ಕಡೂರು : ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರ 68 ನೇ ಜನ್ಮದಿನವನ್ನು ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಅಲ್ಲಲ್ಲಿ ಸಡಗರ- ಸಂಭ್ರಮದಿಂದ ಆಚರಿಸಲಾಯಿತು. 68 ನೇ ವಯಸ್ಸಿಗೆ ಪಾದಾರ್ಪಣೆ ಮಾಡಿದ ದತ್ತ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಮಾಜಿ ಪ್ರದಾನಿ ಎಚ್.ಡಿ.ದೇವೆಗೌಡರ ಮಾನಸ ಪುತ್ರ ಎಂದೇ ಖ್ಯಾತಿ ಪಡೆದಿದ್ದಾರೆ.
ಕಡೂರು ಕ್ಷೇತ್ರದಲ್ಲಿ ಅವರ ಅಭಿಮಾನಿಗಳು, ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ವಿವಿಧ ರೀತಿಯಲ್ಲಿ ದತ್ತ ಅವರ ಜನ್ಮದಿನವನ್ನು ಆಚರಿಸಿದರು. ಪಟ್ಟಣದ ರಾಜೀವ್ ಗಾಂಧಿ ಬಡಾವಣೆಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಯುವ ಮುಖಂಡ ಕೆ.ವಿ. ಮಂಜುನಾಥ್ ಅಭಿಷೇಕ ಮಾಡಿ ನಂತರ ಬೆಣ್ಣೆ ಅಲಂಕಾರ ಮಾಡಿ ದತ್ತ ಅವರ ಕುಟುಂಬಕ್ಕೆ ಆರೋಗ್ಯ ಸಮೃದ್ಧಿ ನೀಡಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದರು. ಪಟ್ಟಣದ ಕುವೆಂಪು ನಗರದ ಸಂತೆ ಮೈದಾನದ ಶ್ರೀ ಅಂತರಘಟ್ಟಮ್ಮ ದೇವಾಲಯದಲ್ಲಿ ದತ್ತ ಅವರ ಹೆಸರಿನಲ್ಲಿ ಪೂಜೆ ಸಲ್ಲಿಸಿದರು.
ರೈಲ್ವೆ ಗೇಟ್ ಬಳಿ ಅವರ ಅಭಿಮಾನಿ ವಿಷ್ಣು ತಮ್ಮ ಬಾಳೆಮಂಡಿಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ಪ್ರತಿಯೊಬ್ಬರಿಗೂ ಬಾಳೆಹಣ್ಣನ್ನು ಉಚಿತವಾಗಿ ನೀಡಿದರು. ಎಂಎಸ್‌ಆರ್ ವೃತ್ತದಲ್ಲಿರುವ ರಸುಲ್ ಎಂಬ ಮುಸ್ಲಿಂ ಕಾರ್ಯಕರ್ತ ತಮ್ಮ ನಾಯಕ ದತ್ತ ಅವರ ಜನ್ಮದಿನವನ್ನು ಜನರಿಗೆ ಬಾದಾಮಿ ಹಾಲು ನೀಡುವ ಮೂಲಕ ವಿಶಿಷ್ಟವಾಗಿ ಆಚರಿಸಿದರು. ಈ ಮದ್ಯೆ ರಾಜ್ಯ ಯುವ ಜನತಾದಳದ ಪ್ರಧಾನ ಕಾರ್ಯದರ್ಶಿ ಸಿ.ಎಚ್. ಪ್ರೇಮ್‌ಕುಮಾರ್ ಸುಮಾರು 20 ಜನರಿಗೆ ಆಹಾರ ಪದಾರ್ಥಗಳ ಕಿಟ್ ಹಾಗೂ ಸಿಹಿಯನ್ನು ಹಂಚಿ ಆಚರಿಸಿದರು.
ತಾಲೂಕಿನ ವಿವಿಧೆಡೆ ದತ್ತ ಅವರ ಜನ್ಮದಿನ ಆಚರಿಸಿದ ಮಾಹಿತಿ ಲಭಿಸಿದ್ದು ಉಡುಗೆರೆಯಲ್ಲಿ ಯುವ ಮುಖಂಡ ಚಂದನ್ ನೇತೃತ್ವದಲ್ಲಿ, ಕಂಸಾಗರದಲ್ಲಿ ರೇವಣ್ಣ, ಚನ್ನವೀರಪ್ಪ ಅವರ ನೇತೃತ್ವದಲ್ಲಿ ಹಾಗೂ ಯಗಟಿಪುರದಲ್ಲಿ ಯುವ ಮುಖಂಡರ ನೇತೃತ್ವದಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು.
ಪುರಸಭೆಯ ಸದಸ್ಯ ಮನು ಮರುಗುದ್ದಿ, ಪಿಸಿ ಗಂಗಾಧರ್, ಅಂಚೆ ಚೋಮನಹಳ್ಳಿ ಮಂಜು, ಮನೋಜ್ ಗೌಡ, ದರ್ಗಾ ಸಮಿತಿಯ ಸೈಯದ್ ಮುಜೀಬ್, ರಸೆಲ್,ಫರಾಕ್, ಚೋಟ್, ತಬರಸ್, ಅಡಕೆ ಸಮೀಹುಲ್ಲಾ ಇತ್ತಿತರರು ಆಚರಣೆಯಲ್ಲಿ ಭಾಗವಹಿಸಿದ್ದರು.