಾಗಿ ಹೋರಾಟ ನಡೆಸುತ್ತಿಯುವ ಗ್ರಾಮಸ್ಥರು ಮೂಲಭೂತ ಸೌಕರ್ಯ ಒದಗಿಸದಿದ್ದಲ್ಲಿ ಮುಂದಿನ ಚುನಾವಣೆಗೆ ಮತದಾನ ಬಹಿಷ್ಕರಿಸುವುದಾಗು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಆಂಧ್ರ ಪ್ರದೇಶ ರಾಜ್ಯಕ್ಕೆ ನೂತನ ರಾಜಧಾನಿ ಘೋಷಿಸಿದ ಸಿಎಂ ಜಗನ್ ಮೋಹನ್ ರೆಡ್ಡಿ