Advertisement

Chikkamagaluru: ಭಾರೀ ಮಳೆಗೆ ಮನೆ ಮುಂದೆಯೇ ಭೂಮಿ ಕುಸಿದು ಮನೆ ಗೋಡೆಗಳು ಬಿರುಕು

12:12 PM Oct 16, 2024 | Team Udayavani |

ಚಿಕ್ಕಮಗಳೂರು: ಕಾಫಿನಾಡಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಭಾರೀ ಮಳೆಗೆ ಮನೆ ಮುಂದೆಯೇ ಭೂಮಿ ಕುಸಿದ ಘಟನೆ ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮದಲ್ಲಿ ಅ.16ರ ಬುಧವಾರ ನಡೆದಿದೆ.

Advertisement

ಭಾರೀ ಮಳೆಗೆ ಮನೆ ಮುಂದೆಯೇ ಭೂಮಿ ಕುಸಿದ ಪರಿಣಾಮ ಮನೆಯ ಗೋಡೆಗಳು ಬಿರುಕು ಬಿಟ್ಟಿದೆ.

ಲೀಲಾ ಎಂಬ ಅಂಗವಿಕಲೆಗೆ ಸೇರಿದ ಮನೆ ಇದಾಗಿದ್ದು, ಪತಿ ಸಾವನ್ನಪ್ಪಿದ ಬಳಿಕ ಇವರು ಏಕಾಂಗಿಯಾಗಿ ಬದುಕುತ್ತಿದ್ದರು ಎಂದು ತಿಳಿದು ಬಂದಿದೆ.

ಲೀಲಾ ಅವರ ಮನೆ ಬಿದ್ದು 2 ದಿನವಾದರೂ ಇನ್ನೂ ಯಾವ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಲಿಲ್ಲ. ಮತ್ತಷ್ಟು ಧರೆ ಕುಸಿದರೆ ಇಡೀ ಮನೆಯೇ ಬಿದ್ದು ಹೋಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next