Advertisement

ಕಡೂರು ಕ್ರೀಡಾಂಗಣಕ್ಕೆ ಹೈಟೆಕ್‌ ಸ್ಪರ್ಶ: ಬೆಳ್ಳಿಪ್ರಕಾಶ್‌

10:30 PM Jul 12, 2021 | Team Udayavani |

ಕಡೂರು: ಡಾ| ಬಿ.ಆರ್‌. ಅಂಬೇಡ್ಕರ್‌ ತಾಲೂಕು ಕ್ರೀಡಾಂಗಣಕ್ಕೆ ಹೈಟೆಕ್‌ ಸ್ಪರ್ಶ ನೀಡಲು ಶಾಸಕ ಬೆಳ್ಳಿಪ್ರಕಾಶ್‌ ಉದ್ದೇಶಿಸಿದ್ದು ಭಾನುವಾರ ಹಲವು ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

Advertisement

ಪಟ್ಟಣದ ಪಪೂ ಕಾಲೇಜು ಆವರಣಕ್ಕೆ ಹೊಂದಿಕೊಂಡಂತೆ ಇರುವ ಈ ತಾಲೂಕು ಕ್ರೀಡಾಂಗಣ ಮೂಲ ಸೌಕರ್ಯಗಳಿಲ್ಲದೆ ಕಾಂಪೌಂಡ್‌ ಮತ್ತು ವಿದ್ಯುತ್‌ ವ್ಯವಸ್ಥೆಗಳಿಲ್ಲದೆ ಕೇವಲ ಒಂದು ಮೈದಾನವಾಗಿ ಉಳಿದಿತ್ತು. ಇದರ ಸಂಪೂರ್ಣ ಆಧುನೀಕರಣಕ್ಕೆ ಶಾಸಕರು ಇದೀಗ ಮುಂದಾಗಿದ್ದಾರೆ. ಮೈದಾನಕ್ಕೆ ಅವಶ್ಯಕವಾಗಿ ಬೇಕಾಗಿದ್ದ ಕಾಂಪೌಂಡ್‌ ನಿರ್ಮಾಣ ಕಾಮಗಾರಿಗೆ ಕೆಲವು ದಿನಗಳ ಹಿಂದೆ ಶಾಸಕರು ಚಾಲನೆ ನೀಡಿದ್ದು ಅದೀಗ ಮುಗಿದಿದೆ.

ಆ ಬಳಿಕ ಸುಮಾರು 9 ಲಕ್ಷ ರೂ. ವೆಚ್ಚದಲ್ಲಿ ಮೈದಾನದ ಸುತ್ತ ಹೈಮಾಸ್ಕ್ ವಿದ್ಯುತ್‌ ದೀಪಗಳನ್ನು ಅಳವಡಿಸಲಾಯಿತು. ಇದರಿಂದ ನಿತ್ಯ ಬೆಳಗ್ಗೆ ಮತ್ತು ಸಂಜೆ ವಾಯುವಿಹಾರ ನಡೆಸುವ ನಾಗರಿಕರಿಗೆ ಅನುಕೂಲವಾಗಿದೆ. ಇದೀಗ ಯುವಜನ ಮತ್ತು ಸೇವಾ ಕ್ರೀಡಾ ಇಲಾಖೆಯ ಸಚಿವ ನಾರಾಯಣ ಗೌಡ ಅವರ ಬಳಿ ಈ ಕ್ರೀಡಾಂಗಣಕ್ಕೆ ವಿವಿಧ ರೀತಿಯ ಆಟಗಳಿಗೆ ಮೂಲ ಸೌಕರ್ಯಗಳನ್ನು ನಿರ್ಮಿಸಲು ಶಾಸಕರು ಮನವಿ ನೀಡಿದ್ದು ಈ ಮನವಿಗೆ ಸಚಿವರು ಸ್ಪಂದಿಸಿ ಮೊದಲ ಹಂತವಾಗಿ 20 ಲಕ್ಷ ರೂ. ಬಿಡುಗಡೆ ಮಾಡಿದ್ದಾರೆ.

ಮೇಲ್ಚಾವಣಿ ವಿಸ್ತರಣೆ, ಆಟಗಾರರಿಗೆ ಪ್ರತ್ಯೇಕ ಡ್ರೆಸ್ಸಿಂಗ್‌ ರೂಂ ನಿರ್ಮಾಣ, 200 ಮೀಟರ್‌ ಅಥ್ಲೆಟಿಕ್‌ ಟ್ರಾಕ್‌ ಹಾಗೂ ಮಗ್ಗುಲಲ್ಲಿಯೆ ನಾಗರೀಕರು ವಾಯುವಿಹಾರ ನಡೆಸಲು ಪಾಥ್‌ ವೇ, ಕಬಡ್ಡಿ, ಖೋ ಖೋ ,ವಾಲಿಬಾಲ್‌, ಪ್ರತ್ಯೇಕ ಅಂಕಣಗಳ ನಿರ್ಮಾಣ, ಷಟಲ್‌ ಕೋರ್ಟ್‌ ನಿರ್ಮಾಣ ಹೀಗೆ ಒಟ್ಟಾರೆ 1 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣ ಸಂಪೂರ್ಣ ನವೀಕರಣವಾಗಲಿದೆ. ಈ ಸಂದರ್ಭ ಶಾಸಕ ಬೆಳ್ಳಿಪ್ರಕಾಶ್‌ ಮಾತನಾಡಿ, ಕ್ರೀಡಾ ಸಚಿವರ ಜೊತೆಯಲ್ಲಿ ತಾವು ಅಭಿವೃದ್ದಿ ಕುರಿತಂತೆ ಪ್ರಸ್ತಾಪಿಸಿದ್ದು ಮೊದಲ ಹಂತದ ಹಣ 20 ಲಕ್ಷ ಹಣ ಬಂದಿದ್ದು ಎರಡನೇ ಹಂತದಲ್ಲಿ 31 ಲಕ್ಷ ಹಣ ಬರಲಿದೆ ಎಂದರು.

ಕಾಮಗಾರಿಗಳು ಹಂತ- ಹಂತವಾಗಿ ನಡೆಯಲಿದ್ದು ಸಚಿವರ ಬಳಿ ಪುನಃ 50 ಲಕ್ಷ ಹೆಚ್ಚುವರಿ ಹಣ ಬಿಡುಗಡೆಗೆ ಬೇಡಿಕೆ ಸಲ್ಲಿಸಿದ್ದು ಅದಕ್ಕೆ ಸಕರಾತ್ಮಕವಾಗಿ ಸಚಿವರು ಸ್ಪಂದಿಸಿದ್ದಾರೆ. ಒಟ್ಟಾರೆ 1 ಕೋಟಿ ರೂ. ವೆಚ್ಚದಲ್ಲಿ ಈ ಕ್ರೀಡಾಂಗಣಕ್ಕೆ ಹೈಟೆಕ್‌ ಸ್ಪರ್ಶ ದೊರೆಯಲಿದೆ ಎಂದರು. ಈಗಾಗಲೇ ಈ ಕ್ರೀಡಾಂಗಣದ ಆವರಣದಲ್ಲಿ ಯೋಗ, ಜಿಮ್‌ ತರಬೇತಿ ನಡೆಯುತ್ತಿದ್ದು ಕಾಂಪೌಂಡ್‌ ನಿರ್ಮಿಸಿರುವುದರಿಂದ ಕ್ರೀಡಾಂಗಣದೊಳಗೆ ಕಾನೂನು ಬಾಹಿರ ಚಟುವಟಿಕೆಗೆ ಕಡಿವಾಣ ಹಾಕಿದಂತಾಗಿದೆ. ಕ್ರೀಡಾಂಗಣವು ಸ್ವತ್ಛವಾಗಿದೆ. ಮುಂದಿನ ದಿನಗಳಲ್ಲಿ ಕಾಮಗಾರಿಗಳು ಮುಕ್ತಾಯವಾದರೆ ಅನೇಕ ಕ್ರೀಡಾ ಪ್ರತಿಭೆಗಳ ತರಬೇತಿಗೆ ಸೂಕ್ತ ವೇದಿಕೆ ಸಿಕ್ಕಂತೆ ಆಗುತ್ತದೆ ಎಂದರು.

Advertisement

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌ ಮಾತನಾಡಿ, ಕೈಗೆತ್ತಿ ಕೊಂಡಿರುವ ಕಾಮಗಾರಿಗಳಿಗೆ ಪುರಸಭೆ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಸಾಧ್ಯವಾದರೆ ಪುರಸಭೆಯ ಸದಸ್ಯರ ಸಭೆಯಲ್ಲಿ ವಿಷಯ ಮಂಡಿಸಿ ಅನುದಾನ ಬಿಡುಗಡೆಗೂ ಪ್ರಯತ್ನಿಸಲಾಗುವುದು. ತಾಲೂಕು ಕ್ರೀಡಾಂಗಣ ಎಲ್ಲಾ ಕ್ರೀಡಾಪಟುಗಳ ತರಬೇತಿ ಕೇಂದ್ರವಾಗಲಿ ಎಂದರು.

ಜಿಲ್ಲಾ ಯುವಜನ ಸೇವಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ, ತಾಲೂಕು ಯುವ ಜನ ಕ್ರೀಡಾ ಅ ಧಿಕಾರಿ ಎಂ. ವೇದಮೂರ್ತಿ, ಪುರಸಭೆ ಉಪಾಧ್ಯಕ್ಷೆ ವಿಜಯ ಚಿನ್ನರಾಜ್‌,ಪುರಸಭೆ ಸದಸ್ಯರಾದ ಯತಿರಾಜ್‌, ಗೋವಿಂದ, ಸಂದೇಶ್‌ಕುಮಾರ್‌, ವಕ್ತಾರ ಶಾಮಿಯಾನ ಚಂದ್ರು, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ರೇವಣ್ಣಯ್ಯ, ಜಿಮ್‌ರಾಜ್‌, ಮುಖ್ಯಾ ಧಿಕಾರಿ ಎಚ್‌.ಎನ್‌. ಮಂಜುನಾಥ್‌, ಗುತ್ತಿಗೆದಾರರಾದ ಶಿವು, ದಿನೇಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next