Advertisement
ಮಂಗಳವಾರ ನಗರದಲ್ಲಿಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಈ ಬಜೆಟ್‌ನಲ್ಲಿ ಯಾವುದೇಮುಂದಾಲೋಚನೆ ಇಲ್ಲ. ರೈತರು, ಸೈನಿಕರು,ನಿರುದ್ಯೋಗಿ, ಜನಸಾಮಾನ್ಯರ ವಿರೋಧಿಯಾಗಿದ್ದು, ಬಂಡಾವಳಶಾಹಿಗಳಿಗೆಗುತ್ತಿಗೆ ನೀಡಿದಂತಿದೆ. ದೇಶವನ್ನುಸರ್ವೋದಯ ಬದಲಾಗಿಅಂತ್ಯೋದಯದೆಡೆಗೆ ಕೊಂಡೊಯ್ಯವಬಜೆಟ್ ಆಗಿದೆ ಎಂದರು.
ಮುಂಬರುವ ಚುನಾವಣೆಯನ್ನುಗುರಿಯಿರಿಸಿಕೊಂಡು ಕೆಲವು ರಾಜ್ಯಗಳಿಗೆಅನುದಾನ ನೀಡಲಾಗಿದೆ. ಗ್ಯಾಸ್,ಪೆಟ್ರೋಲ್, ಡೀಸೆಲ್ ಸೇರಿದಂತೆ ತೈಲಬೆಲೆ ಏರಿಕೆಯಾಗಿದೆ. ಕೃಷಿ ವಿರೋಧಿ ಕಾಯ್ದೆಗಳ ಬಗ್ಗೆ ಪ್ರಸ್ತಾಪಿಸಿಲ್ಲ. ಇದೊಂದು”ಜೈ ಜವಾನ್, ಜೈ ಕಿಸಾನ್’ ಬದಲಾಗಿ”ಮಾರೋ ಕಿಸಾನ್ ಮಾರೋ ಜವಾನ್’ಎನ್ನುವಂತಿದೆ ಎದು ಟೀಕಿಸಿದರು.
ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದಾಗಿಕಾಫಿ ಅಡಕೆ, ಭತ್ತ, ಮೆಣಸು ಸಹಿತ ಅಪಾರಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದುಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ.ಅ ಧಿಕ ಪ್ರಮಾಣದ ವಿದೇಶಿ ವಿನಿಮಯತಂದು ಕೊಡುವ ಕಾಫಿ ಉದ್ಯಮವನ್ನುನಾಶ ಮಾಡಲು ಕೇಂದ್ರ ಮುಂದಾಗಿದೆ.ಜಿಲ್ಲೆಯ ಸಂಸದರು, ಶಾಸಕರುಸಮಸ್ಯೆಯನ್ನು ಕೇಂದ್ರದಲ್ಲಿ ಚರ್ಚಿಸಿವಿಶೇಷ ಪ್ಯಾಕೇಜ್ ಘೋಷಣೆ ಯಾಕೆತರಲಿಲ್ಲ ಎಂದು ಪ್ರಶ್ನಿಸಿದರು. ಬ್ಯಾಂಕ್, ರೈಲ್ವೆ, ಸೇರಿದಂತೆ ವಿವಿಧಸರ್ಕಾರಿ ಸ್ವಾಮ್ಯದ ಇಲಾಖೆಗಳನ್ನುಖಾಸಗಿಯವರಿಗೆ ಅಡವಿಡುವ ಕೆಲಸಕ್ಕೆಕೇಂದ್ರ ಮುಂದಾಗಿದೆ. ನಿರುದ್ಯೋಗಸಮಸ್ಯೆಯಿಂದಾಗಿ ಯುವಜನತೆಬೇಸತ್ತಿದ್ದಾರೆ. ಸಣ್ಣ ಉದ್ದಿಮೆದಾರರುಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆತಲುಪಿದ್ದಾರೆ. ನರೇಂದ್ರ ಮೋದಿಸರ್ಕಾರ ಈ ಹಿಂದೆ ಪ್ರಣಾಳಿಕೆಯಲ್ಲಿಘೋಷಿಸಿದ ಯಾವುದೇ ಯೋಜನೆಗಳುಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ.ಎಲ್ಲವೂ ಖಾಸಗಿ ಬಂಡವಾಳದಾರರಪರವಾಗಿ ಬಜೆಟ್ ಮಂಡಿಸಲಾಗಿದೆಎಂದರು.
Related Articles
Advertisement
ಓದಿ :ಸೈಬರ್ ಸೆಕ್ಯುರಿಟಿ ಕಾರ್ಯಾಗಾರಕ್ಕೆ ಚಾಲನೆ