Advertisement

ರಂಗಶೃಂಗೇರಿ ನಾಟಕೋತ್ಸ ವ ಸಮಾರೋಪ

06:45 PM Mar 25, 2021 | Team Udayavani |

ಶೃಂಗೇರಿ: ಆಧುನಿಕ ಮಾನವನ ಪ್ರಕೃತಿ ಮೇಲಿನ ದೌರ್ಜನ್ಯವನ್ನು ಹಕ್ಕಿಗಳ ಕತೆಯ ಮೂಲಕ ತೋರಿಸಲಾಗಿದೆ. ಜಪಾನ್‌ನ ಬುನರುಕು ಶೈಲಿಯ ಗೊಂಬೆ ಆಟವನ್ನು ನಾಟಕದಲ್ಲಿ ಅಳವಡಿಸಿದ್ದು, ಪ್ರದರ್ಶನ ಕಂಡಲೆಲ್ಲಾ ಮೆಚ್ಚುಗೆ ಪಡೆಯುತ್ತಿದೆ ಎಂದು ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ್‌ ಜವಳಿ ಹೇಳಿದರು.

Advertisement

ಮಾನಗಾರಿನ ಜ್ಞಾನಭಾರತಿ ಶಿಕ್ಷಣ ಸಂಸ್ಥೆಯಲ್ಲಿ ಭಾರತೀತೀರ್ಥ ಸಾಂಸ್ಕೃತಿಕ ಮತ್ತು ಜಾನಪದ ಅಧ್ಯಯನ ಕೇಂದ್ರ ಟ್ರಸ್ಟ್‌, ಜೆ.ಸಿ.ಐ ಮತ್ತು ಜ್ಞಾನಭಾರತಿ ಶಿಕ್ಷಣ ಸಂಸ್ಥೆಯ ಸಹಕಾರದೊಂದಿಗೆ ಏರ್ಪಡಿಸಿದ್ದ ರಂಗಶೃಂಗೇರಿ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ನಾ ಡಿಸೋಜರವರ ಹಕ್ಕಿಗೊಂದು ಗೂಡುಕೊಡಿ ಕಾದಂಬರಿಯ ಆಧರಿಸಿ ಸಿದ್ಧಪಡಿಸಿದ ಈ ನಾಟಕವಾಗಿದೆ. ಶಿವಮೊಗ್ಗ ರಂಗಾಯಣವು ನಿರ್ಮಿಸಿರುವ ಹಕ್ಕಿ ಕತೆ ನಾಟಕವು ಕನ್ನಡ ರಂಗಭೂಮಿಯಲ್ಲಿ ಒಂದು ಮೈಲಿಗಲ್ಲು ಸ್ಥಾಪಿಸಲಿದ್ದು, ಮಹತ್ವದ ನಾಟಕವಾಗಿ ಮೂಡಿಬರುತ್ತಿದೆ. ಬೇಗಾರ್‌ರೊಂದಿಗೆ ಮೂರು ದಶಕದ ರಂಗ ಸಾಂಗತ್ಯ ಹೊಂದಿರುವ ನಾನು ಅವರ ಸಂಘಟನೆಯ ವೈಶಿಷ್ಠ ತೆಯನ್ನು ಬೆರಗುಗಣ್ಣಿನಿಂದ ನೋಡಿದ್ದೇನೆ.

ಕಾರ್ಯಕ್ರಮದ ಸೊಬಗನ್ನು ಗ್ರಾಮೀಣ ಪ್ರದೇಶದಲ್ಲಿ ಸದಾ ಪಸರಿಸುತ್ತಿದೆ ಎಂದರು. ಹಿರಿಯ ಹವ್ಯಾಸಿ ರಂಗಕಲಾವಿದೆ ಪುಷ್ಪಾ ಶ್ರೀಕಾಂತ್‌ ಅವರನ್ನು ರಂಗ ಗೌರವದೊಂದಿಗೆ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿ, ಇಲ್ಲಿ ರಂಗಮಿತ್ರರ ಮೂಲಕ ಹಲವು ಪೌರಾಣಿಕ ಮತ್ತು ಸಾಮಾಜಿಕ ನಾಟಕದಲ್ಲಿ ಭಾವಪೂರ್ಣ ಪಾತ್ರವನ್ನು ಮಾಡುವ ಅವಕಾಶ ಗೃಹಿಣಿಯಾದ ನನಗೆ ದೊರಕಿತ್ತು. ರಂಗಭೂಮಿ ಸೇವೆಗೆ ಅವಕಾಶ ಕಲ್ಪಿಸಿದ ಈ ಊರಿನ ಸಾಂಸ್ಕೃತಿಕ ವಾತಾವರಣ ಮಹಿಳೆಯಾದ ನನಗೆ ದೊರಕಿದ ಸೌಭಾಗ್ಯವಾಗಿದೆ ಎಂದರು. ಜೆ.ಸಿ.ಐ ಅಧ್ಯಕ್ಷ ಎ ಜಿ ಪ್ರಶಾಂತ್‌ ಮಾತನಾಡಿದರು.

ನಂತರ ರಂಗಾಯಣದ ಕಲಾವಿದರು ಪ್ರಸ್ತುತ ಪಡಿಸಿದ ಮಕ್ಕಳ ನಾಟಕ ಹಕ್ಕಿಕಥೆ ಮಾಲತಿ ಸಾಗರ ರಚಿಸಿದ ಈ ನಾಟಕವನ್ನು ಗಣೇಶ್‌ ಮಂದರ್ತಿ ಮತ್ತು ಶ್ರವಣ ಹೆಗ್ಗೊàಡು ನಿರ್ದೇಶಿಸಿದ್ದರು. ಸಹ್ಯಾದ್ರಿ ಕಾಡಿನ ಪಕ್ಷಿ ಸಂಕುಲವನ್ನು ಆಧುನಿಕ ಅಭಿವೃದ್ಧಿ ಹೆಸರಿನ ಪ್ರಕೃತಿ ಮೇಲಿನ ಅತ್ಯಾಚಾರವು ಕಾಡುವ ಕತೆಯನ್ನು ನಾಟಕ ಒಳಗೊಂಡಿತ್ತು. ಒಂದೊಂದೆ ಅಭಿವೃದ್ಧಿ ಹೆಸರಿನ ನಿಸರ್ಗ ದೌರ್ಜನ್ಯದಿಂದ ಹಕ್ಕಿಗಳ ಕುಟುಂಬ ವಲಸೆ ಹೋಗುತ್ತ ಕಷ್ಟಪಡುವ ದೃಶ್ಯಗಳನ್ನು ಕಲಾವಿದರು ಚೆನ್ನಾಗಿ ಕಟ್ಟಿಕೊಟ್ಟರು.

Advertisement

ಕೊನೆಯಲ್ಲಿ ಪ್ರಕೃತಿಯೇ ಮಾನವನ ವಿರುದ್ಧ ತಿರುಗಿ ಬಿದ್ದು ಮನುಷ್ಯನ ಪಶ್ಚಾತಾಪಕ್ಕೆ ಕಾರಣವಾಗುವ ಮನೋಜ್ಞ ಕತೆ ಸಮಕಾಲಿನ ಜಗತ್ತಿನ ಸಮಸ್ಯೆಯೊಂದನ್ನು ಪರಿಣಾಮಕಾರಿಯಾಗಿ ಮೂಡಿಸಿತು.

ಓದಿ : ಕೇರಳ ಅಖಾಡ: ಸೋಲಿಲ್ಲದ ಸರದಾರ…12ನೇ ಬಾರಿಯೂ ಚಾಂಡಿ ದಾಖಲೆಯ ಜಯ ಸಾಧಿಸುತ್ತಾರಾ?

Advertisement

Udayavani is now on Telegram. Click here to join our channel and stay updated with the latest news.

Next