ಚಿಕ್ಕಮಗಳೂರು: ಮಲೆನಾಡಿನ ಹೆಬ್ಬಾಗಿಲಿನಲ್ಲೇ ಮಳೆ ಕೈಕೊಟ್ಟಿದೆ. ಮಳೆಗಾಗಿ ಪ್ರಾರ್ಥಿಸಿ ಮಲೆನಾಡಿನ ಜನರು ಹಿಂದಿನ ಸಂಪ್ರದಾಯಕ್ಕೆ ಮಾರು ಹೋಗುತ್ತಿದ್ದಾರೆ. ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕೆಲವು ಗ್ರಾಮಗಳ ಜನತೆ ಹಿಂದಿನ ಸಂಪ್ರದಾಯ ಆಚರಣೆಗೆ ಮುಂದಾಗಿದ್ದಾರೆ.
ನರಸಿಂಹರಾಜಪುರ ತಾಲೂಕಿನ ಅಳೇಹಳ್ಳಿ, ಹೆನ್ನಂಗಿ, ಬೆಳ್ಳಂಗಿ ಗ್ರಾಮದ ಜನತೆ ಮಳೆಗಾಗಿ ಪ್ರಾರ್ಥಿಸಿ ಪರದೇಶಪ್ಪನ ಮಠದ ಗುರುಗಳ ನೇತೃತ್ವದಲ್ಲಿ ಗಂಗೇಗಿರಿ ಬೆಟ್ಟ ಹತ್ತುತ್ತಿದ್ದಾರೆ. ಕಳೆದ 37 ವರ್ಷಗಳ ಹಿಂದೆ ಇದೇ ರೀತಿ ಮಳೆ ಅಭಾವ ಉಂಟಾಗಿತ್ತು. ಬರದ ಛಾಯೆ ಮೂಡಿತ್ತು.
ಇಂತಹ ವೇಳೆಯಲ್ಲಿ ಇಲ್ಲಿನ ಜನರು ಬೆಟ್ಟ ಹತ್ತಿ ದೇವರದಲ್ಲಿ ಪ್ರಾರ್ಥಿಸಿದ್ದರು. ಗಂಗೇಗಿರಿ ಬೆಟ್ಟ ಹತ್ತಿ ಅಲ್ಲಿ ಪೂಜೆ ಸಲ್ಲಿಸಿದರೇ ಮಳೆ ಬರುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.
ಗಿರಿಯಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಕಳಸದಲ್ಲಿ ಅಲ್ಲಿನ ನೀರು ತಂದು, ಪೂಜೆ ಮಾಡಬೇಕು. 9 ದಿನಗಳ ಕಾಲಮಡಿಯಿಂದ ಇದ್ದು ಪೂಜೆ ಮಾಡಬೇಕು ಎಂಬ ಪ್ರತೀತಿ ಇದ್ದು, ಮಳೆಯಾಗುತ್ತದೆ ಎಂಬ ನಂಬಿಕೆ ಇದೆ. ಈ ನಿಟ್ಟಿನಲ್ಲಿ ಇಲ್ಲಿನ ಜನರು ಮಳೆಗಾಗಿ ಪ್ರಾರ್ಥಿಸಿ ಬೆಟ್ಟ ಏರುತ್ತಿದ್ದಾರೆ.
ಈ ವರ್ಷ ಮಳೆ ಕೈಕೊಟ್ಟಿದೆ. ಮಲೆನಾಡಿನಲ್ಲೇ ಮಳೆ ಕೊರತೆ ಉಂಟಾಗಿದ್ದು, ಜನರು ಆತಂಕಕ್ಕೆ ಒಳಗಾಗಿ ದ್ದಾರೆ. ಬಿತ್ತಿದ ಬೆಳೆ ಕೈ ಸೇರುತ್ತೋ ಇಲ್ಲವೋ ಎಂಬ ಆತಂಕ ಮನೆ ಮಾಡಿದ್ದು, ಹಿಂದಿನ ಸಂಪ್ರದಾಯ ಗಳ ಕಡೆ ಮುಖ ಮಾಡಿದ್ದಾರೆ.
ಇದನ್ನೂ ಓದಿ: Aditya L1 Sun Mission: ಚಂದ್ರಯಾನ- 3 ಯಶಸ್ಸಿನ ಬೆನ್ನಲ್ಲೇ ಸೂರ್ಯನತ್ತ ಮುಖ ಮಾಡಿದ ISRO