ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿ ರವಿವಾರ ಕೋವಿಡ್ ಸೋಂಕಿಗೆ ಇಬ್ಬರು ಬಲಿಯಾಗಿದ್ದು , 173 ಮಂದಿಯಲ್ಲಿ ಕಾವಿಡ್ ಸೋಂಕು ದೃಢಪಟ್ಟಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಆರು ಸಾವಿರದ ಗಡಿ ದಾಟಿದೆ, ಇಂದಿನ 173 ಹೊಸ ಪ್ರಕರಣಗಳು ಸೇರಿ ಒಟ್ಟು ಸೋಂಕಿತರ ಸಂಖ್ಯೆ 6066ಕ್ಕೆ ಏರಿಕೆಯಾಗಿದೆ.
ಇಂದಿನ ಸೋಂಕಿತ ಪ್ರಕರಣಗಳಲ್ಲಿ ಚಿಕ್ಕಮಗಳೂರು 62, ಕಡೂರು 46, ತರೀಕೆರೆ 35, ಮೂಡಿಗೆರೆ 21, ಕೊಪ್ಪ 4, ಶೃಂಗೇರಿ 3, ಎನ್.ಆರ್.ಪುರದಲ್ಲಿ 2 ಪ್ರಕರಣಗಳು ದಾಖಲಾಗಿದೆ.
ಇದನ್ನೂ ಓದಿ:ಮದುವೆಯಾದ 15ದಿನಕ್ಕೆ ಪತಿ ಆತ್ಮಹತ್ಯೆ: ಜ್ಯೂಸ್ ತರುವ ನೆಪದಲ್ಲಿ ಮಾಲ್ ನಿಂದ ಜಿಗಿದಳು ಪತ್ನಿ
ಕೋವಿಡ್ ಸೋಂಕಿಗೆ ಇಬ್ಬರು ಸಾವನ್ನಪ್ಪಿದ್ದು ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 100ಕ್ಕೆ ಏರಿಕೆಯಾಗಿದೆ.
ಇದುವರೆಗೆ ಕೋವಿಡ್ ಸೋಂಕಿನಿಂದ 4561 ಬಿಡುಗಡೆಯಾಗಿದ್ದು ಸದ್ಯ 1405 ಮಂದಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.