Advertisement

ರಂಗಭೂಮಿಯಿಂದ ವ್ಯಕ್ತಿತ್ವ ವಿಕಸನ

05:49 PM Feb 08, 2021 | |

ಚಿಕ್ಕಮಗಳೂರು: ದೂರದರ್ಶನ ವ್ಯಕ್ತಿಯನ್ನು ಚಿಕ್ಕದಾಗಿ ತೋರಿಸಿದರೆ, ಸಿನಿಮಾ ವ್ಯಕ್ತಿಯನ್ನು ದೊಡ್ಡದಾಗಿ ತೋರಿಸುತ್ತದೆ. ಅದೇ ರಂಗಭೂಮಿ ವ್ಯಕ್ತಿಯನ್ನು ವ್ಯಕ್ತಿಯಾಗಿ ತೋರಿಸುತ್ತದೆ. ಇದು ಗಾತ್ರದಲ್ಲಲ್ಲ. ಆಯಾ ವ್ಯಕ್ತಿಯ ವ್ಯಕ್ತಿತ್ವದಲ್ಲೂ ಕೂಡ ಎಂದು ಬಸವ ಕೇಂದ್ರದ ಡಾ| ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಭಾನುವಾರ ನಗರದ ಬಸವ ಮಂದಿರಲ್ಲಿ ನಾಟಕ ಅಕಾಡೆಮಿ ಬೆಂಗಳೂರು, ಕಲಾಸಂಘ ಚಿಕ್ಕಮಗಳೂರು, ಬಸವತತ್ವ ಪೀಠದ ವತಿಯಿಂದ 5ದಿನಗಳ ಕಾಲ ಆಯೋಜಿಸಿದ್ದ ರಂಗ ಪ್ರಸಾದನ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ಮನೆಮಂದಿ ಎಲ್ಲರಲ್ಲೂ ಕಲೆ ಅಡಿಗಿತ್ತು. ಬೆಳಗ್ಗೆಯಿಂದ ಸಂಜೆವರೆಗೂ ಹೊಲ, ಜಮೀನಿನಲ್ಲಿ ದುಡಿದು ಬಂದ ಅವರು ಮನೆಯಂಗಳಲ್ಲಿ ಜನರನ್ನು ಒಟ್ಟುಗೂಡಿ ಭಜನೆ, ವೀರಗಾಸೆ, ಡೊಳ್ಳುಕುಣಿತ, ಕೋಲಾಟ ಆಡುವ ಮೂಲಕ ಅವರ ಬದುಕಿನ ಬವಣೆಗಳನ್ನು
ಮರೆಯುತ್ತಿದ್ದರು. ಮರುದಿನ ತಮ್ಮ ನೋವುಗಳನ್ನು ಮರೆತು ಹೊಸ ಬದುಕು ಕಾಣುತ್ತಿದ್ದರು ಎಂದರು.

ಇಂದು ದೂರದರ್ಶನದ ಪ್ರಭಾವದಿಂದ ಈ ಎಲ್ಲಾ ಕಲೆಗಳು ಮರೆಯಾಗಿ ನಮ್ಮೊಳಗಿನ ಕಲಾವಿದನನ್ನು ಮರೆತು ಬಿಟ್ಟಿದ್ದೇವೆ. ದೂರದರ್ಶನ
ಸಿನಿಮಾ ರಂಗದವರು ಮಾತ್ರ ಕಲಾವಿದರು ನಾವು ಕಲಾವಿದರಲ್ಲ ಎಂಬ ಭಾವನೆ ನಮ್ಮಲಿ ಬಂದು ಬಿಟ್ಟಿದೆ ಎಂದು ತಿಳಿಸಿದರು.

ಕಲೆ ಪ್ರರ್ಶನಕ್ಕಿಂತ ಹೆಚ್ಚಾಗಿ ಮನುಷ್ಯ ತನನ್ನು ತಾನು ಸಮಾಧಾನ ಮಾಡಿಕೊಳ್ಳಲು. ತನ್ನ ಕಷ್ಟಗಳನ್ನು ಮರೆಯಲು ಬಳಕೆ ಮಾಡಿಕೊಳ್ಳುತ್ತಿದ್ದ. ಮದುವೆ, ಕೃಷಿ ಕೆಲಸದಲ್ಲಿ ತನ್ನೊಳಗಿನ ಕಲೆ ಪ್ರದರ್ಶಿಸುತ್ತಿದ್ದ ಎಂದು ಹಿಂದಿನ ಕಾಲದಲ್ಲಿನ ಕಲೆಗಳನ್ನು ಮೆಲುಕು ಹಾಕಿದರು.

Advertisement

ರಂಗಭೂಮಿಯಲ್ಲಿ ಪ್ರಸಾದನ ಅಪರೂಪದ ಪ್ರಕ್ರಿಯೆ. ಓರ್ವ ಕಲಾವಿದ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಲು ಪ್ರಸಾದನವು ಒಂದು ಭಾಗ. ಕಲಾವಿದ ಪಾತ್ರ, ಆತನ ವ್ಯಕ್ತಿತ್ವ, ಪಾತ್ರಕ್ಕೆ ತಕ್ಕಂತೆ ಆತನ ಹಾವಭಾವ ಅದ್ಭುತವಾಗಿ ಮೂಡಿಬರಲು ಪ್ರಸಾದನ ಬಹುಮುಖ್ಯ ಪಾತ್ರ ನಿರ್ವಹಿಸುತ್ತದೆ ಎಂದರು.

ನಗರಸಭೆ ಮಾಜಿ ಸದಸ್ಯ, ಕಲ್ಯಾಣ ನಗರ ಸಾಹಿತ್ಯ ವೇದಿಕೆ ಅಧ್ಯಕ್ಷ ಎಚ್‌.ಡಿ. ತಮಯ್ಯ ಮಾತನಾಡಿ, ಮೊಬೈಲ್‌ ಮತ್ತು ಟಿ.ವಿ ಪ್ರಭಾವಳಿಯಿಂದ ರಂಗಭೂಮಿ ಸೊರಗಿದೆ. ಆದರೆ, ಮೂಲ ಕಲೆ ಸಿನಿಮಾ ಅಥವಾ ಧಾರಾವಾಹಿಗಳಲ್ಲ ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ತಿಳಿಸಿದರು.

ಕಲ್ಕಟ್ಟೆ ಪುಸ್ತಕ ಮನೆಯ ಎಚ್‌.ಎಂ. ನಾಗರಾಜ್‌ ಕಲ್ಕಟ್ಟೆ ಮಾತನಾಡಿದರು. ಸಮಾರಂಭದಲ್ಲಿ ಹಿರಿಯ ರಂಗ ಕಲಾವಿದರಾದ ಬಿ.ಎಸ್‌. ಜ್ವಾಲಪ್ಪ, ಯಶವಂತ್‌, ಎಂ.ವೈ. ಮಾಲತೇಶ್‌, ಎ.ಎಸ್‌. ಕೃಷ್ಣಮೂರ್ತಿ, ಶಾಂತಕುಮಾರ್‌ ಇದ್ದರು.

 

ಓದಿ: 51 ಸಾವಿರ ಗಡಿ ತಲುಪಿ ದಾಖಲೆ ಬರೆದ ಷೇರುಪೇಟೆ: ಸೆನ್ಸೆಕ್ಸ್ 617 ಅಂಕ ಜಿಗಿತ, ನಿಫ್ಟಿ 15,000

 

Advertisement

Udayavani is now on Telegram. Click here to join our channel and stay updated with the latest news.

Next