Advertisement

ಕೋವಿಡ್‌ ನಿಯಮ ಪಾಲಿಸಿ: ನ್ಯಾ|ನಂಜೇಗೌಡ

10:45 PM Apr 30, 2021 | Team Udayavani |

ತರೀಕೆರೆ: ಪಟ್ಟಣ ಮತ್ತು ಸುತ್ತಮುತ್ತಲ ಪ್ರದೇಶಗಳಿಂದ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದಾರೆ ಎಂಬುದು ಆತಂಕಕಾರಿ ವಿಚಾರ ಮತ್ತು ಅತ್ಯಂತ ಗಂಭೀರವಾದದ್ದು ಕೂಡ. ಜನರ ಹಿತದೃಷ್ಟಿಯಿಂದ ಸರಕಾರ ಅನೇಕ ನಿಯಮಗಳನ್ನು ರೂಪಿಸಿದೆ.

Advertisement

ಅದನ್ನು ಪಾಲಿಸಬೇಕಾಗಿದೆ. ಈ ಮೂಲಕ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕಾಗಿದೆ ಮತ್ತು ನಿಮ್ಮ ಕುಟುಂಬವನ್ನು ಕೂಡ ರಕ್ಷಿಸಬೇಕಾದ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾ ಧೀಶರಾದ ಸಿ. ನಂಜೇಗೌಡ ಹೇಳಿದರು.

ಎಪಿಎಂಸಿ ಆವರಣದಲ್ಲಿ ನಡೆಯುತ್ತಿದ್ದ ಮಾರುಕಟ್ಟೆಗೆ ಭೇಟಿ ನೀಡಿ ರೈತರು, ಸಾರ್ವಜನಿಕರು ಮತ್ತು ವರ್ತಕರನ್ನುದ್ದೇಶಿಸಿ ಅವರು ಮಾತನಾಡಿದರು. ಹಸಿವಿನಿಂದ ಇರುವವರು ಕಂಡು ಬಂದಲ್ಲಿ ಅವರ ಬಗ್ಗೆ ಅಧಿ ಕಾರಿಗಳ ಗಮನಕ್ಕೆ ತನ್ನಿ. ಅದರಿಂದ ಹಸಿವಿನಿಂದ ಬಳಲುತ್ತಿರುವರ ವ್ಯಕ್ತಿಗೆ ಹೊಟ್ಟೆ ತುಂಬಿಸುವ ಕೆಲಸವಾಗುತ್ತದೆ. ಕೊರೊನಾ ಸೋಂಕು ಮಹಾಮಾರಿಯಂತೆ ಹಬ್ಬುತ್ತಿದೆ. ಇದರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾಗಿದೆ. ಜೊತೆಗೆ ಕುಟುಂಬವನ್ನು ರಕ್ಷಣೆ ಮಾಡಿಕೊಳ್ಳಬೇಕಾಗಿದೆ ಎಂದರು. ಮುಖ್ಯಾ ಧಿಕಾರಿ ಮಹಂತೇಶ್‌ ಮಾತನಾಡಿದರು.

ನ್ಯಾಯಾಧಿ  àಶ ರಾಮಮೂರ್ತಿ, ಡಿವೈಎಸ್ಪಿ ಏಗನಗೌಡರ್‌, ತಹಶೀಲ್ದಾರ್‌ ಜಿ.ಗೀತಾ, ಡಾ| ಪ್ರಸನ್ನಕುಮಾರ್‌, ವಕೀಲರ ಸಂಘದ ಅದ್ಯಕ್ಷ ಜಿ.ಎನ್‌. ಚಂದ್ರಶೇಖರ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next