Advertisement

ಸಂಸ್ಕೃತಿ ರಕ್ಷಣೆಯಲ್ಲಿ ಮ್ಯಾಸಬೇಡರ ಕೊಡುಗೆ ದೊಡ್ಡದು

06:31 PM Feb 08, 2021 | Team Udayavani |

ಚಳ್ಳಕೆರೆ: ನಾಯಕ ಸಮುದಾಯವೂ ಸೇರಿದಂತೆ ಎಲ್ಲಾ ಸಮುದಾಯಗಳು ಉತ್ತಮ ಬದುಕಿನತ್ತ ಹೆಜ್ಜೆ ಇಡಲು ನೂರಾರು ವರ್ಷಗಳ ಹಿಂದೆ ನಮ್ಮನ್ನು, ನಮ್ಮ ಸಂಸ್ಕೃತಿಯನ್ನು ಕಾಪಾಡಿದ ಪೂರ್ವಜರ ತ್ಯಾಗದ ಫಲವೇ ಕಾರಣ. ಸಂಸ್ಕೃತಿ ರಕ್ಷಣೆಗೆ ವಿಶೇಷವಾಗಿ ಮ್ಯಾಸಬೇಡರ ಕೊಡುಗೆ ದೊಡ್ಡದು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.

Advertisement

ಇಲ್ಲಿನ ವಾಲ್ಮೀಕಿ ಸಮುದಾಯ ಭವನದಲ್ಲಿ ಭಾನುವಾರ ಲೇಖಕ, ಹಿರಿಯ ಕಲಾವಿದ ಪಿ. ತಿಪ್ಪೇಸ್ವಾಮಿ ರಚಿಸಿದ “ಮ್ಯಾಸಬೇಡರ ಮೌಖೀಕ ಕಥನಗಳು’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಮ್ಯಾಸಬೇಡರು ವಾಲ್ಮೀಕಿ ಸಮುದಾಯದ ಅಗ್ರಗಣ್ಯರಾಗಿದ್ದಾರೆ. ಯುವ ಪೀಳಿಗೆ ಮ್ಯಾಸಬೇಡರ ಕಾರ್ಯ ದಕ್ಷತೆಯ ಬಗ್ಗೆ ಹೆಚ್ಚು ತಿಳಿದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಪಿ. ತಿಪ್ಪೇಸ್ವಾಮಿ ಮ್ಯಾಸಬೇಡರ ಮೌಖೀಕ
ಕಥನಗಳು ಕೃತಿ ರಚಿಸಿದ್ದಾರೆ ಎಂದರು.

ಮಾಜಿ ಶಾಸಕ ಎಸ್‌. ತಿಪ್ಪೇಸ್ವಾಮಿ ಮಾತನಾಡಿ, ರಂಗಕಲೆಯೂ ಸೇರಿದಂತೆ ಹಲವಾರು ಕಲೆಗಳ ಬಗ್ಗೆ ಜಾಗೃತಿ ವಹಿಸಬೇಕಿದೆ. ಇತಿಹಾಸದ ಎಲ್ಲಾ ಅಂಶಗಳು ಸತ್ಯ ಮತ್ತು ವಾಸ್ತವಾಂಶಗಳಿಂದ ಕೂಡಿದ್ದು, ಮ್ಯಾಸಬೇಡರ ಮೌಖೀಕ ಕಥನಗಳು ಸಹ ನಾಯಕ ಸಮುದಾಯದ ಹಳೇ
ತಲೆಮಾರಿನ ನಾಯಕರ ಬಗ್ಗೆ ತಿಳಿಸಿಕೊಡುತ್ತವೆ. ಮ್ಯಾಸಬೇಡರು ತಮ್ಮ ವೈಯಕ್ತಿಕ ಬದುಕಿಗಿಂತ ಸಮಾಜದಲ್ಲಿ ಉತ್ತಮ ಬದುಕು ನಡೆಸಬೇಕು
ಎಂಬ ದೃಷ್ಟಿಯಿಂದ ಮ್ಯಾಸಬೇಡರ ಆಚರಣೆಗಳ ಬಗ್ಗೆ ವಿವರಣೆ ನೀಡಲಾಗಿದೆ. ಇದನ್ನು ಓದಿದಂತೆಲ್ಲ ಕುತೂಹಲ ಹೆಚ್ಚಾಗುತ್ತಾ ಹೋಗುತ್ತದೆ. ಅಲ್ಲದೆ ಮ್ಯಾಸಬೇಡರ ತ್ಯಾಗ, ಬಲಿದಾನಗಳ ಬಗ್ಗೆಯೂ ಮಾಹಿತಿ ದೊರೆಯುತ್ತದೆ ಎಮದು ತಿಳಿಸಿದರು.

ಕೃತಿಕಾರ ಪಿ. ತಿಪ್ಪೇಸ್ವಾಮಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಈ ಕೃತಿಯನ್ನು ಹೊರತರುವ ಬಗ್ಗೆ ಸಮುದಾಯ
ಮುಖಂಡರೊಂದಿಗೆ ಸು ದೀರ್ಘ‌ ಚರ್ಚೆ ನಡೆಸಿದ್ದೆ. ಎರಡೂ¾ರು ವರ್ಷಗಳ ನಿರಂತರ ಪರಿಶ್ರಮದ ಫಲವಾಗಿ ಇಂದು ಕೃತಿ ಬಿಡುಗಡೆಯಾಗುತ್ತಿದೆ. ಇಂದಿನ ಯುವ ಪೀಳಿಗೆ ಮ್ಯಾಸಬೇಡರ ಕಾರ್ಯ ಚಟುವಟಿಕೆಗಳ ಬಗ್ಗೆ ಸಂಶೋಧನೆಯ ಜೊತೆಗೆ ಅಧ್ಯಯನವನ್ನೂ
ನಡೆಸಬೇಕು ಎಂಬುದು ಕೃತಿ ರಚನೆಯ ಮೂಲ ಉದ್ದೇಶ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಾನಪದ ವಿದ್ವಾಂಸ ಡಾ| ಮೀರಾಸಾಬಿಹಳ್ಳಿ ಶಿವಣ್ಣ ಮಾತನಾಡಿ, ಬುಡಕಟ್ಟು ಸಮುದಾಯದ ಕಾಡುಗೊಲ್ಲರ ಹಾದಿಯಲ್ಲಿ ಸಾಗುತ್ತಿರುವ ಮ್ಯಾಸಬೇಡರ ನಾಯಕ ಸಮುದಾಯ ಅನೇಕ ವಿಚಾರಗಳಲ್ಲಿ ಸಹಮತ ಹೊಂದಿದೆ. ಜಾನಪದವಿಲ್ಲದೆ ಎರಡೂ ಸಮುದಾಯಗಳು ಹೆಚ್ಚು ಬೆಳಕಿಗೆ ಬರಲು ಸಾಧ್ಯವಿಲ್ಲ. ಎರಡೂ ಸಮುದಾಯಗಳಲ್ಲಿ ಜಾನಪದ ಸೊಗಡು ಅಡಗಿದೆ. ಕಳೆದ ಸುಮಾರು
50 ವರ್ಷಗಳಿಂದ ನಾಯಕ ಸಮುದಾಯದ ಮುಖವಾಣಿಯಾಗಿರುವ ಮ್ಯಾಸಬೇಡರ ಬಗ್ಗೆ ನಿರಂತರ ಸಂಶೋಧನೆ, ಅಧ್ಯಯನ ಆಗಬೇಕಿದೆ
ಎಂದು ಅಭಿಪ್ರಾಯಪಟ್ಟರು.

Advertisement

ಕೃತಿ ಕುರಿತು ಜಾನಪದ ತಜ್ಞ, ಸಹಾಯಕ ಪ್ರಾಧ್ಯಾಪಕ ಡಾ| ಎಸ್‌.ಎಂ. ಮುತ್ತಯ್ಯ, ಪ್ರಾಧ್ಯಾಪಕ ಜಿ.ವಿ. ಅಂಜಿನಪ್ಪ, ಬಿ. ತಿಪ್ಪಣ್ಣ ಮರಿಕುಂಟೆ, ಡಾ| ಡಿ. ಧರಣೇಂದ್ರಯ್ಯ, ಡಾ| ಸಿ.ವಿ.ಜಿ. ಚಂದ್ರು ಮೊದಲಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಎಚ್‌. ಎಂ. ಮಲ್ಲಪ್ಪ ನಾಯಕ, ದುಗ್ಗಾವರ ತಿಪ್ಪೇಸ್ವಾಮಿ, ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಟಿ. ವೀರಭದ್ರಸ್ವಾಮಿ, ಬೆಸ್ಕಾಂ ನಾಗರಾಜು, ಸಿ.ಟಿ. ವೀರೇಶ್‌, ನಿಸರ್ಗ ಗೋವಿಂದರಾಜು, ರಾಮಚಂದ್ರ ನಾಯಕ, ಬಾಳೆಮಂಡಿ ರಾಮದಾಸ್‌, ಜಯರಾಮ್‌, ಶಿವಲಿಂಗಪ್ಪ, ಮ್ಯಾಸಬೇಡರ ಕಿಲಾರಿಗಳು, ದೊರೆಗಳು
ಮೊದಲಾದವರು ಪಾಲ್ಗೊಂಡಿದ್ದರು.

ಓದಿ: ಪಾಲಿಕೆಯ ಕಡತಗಳನ್ನು ಕಚೇರಿಯಿಂದ ಹೊರಗೆ ಕೊಂಡು ಹೋದರೆ ಕ್ರಿಮಿನಲ್ ಕೇಸ್: BBMP ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next