Advertisement

ರೈತರಿಗೆ ವರದಾನವಾದ ಮಳೆ

10:56 PM May 03, 2021 | Team Udayavani |

ಶೃಂಗೇರಿ: ಕಳೆದ ಒಂದು ವಾರದಿಂದ ಬೇಸಿಗೆ ಮಳೆ ಆಗುತ್ತಿದ್ದು, ರೈತರಿಗೆ ವರದಾನವಾಗಿದೆ. ಈ ವರ್ಷ ನಿರೀಕ್ಷೆಗೂ ಮೀರಿ ಜನವರಿಯಿಂದ ಮಳೆಯಾಗಿದ್ದು, ಜನವರಿ ಮತ್ತು ಫೆಬ್ರವರಿಯಲ್ಲಿ ಅಕಾಲಿಕ ಮಳೆ ಸುರಿದಿತ್ತು. ರೈತರು ತೋಟಗಾರಿಕೆ ಬೆಳೆಗಳಿಗೆ ವಿವಿಧ ಜಲಮೂಲದಿಂದ ತೋಟಗಳಿಗೆ ನೀರು ಹಾಯಿಸುತ್ತಿದ್ದರು.

Advertisement

ಮಾರ್ಚ್‌ ಹಾಗೂ ಏಪ್ರಿಲ್‌ನಲ್ಲಿ ತಾಲೂಕಿನ ಬಹುತೇಕ ಭಾಗದಲ್ಲಿ ಸುರಿದ ಮಳೆಯಿಂದ ತೋಟಗಳಿಗೆ ನೀರಿನ ಪೂರೈಕೆ ಮಾಡುವುದು ತಪ್ಪಿದ್ದು, ರೈತರಿಗೆ ಆರ್ಥಿಕ ಹೊರೆಯೂ ಕಡಿಮೆ ಆಗಿದೆ. ಕೆಲಸವೂ ಕಡಿಮೆಯಾಗು ವಂತಾಗಿದೆ. ಸಕಾಲಕ್ಕೆ ಮಳೆ ಬಂದಲ್ಲಿ ಮಾತ್ರ ಕಾಫಿ, ಅಡಕೆ, ಕಾಳುಮೆಣಸಿಗೆ ಅನುಕೂಲವಾಗಲಿದೆ. ಈ ವರ್ಷ ಉತ್ತಮ ಮಳೆಯಿಂದ ಮೆಸ್ಕಾಂಗೆ ವಿದ್ಯುತ್‌ ಉಳಿತಾಯವಾಗಿದೆ. ಇನ್ನು ಕೆಲ ರೈತರು ಡೀಸೆಲ್‌ ಮೋಟಾರ್‌ ಮೂಲಕ ನೀರೆತ್ತುತ್ತಿದ್ದರು.ದಿನ ಬಿಟ್ಟು ದಿನ ಮಳೆ ಬರುತ್ತಿರುವುದನ್ನು ಗಮನಿಸಿ, ಕೆಲವು ರೈತರು ಕಾಫಿತೋಟಕ್ಕೆ ಮುಂಗಾರು ಆರಂಭದ ರಸಗೊಬ್ಬರವನ್ನು ನೀಡಲಾರಂಭಿಸಿದ್ದಾರೆ.

ಭತ್ತದ ಗದ್ದೆ ಉಳುಮೆ: ಬೇಸಿಗೆಯ ಉತ್ತಮ ಮಳೆಯಿಂದ ಭತ್ತದ ಗದ್ದೆ ಹದವಾಗಿದ್ದು, ಗದ್ದೆಯ ಉಳುಮೆ ಆರಂಭಗೊಂಡಿದೆ. ಬೇಸಿಗೆಯಲ್ಲಿ ಉಳುಮೆ ಮಾಡಿ ಹಸಿರೆಲೆ ಗೊಬ್ಬರದ ಬೀಜ ಅಥವಾ ಹುರುಳಿ ಬೀಜ ಬಿತ್ತನೆ ಮಾಡುವುದರಿಂದ ಮುಂಬರುವ ಭತ್ತದ ಫಸಲಿಗೆ ಗೊಬ್ಬರದ ರೂಪದಲ್ಲಿ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಟ್ರಾಕ್ಟರ್‌ ಮೂಲಕ ಉಳುಮೆ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next