ಚಿಕ್ಕಮಗಳೂರು: ಚಿಕ್ಕಮಗಳೂರು: ವೈದ್ಯನ ತೋಟ ಕಾರ್ಮಿಕನ ಮೇಲೆ ಪಕ್ಕದ ತೋಟ ಕಾರ್ಮಿಕರು ಹಲ್ಲೆ ನಡೆಸಿದ್ದು, ಘಟನೆ ವಿಚಾರಿಸಲು ತೆರಳಿದ್ದ ವೈದ್ಯನ ಮೇಲೆ ಕಾರ್ಮಿಕರು ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಕಕೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೇಲ್ಪಾಲ್‌ನಲ್ಲಿ ಘಟನೆ ನಡೆ ದಿದೆ.
ವೈದ್ಯ ಗಣೇಶ್ ತೋಟದಲ್ಲಿ ಕೂಲಿ ಕಾರ್ಮಿಕ ಕೆಲಸ ನಿರ್ವಹಿಸುತ್ತಿದ್ದ ವೇಳೆ ಪಕ್ಕದ ತೋಟದ (ಸ್ವಾಗತ್ ಎಂಬುವರ ತೋಟದ) ಕಾರ್ಮಿಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಕಾರ್ಮಿಕ ತಕ್ಷಣ ವೈದ್ಯ ಗಣೇಶ್‌ಗೆ ವಿಷಯ ಮುಟ್ಟಿಸಿದ್ದಾರೆ. ಘಟನೆ ವಿಚಾರಿಸಿ ಹಲ್ಲೆಗೊಳಗಾದ ಕಾರ್ಮಿಕನಿಗೆ ಚಿಕಿತ್ಸೆ ನೀಡಲು ತೆರಳಿದ್ದ ವೈದ್ಯನ ಮೇಲೂ ಪಕ್ಕದ ತೋಟದ ಕಾರ್ಮಿಕರು ಹಲ್ಲೆ ನಡೆಸಿದ್ದಾರೆ.
ವೈದ್ಯನಿಗೆ ಚಾಕುವಿನಿಂದ ಇರಿಯಲು ಮುಂದಾಗಿದ್ದು ಈ ವೇಳೆ ವೈದ್ಯರ ಕೈಗೆ ಗಾಯಗಳಾಗಿವೆ. ಬಿದ್ದ ರಭಸಕ್ಕೆ ವೈದ್ಯರ ಕಾಲಿಗೂ ಪೆಟ್ಟು ಬಿದಿದ್ದು, ತಕ್ಷಣ ಬಾಳೆಹೊನ್ನೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಶೃಂಗೇರಿ ಪ್ರವಾ ಸದಲ್ಲಿದ್ದು, ವೈದ್ಯನ ಮೇಲೆ ಹಲ್ಲೆ ನಡೆದಿರುವ ಘಟನೆ ತಿಳಿಯುತ್ತಿದ್ದಂತೆ ಬಾಳೆಹೊನ್ನೂರು ಸಾರ್ವಜನಿಕ ಆಸ್ಪತ್ರೆಗೆ ತೆರಳಿ ವೈದ್ಯರ ಆರೋಗ್ಯ ವಿಚಾರಿಸಿದ್ದಾರೆ. ಹಲ್ಲೆ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀದ್ದಾರೆ. ವೈದ್ಯರ ಮೇಲಿನ ಹಲ್ಲೆ ಘಟನೆ ಸಂಬAಧ ಬಾಳೆಹೊನ್ನೂರು ಪೊ ಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Thirthahalli;ಅವನೇನೂ ಮಾಡಿಲ್ಲ,ಸುಮ್ಮನೆ ಸಿಕ್ಕಿಸಿದ್ದಾರೆ:ಆರಾಫತ್ ಅಲಿ ತಂದೆ ಹೇಳಿಕೆ