Advertisement

ಅಧಿಕಾರಿಗಳಿಂದ ಕಲ್ಲು ಕ್ವಾರಿ ಪರಿಶೀಲನೆ

05:06 PM Feb 06, 2021 | |

ಚಿಕ್ಕಮಗಳೂರು: ಮಲೆನಾಡಿನ ಹೆಬ್ಟಾಗಿಲು ಎಂದು ಖ್ಯಾತಿ ಪಡೆದಿರುವ ಶಿವಮೊಗ್ಗ ಜಿಲ್ಲೆಯ ಹುಣಸೋಡು ಕಲ್ಲುಕ್ವಾರಿಯಲ್ಲಿ ಸ್ಫೋಟ ಪ್ರಕರಣ ಬಳಿಕ ಕಾಫಿನಾಡಿನ ಗಣಿ ಮತ್ತು ಭೂವಿಜ್ಞಾನ ಇಲಾಖೆ ಎಚ್ಚೆತ್ತುಕೊಂಡು ಕಲ್ಲುಕ್ವಾರಿಗಳಲ್ಲಿ ಸ್ಫೋಟಕ ವಸ್ತು ಸಂಗ್ರಹಿ ಸಲಾಗಿದೆಯೇ ಪರವಾನಗಿ ಪಡೆಯಲಾಗಿದೆಯೇ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿ ಕಾರಿಗಳ ತಂಡ ಪರಿಶೀಲನೆಗೆ ಮುಂದಾಗಿದೆ.

Advertisement

ಜಿಲ್ಲೆಯ ತರೀಕೆರೆ ತಾಲೂಕು ಕಲ್ಲುಕ್ವಾರಿಯಿಂದ ಪೊಲೀಸ್‌ ಇಲಾಖೆ ಮತ್ತು ಹಿರಿಯ ಭೂವಿಜ್ಞಾನಿಗಳ ತಂಡ ಪರಿಶೀಲನೆ ಆರಂಭಗೊಳಿಸಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ, ಮೂರು ಮಂದಿ ತಾಂತ್ರಿಕ ಸಿಬ್ಬಂದಿ, ಪೊಲೀಸ್‌ ಇಲಾಖೆ ಠಾಣಾಧಿಕಾರಿ ಹಾಗೂ ಡಿವೈಎಸ್‌ಪಿ ತಂಡದಲ್ಲಿದ್ದರು.

ಕಲ್ಲುಕ್ವಾರಿ ಮತ್ತು ಕ್ರಷರ್‌ಗಳಿಗೆ ಭೇಟಿ ನೀಡಿ ಇಲಾಖೆಯಿಂದ ಅನುಮತಿ ಪಡೆಯಲಾಗಿದೆಯೇ, ಪರವಾನಗಿ ಇದ್ದರೂ ನವೀಕರಣ ಮಾಡಲಾಗಿದೆಯೇ, ಗಣಿಗಾರಿಕೆ ಅಧಿಕೃತವೋ, ಅನಧಿಕೃತವೋ, ಬಂಡೆ ಒಡೆಯಲು ಸೊ#ಧೀಟಕ ವಸ್ತುಗಳನ್ನು ಬಳಕೆ ಮಾಡಲಾಗುತ್ತಿದೆಯೇ, ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಲಾಗಿದೆಯೇ ಎಂದು ಪರಿಶೀಲನೆ ನಡೆಸಿದರು. ಜಿಲ್ಲೆಯಲ್ಲಿ 87 ಕಲ್ಲು ಕ್ವಾರಿ ಇದ್ದು, 30ಕಲ್ಲು ಕ್ವಾರಿ ಎನ್‌ ಒಸಿ ಪಡೆದುಕೊಂಡಿವೆ. ಕೆಲ ಕಾರಣಗಳಿಂದ 22 ಕಲ್ಲುಕ್ವಾರಿ ಸ್ಥಗಿತಗೊಂಡಿವೆ. 10 ಅಲಂಕಾರಿಕಾ ಶಿಲೆ ತಗೆಯಲಾಗುತ್ತಿದೆ. 25 ಜನರು ಎನ್‌ಒಸಿಗೆ ಅರ್ಜಿ ಸಲ್ಲಿಸಿದ್ದಾರೆಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿ  ಕಾರಿ ಎನ್‌.ಎಂ. ವಿಂಧ್ಯಾ ತಿಳಿಸಿದರು. ಜಿಲ್ಲೆಯಲ್ಲಿ 38 ಜಲ್ಲಿ ಕ್ರಷರ್‌ಗಳು ಕಾರ್ಯ ನಿರ್ವಹಿಸುತ್ತಿವೆ. 1 ಕ್ವಾರಿ ಸರ್ಕಾರಿ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಶಿವಮೊಗ್ಗ- ಅರಸೀಕೆರೆ ರಾಷ್ಟ್ರೀಯ ಹೆದ್ದಾರಿ 4ನೇ ಹಂತದ ರಸ್ತೆ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿಗೆ ಜಲ್ಲಿ ಪೂರೈಕೆ ಮಾಡುತ್ತಿದೆ ಎಂದು ತಿಳಿಸಿದರು. ಪರಿಶೀಲನಾ ತಂಡದಲ್ಲಿ
ತರೀಕೆರೆ ಡಿವೈಎಸ್‌ಪಿ ಏಗೇನಗೌಡರ್‌, ಪಿಎಸ್‌ಐ ಲಿಂಗರಾಜ್‌, ಭೂವಿಜ್ಞಾನಿಗಳಾದ ದಯಾನಂದ್‌, ವಸಂತ, ಕಾರ್ತಿಕ ಇದ್ದರು.

ಓದಿ : ಪ್ರತಿಭಟನೆ ನಿರತ ರೈತರು ಭಯೋತ್ಪಾದಕರಲ್ಲ

Advertisement

Udayavani is now on Telegram. Click here to join our channel and stay updated with the latest news.

Next