ಚಿಕ್ಕಮಗಳೂರು : ಕಾಫಿನಾಡಲ್ಲಿ ಕೋವಿಡ್ ಸೋಂಕಿನ ಲಕ್ಷಣ ಮುಂದುವರೆದಿದ್ದು ಶಾಲೆ ಆರಂಭದ ಬಳಿಕ ಇಂದು ಮತ್ತೆ ೭ ಮಂದಿ ಶಿಕ್ಷಕರು ಹಾಗೂ 11 ಮಂದಿ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೂ ಒಟ್ಟು 12 ಶಿಕ್ಷಕರು, 15 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಚಿಕ್ಕಮಗಳೂರಿನಲ್ಲಿ ಕೊರೊನಾ ಆತಂಕ ಹೆಚ್ಚಾಗಿದ್ದು ಪ್ರಾರ್ಥಮಿಕ ಸಂಪರ್ಕದವರನ್ನ ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತಿದೆ ಎಂದಿದ್ದಾರೆ.
ಸೋಂಕು ದೃಢಪಟ್ಟವರಲ್ಲಿ ಬಹುತೇಕ ಮಂದಿ ಎ ಗುಣಲಕ್ಷಣ ಹೊಂದಿರುವರು ಎನ್ನಲಾಗಿದೆ.
ಇದನ್ನೂ ಓದಿ:ಲವ್ ಜಿಹಾದ್ ಅಂತಾರಲ್ಲ… ಯೋಗಿ ಆದಿತ್ಯನಾಥ್ ಮದುವೆ ಆಗಿದ್ದಾನಾ ?: ಸಿ.ಎಂ ಇಬ್ರಾಹಿಂ