Advertisement

ಯಲಗುಡಿ-ಸೊಕ್ಕೆ ಶಾಲೆ ರಾಷ್ಟ್ರಮಟ್ಟಕ್ಕೆ ಆಯ್ಕೆ

10:26 PM Jul 01, 2021 | Team Udayavani |

ಚಿಕ್ಕಮಗಳೂರು: ಎನ್‌ಸಿಎಸ್‌ಎಲ್‌ ಹಾಗೂ ಎಸ್‌ಎಲ್‌ಸಿ ಸಿಸ್ಲೆಪ್‌ ಧಾರವಾಡ ಸಹ ಯೋಗದೊಂದಿಗೆ ಉತ್ತಮ ಅಭ್ಯಾಸ ಅಳವಡಿಸಿಕೊಂಡಿರುವ ಶಾಲೆಗಳ ವಿಡಿಯೋ ದಾಖಲೀಕರಣದಲ್ಲಿ ಜಿಲ್ಲೆಯ ಚಿಕ್ಕಮಗಳೂರು ತಾಲೂಕು ಯಲಗುಡಿಗೆ ಸರ್ಕಾರಿ ಶಾಲೆ ಮತ್ತು ತರೀಕೆರೆ ತಾಲೂಕು ಸೊಕ್ಕೆ ಪ್ರೌಢಶಾಲೆ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿವೆ ಎಂದು ಡಯಟ್‌ ಪ್ರಾಂಶುಪಾಲ ಎಚ್‌.ಕೆ. ಪುಷ್ಪಲತಾ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ 10 ಜಿಲ್ಲೆಗಳು ಆಯ್ಕೆಯಾಗಿದ್ದು, ಅದರಲ್ಲಿ ಚಿಕ್ಕಮಗಳೂರು ಜಿಲ್ಲೆಯ 2 ಶಾಲೆಗಳು ಆಯ್ಕೆಯಾಗಿರುವುದು ವಿಶೇಷ ಎಂದ ಅವರು, ಆಯ್ಕೆಯಾದ ಶಾಲೆಗೆ 5 ಸಾವಿರ ರೂ. ಪ್ರೋತ್ಸಾಹಧನ ಮತ್ತು ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಧಾರವಾಡ ವಲಯದ ರಾಜ್ಯ ಶಾಲಾ ನಾಯಕತ್ವ ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣೆ ಸಂಸ್ಥೆ(ಸಿಸ್ಲೆಪ್‌) ಮಾರ್ಗದರ್ಶನದಲ್ಲಿ ಶಾಲೆಯ ಅಭಿವೃದ್ಧಿ ಗುಣಮಟ್ಟದ ಕುರಿತು ವಿಡಿಯೋ ದಾಖಲೆ ಮಾಡಿದ್ದು, ಈ ಎರಡು ಶಾಲೆಗಳು ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತಂದಿವೆ ಎಂದು ಹೇಳಿದರು. ಶಾಲಾಭಿವೃದ್ಧಿ, ಗುಣಮಟ್ಟ ಶಿಕ್ಷಣ, ಶಾಲಾಪರಿಸರ ಶೌಚಾಲಯ, ಸಂಸ್ಕೃತಿ, ಶೈಕ್ಷಣಿಕ ಚಟುವಟಿಕೆ, ತಾಂತ್ರಿಕತೆಯ ಅಳವಡಿಕೆ, ಸಮುದಾಯ ಸಹಭಾಗಿತ್ವ, ಶೈಕ್ಷಣಿಕ ಪ್ರಗತಿ, ಎಸ್‌ಡಿಎಂಸಿ ಸಹಕಾರ, ಶಿಕ್ಷಕರ ಕಾರ್ಯ ಕೌಶಲ್ಯ, ಇಲಾಖೆ ಮೇಲಾಧಿಕಾರಿಗಳ ಸಂದರ್ಶನ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಆರು ನಿಮಿಷಗಳ ವಿಡಿಯೋ ಚಿತ್ರೀಕರಣ ನಡೆಸಲಾಗಿತ್ತು ಎಂದರು.

ಈ ಎರಡು ಶಾಲೆಗಳು ರಾಜ್ಯಮಟ್ಟದಲ್ಲಿ ಆಯ್ಕೆಯಾಗಿ, ರಾಷ್ಟಮಟ್ಟದ ಸ್ಪ ರ್ಧಿಸಲಿದ್ದು, ದೆಹಲಿ ಮಟ್ಟದ ಸಮಿತಿಯೊಂದು ಪರಿಶೀಲನೆ ನಡೆಸಿ ಆಯ್ಕೆಮಾಡಲಿದೆ. ಮತ್ತೋಮ್ಮೆ ವಿಡಿ ಯೋ ದಾಖಲಿಕರಣ ಮಾಡಿ 15ದಿನಗಳಲ್ಲಿ ನೀಡುವಂತೆ ತಿಳಿಸಿದ್ದು ಈ ಶಾಲೆಗಳು ರಾಷ್ಟ್ರಮಟ್ಟದಲ್ಲೂ ಆಯ್ಕೆಯಾಗುವ ವಿಶ್ವಾಸವಿದೆ ಎಂದರು.

ಯಲಗುಡಿಗೆ ಶಾಲೆ ಶಿಕ್ಷಕಿ ಕೆ.ಎಚ್‌. ಗೀತಾ ವಿದ್ಯಾರ್ಥಿಗಳಿಗೆ ಪತ್ರ ಬರೆದು ಯೋಗಕ್ಷೇಮ ವಿಚಾರಿಸಿದ್ದು, ರಾಜ್ಯದ ಗಮನ ಸೆಳೆದಿತ್ತು. ಇದರ ಬೆನ್ನಲ್ಲೆ ಮತ್ತೇ ಶಾಲೆ ಪ್ರಶಂಸೆಗೆ ಕಾರಣವಾಗಿದೆ. ತರೀಕೆರೆ ತಾಲೂಕು ಸೊಕ್ಕೆ ಸರ್ಕಾರಿ ಪ್ರೌಢಶಾಲೆ 34 ವರ್ಷಗಳ ಇತಿಹಾಸ ಹೊಂದಿದ್ದು, ಉತ್ತಮ ಶಿಕ್ಷಣಕ್ಕೆ ಜಿಲ್ಲೆಯಲ್ಲೆ ಹೆಸರುವಾಸಿಯಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಉತ್ತಮ ಫಲಿತಾಂಶ ಪಡೆದುಕೊಂಡಿದೆ

Advertisement

. ಈ ಎರಡು ಶಾಲೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು ಜಿಲ್ಲೆಯ ಜನತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next