Advertisement

Chikkamagaluru: ತೂರಾಡಿಕೊಂಡು ಹೋಗುತ್ತಿದ್ದ ಆಟೋದಿಂದ ಬಿದ್ದ ಡ್ರೈವರ್‌ !

03:21 PM Jul 15, 2023 | Team Udayavani |

ಚಿಕ್ಕಮಗಳೂರು: ವ್ಯಕ್ತಿಯೊಬ್ಬ ಆಟೋದಿಂದ ಬಿದ್ದು, ಎದ್ದು ಆಟೋ ಹುಡುಕಿದ ಘಟನೆ ಮೂಡಿಗೆರೆ ತಾಲೂಕಿನ ಚಂಡಗೋಡು ಗ್ರಾಮದ ರಸ್ತೆಯಲ್ಲಿ ನಡೆದಿದೆ.

Advertisement

ತೂರಾಡಿಕೊಂಡು ಹೋಗುತ್ತಿದ್ದ ಆಟೋದಿಂದ ರಸ್ತೆ ಪಕ್ಕವೇ ಡ್ರೈವರ್‌ ಬಿದ್ದು, ಅಲ್ಲೇ ಮುಂದೆ ಹೋಗಿ ಆಟೋ ಕೂಡಾ ಕಂದಕಕ್ಕೆ ಬಿದ್ದಿದ್ದು, ಆಟೋ ಒಂದ್ಕಡೆ, ವ್ಯಕ್ತಿ ಮತ್ತೊಂದ್ಕಡೆ ಬಿದ್ದ ವಿಡಿಯೋ ಒಂದು ವೈರಲ್‌ ಆಗಿದೆ.

ಆಟೋದಿಂದ ಬಿದ್ದು ನಂತರ ಎದ್ದು ಕೂತ ಡ್ರೈವರ್, ಆಟೋಗಾಗಿ ಹುಡುಕಾಡಿದ್ದಾರೆ. ಆಟೋದಲ್ಲಿ ಡ್ರೈವರ್‌ ಮಾತ್ರವೋ ಅಥವಾ ಬೇರೆ ಯಾರಾದ್ರು ಇದ್ರೋ, ಇಲ್ವೋ, ಇದ್ರೆ ಅವರ ಕಥೆ ಬೇರೆಯೇ ಆಗಿರುತ್ತದೆ.

ಎದುರಿನಿಂದ ಮತ್ತೊಂದು ವಾಹನ ಬಂದಿದ್ರೆ ಗ್ಯಾರಂಟಿ ಅಪಘಾತ ಸಂಭವಿಸುತ್ತಿತ್ತು ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next