Advertisement
ನಿರಾಶ್ರಿತರಿಗೆ ದಾನಿಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ನೀಡುವ ಅಗತ್ಯ ವಸ್ತುಗಳನ್ನು ಸ್ವೀಕರಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಶೇಷ ಸ್ವೀಕೃತಿ ಕೇಂದ್ರ ತೆರೆಯಲಾಗಿದೆ. ಸ್ವೀಕೃತಿ ಕೇಂದ್ರ ಐವರು ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಕೇಂದ್ರವು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹಾಗೂ ಅಪರ ಜಿಲ್ಲಾಧಿಕಾರಿ ಡಾ.ಕುಮಾರ್ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದೆ.
Related Articles
Advertisement
ನೆರವು ಸ್ವೀಕೃತಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಎಇಇ ಭಾಸ್ಕರ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿದ್ದು, ಅವರೊಂದಿಗೆ ಸಂತೋಷ್, ದತ್ತಾತ್ರಿ, ಚೇತನ್, ಹಾಲೇಶ್ ಹಗಲು ರಾತ್ರಿ ದಾನಿಗಳು ನೀಡಿದ ನೆರವನ್ನು ಸ್ವೀಕರಿಸಿ ನಿರಾಶ್ರಿತರ ಕೇಂದ್ರಗಳಿಗೆ ಕಳಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬ ದಾನಿ ನೀಡಿದ ನೆರವಿಗೆ ಸ್ವೀಕೃತಿ ಪತ್ರ ನೀಡಿ ಪಡೆದುಕೊಳ್ಳಲಾಗುತ್ತಿದೆ.
ಇದು ಜಿಲ್ಲಾಡಳಿತದಿಂದ ನಡೆಯುತ್ತಿದ್ದರೆ ಇನ್ನೂ ಅನೇಕರು ಗ್ರಾಮದ ಮುಖ್ಯಸ್ಥರು ಸಂಘ, ಸಂಸ್ಥೆಗಳು ದಾನಿಗಳು ನೇರವಾಗಿ ನೆರೆ ಪೀಡಿತ, ಗುಡ್ಡ ಕುಸಿತದಿಂದ ನಿರಾಶ್ರಿತರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಮಳೆಯಿಂದ ಎಲ್ಲವನ್ನು ಕಳೆದುಕೊಂಡ ಮಲೆನಾಡಿನ ಜನತೆಗೆ ಭರಪೂರ ನೆರವಿನ ಹಸ್ತ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ನೋಡಲ್ ಅಧಿಕಾರಿ ಭಾಸ್ಕರ್, ಜಿಲ್ಲೆ ಹಾಗೂ ನೆರೆಯ ಜಿಲ್ಲೆಯಿಂದ ಅಪಾರ ಪ್ರಮಾಣದಲ್ಲಿ ಅಗತ್ಯ ವಸ್ತುಗಳ ನೆರವು ಬರುತ್ತಿದೆ. ಅದನ್ನು ಸ್ವೀಕರಿಸಿ ನಿರಾಶ್ರಿತರ ಕೇಂದ್ರಗಳಿಗೆ ಕಳಿಸಿಕೊಡಲಾಗುತ್ತಿದೆ. ಆ.14ರ ಮಧ್ಯರಾತ್ರಿ ಉಡುಪಿಯಿಂದ ಒಂದು ಲಾರಿ ಅಗತ್ಯ ವಸ್ತುಗಳನ್ನು ಕಳಿಸಿಕೊಡಲಾಗಿತ್ತು. ಮಧ್ಯರಾತ್ರಿಯೇ ಅದನ್ನು ಸ್ವೀಕರಿಸಿದ್ದೇವೆ. ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.