ಚಿಕ್ಕಮಗಳೂರು: ಪಟಾಕಿ ಸಿಡಿದು ಯುವಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಸುಣ್ಣದಹಳ್ಳಿಯಲ್ಲಿ ನಡೆದಿದೆ.
ಮೃತ ಯುವಕನನ್ನು ಸುಣ್ಣದಹಳ್ಳಿಯ ಪ್ರದೀಪ್ (30) ಎನ್ನಲಾಗಿದೆ.
ದೀಪಾವಳಿ ಸಂದರ್ಭದಲ್ಲಿದ್ದ ಪ್ರದೀಪ್ ಹಾಗೂ ಮನೆಮಂದಿ ಅಡಕೆ ಗೋಟು (ಕಲ್ಲು ಆಟಂಬಾಂಬ್) ಬಾಕ್ಸ್ ಪ್ರದೀಪ್ ಖುರ್ಚಿಯ ಕೆಳಗೆ ಇಟ್ಟುಕೊಂಡಿದ್ದರು. ಈ ವೇಳೆ ಬೇರೆ ಪಟಾಕಿಯ ಕಿಡಿ ಸಿಡಿದು ಕಲ್ಲು ಆಟಂಬಾಂಬ್ ಸ್ಫೋಟಗೊಂಡಿದೆ. ಪಟಾಕಿ ಸಿಡಿದ ರಭಸಕ್ಕೆ ಪ್ರದೀಪ್ ನೆಲದಿಂದ 5 ಅಡಿ ಹಾರಿ ಕೆಳಗೆ ಬಿದ್ದಿದ್ದಾರೆ.
ಪಟಾಕಿ ಸ್ಪೋಟದಿಂದ ಪ್ರದೀಪ್ ಜೊತೆಗಿದ್ದ ಮತ್ತೋರ್ವ ಯುವಕ ಸೇರಿದಂತೆ ಮೂವರು ಮಕ್ಕಳಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದೆ. ಅಲ್ಲದೆ ಮನೆಯ ಕಿಟಕಿ ಗಾಜುಗಳು ಪುಡಿಯಾಗಿವೆ.
ಇದನ್ನೂ ಓದಿ:Sirsi: ಜಿಂಕೆಯನ್ನು ಬೇಟೆಯಾಡಿದ ಚಿರತೆ… ಆತಂಕದಲ್ಲಿ ಸ್ಥಳೀಯರು