ಕಡೂರು: ಶ್ರದ್ಧೆ, ಪರಿಶ್ರಮ ಮತ್ತುಪ್ರಾಮಾಣಿಕತೆ ಇದ್ದರೆ ಸಾಧನೆ ಮಾಡಲುಸುಲಭ ಎಂದು ಬೀರೂರಿನ ಹಿರಿಯ ವೈದ್ಯಡಾ| ಎಂ.ಡಿ. ಟೀಕಪ್ಪ ಹೇಳಿದರು.
ಪಟ್ಟಣದ ಸಮೀಪದ ಶರತ್ ಕಣ್ಣಿನ ಆಸ್ಪತ್ರೆಹಾಗೂ ಶರತ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿಭಾನುವಾರ ಆಯೋಜಿಸಿದ್ದ ಸನ್ಮಾನ, ಸ್ವಾಗತಮತ್ತು ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿಅವರು ಮಾತನಾಡಿದರು.
ಅಬ್ದುಲ್ ಕಲಾಂ ಹೇಳುವಂತೆ ಕನಸುಕಾಣುವಾಗ ದೊಡ್ಡ ಕನಸು ಕಾಣಬೇಕುಎಂಬಂತೆ ವಿದ್ಯಾರ್ಥಿಗಳು ಸಾಧನೆ ಮಾಡಲುಕನಸು ಕಾಣಬೇಕು. ಆಗ ನಿಜವಾಗಿಯೂಸಾಧನೆ ಸಾಧ್ಯ. ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿನಿಮ್ಮಂತಹ ಸಾವಿರಾರು ಜನರಿಗೆ ಜೀವನರೂಪಿಸುತ್ತಿರುವ ರಂಗಪ್ಪ ಅವರಂತಹಸಾಧಕರೇ ಜ್ವಲಂತ ಉದಾಹರಣೆ ಎಂದರು.ಡಾ| ಗುರುಮೂರ್ತಿ ಮಾತನಾಡಿ,ಗ್ರಾಮೀಣ ಪ್ರದೇಶದಿಂದ ಬಂದ ರಂಗಪ್ಪಕನಸನ್ನು ಕಟ್ಟಿಕೊಂಡು ವಿಭಿನ್ನವಾಗಿ ಯೋಚಿಸಿಇಂದು ಸಾವಿರಾರು ಅಂದರಿಗೆ ಕಣ್ಣುಗಳನ್ನುನೀಡಿದ್ದಾರೆ. ಸುತ್ತಮುತ್ತಲಿನ ಹಲವಾರುಜಿಲ್ಲೆಗಳಲ್ಲಿ ರಂಗಪ್ಪನವರ ಹೆಸರು ಪ್ರಖ್ಯಾತಿಪಡೆದಿದೆ. ಇಂತಹ ಸಾಧಕರಿಂದ ಕಲಿತ ನಿಮ್ಮಜೀವನ ಸುಖಕರವಾಗಿರಲಿ ಎಂದರು.
ಸಂಸ್ಥೆಯ ಖಜಾಂಚಿ ಹಾಗೂ ಮುಖ್ಯಶಿಕ್ಷಕಿ ಎಚ್.ಸಿ. ಶಶಿಕಲಾ ಮಾತನಾಡಿ,ವಿದ್ಯಾರ್ಥಿಗಳು ಕಲಿಕೆಯ ಅವ ಧಿಯಲ್ಲಿಸುಳ್ಳು, ಕಪಟಗಳನ್ನು ಬಿಟ್ಟು ಪ್ರಾಮಾಣಿಕತೆ,ಸರಳತೆ ಮತ್ತು ನಮ್ಮ ಸಂಸ್ಕೃತಿಯನ್ನುಅಳವಡಿಸಿಕೊಂಡು ಕಲಿಯುವವರುಸಮಾಜದಲ್ಲಿ ಉತ್ತಮ ಸ್ಥಾನ ತಲುಪುತ್ತಾರೆ.ಇದಕ್ಕೆ ನಿದರ್ಶನವೇ ನನ್ನ ಪತಿ ರಂಗಪ್ಪಅವರ ಸಾಧನೆ ಎಂದರು.
ಅತಿಥಿಯಾಗಿದ್ದಚಿಕ್ಕಮಗಳೂರಿನ ಸಮಾಜ ಚಿಂತಕ ಸಾಹಿತಿಎಚ್.ಸಿ. ಮಹೇಶ್ ಮಕ್ಕಳ ಕುರಿತುಹಿತವಚನ ಹೇಳಿದರು. ಪ್ಯಾರಾ ಮೆಡಿಕಲ್‌ಕಾಲೇಜಿನ ಪ್ರಾಚಾರ್ಯ ಹಾಗೂ ವೈದ್ಯ ಡಾ|ಶರತ್ ಆರ್. ಯಜಮಾನ್ ನೂತನವಾಗಿಆಗಮಿಸುತ್ತಿರುವ ಹಾಗೂ ಕೋರ್ಸ್‌ಮುಗಿಸಿ ಹೋಗುತ್ತಿರುವ ವಿದ್ಯಾರ್ಥಿಗಳಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದಆಡಳಿತಾಧಿ ಕಾರಿ ಡಿ.ಆರ್. ರಂಗಪ್ಪ ಜೀವನರೂಪಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
ಓದಿ :
ಚಿತ್ರೋದ್ಯಮಕ್ಕೆ ಯಾಕೆ ನಿರ್ಬಂಧ? ಸರ್ಕಾರವನ್ನು ಪ್ರಶ್ನಿಸಿದ ಸ್ಯಾಂಡಲ್ ವುಡ್ ಸ್ಟಾರ್ಸ್