Advertisement

32 ವರ್ಷಗಳಿಂದ ಯೋಗ ಕಾಯಕ

09:34 PM Jun 21, 2021 | Team Udayavani |

ಚಿಕ್ಕಮಗಳೂರು : ಚಿತ್ರಮಂದಿರವೊಂದರಲ್ಲಿ ಮ್ಯಾನೇಜರ್‌ ವೃತ್ತಿ. ಯೋಗದಲ್ಲಿ ಮೊದಲಿನಿಂದಲೂ ಅಪಾರ ಆಸಕ್ತಿ.ಈ ಪ್ರಕೃತಿಗೆ, ಸಮಾಜಕ್ಕೆ ಕೊಡುಗೆ ನೀಡುವ ಬಯಕೆ. ಹೀಗಾಗಿಯೇ ಕಳೆದ 32 ವರ್ಷಗಳಿಂದ ತಾವು ಕಲಿತ ಯೋಗವನ್ನು ಇತರರಿಗೆ ಧಾರೆ ಎರೆಯುವ ಮೂಲಕ ಸಂತ್ರಪ್ತಿ ಕಾಣುತ್ತಿರುವವರು ಮಿಲನ ಶಿವಪ್ಪ. ಕೊಪ್ಪ ತಾಲೂಕಿನ ಕಲ್ಕೆರೆ ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದ ಶಿವಪ್ಪ ಅವರು ವಿದ್ಯಾಭ್ಯಾಸಕ್ಕಾಗಿ ಚಿಕ್ಕ ವಯಸ್ಸಿನಲ್ಲಿ ಚಿಕ್ಕಮಗಳೂರು ಪಟ್ಟಣ ಸೇರಿದರು.

Advertisement

ಈ ಸಂದರ್ಭದಲ್ಲಿ ಯೋಗ ಕಲಿಕೆ ಮೇಲೆ ಆಸಕ್ತಿ ಬೆಳೆದು 1989ರಲ್ಲಿ ಹಿಂದೂ ಸೇವಾ ಪ್ರತಿಷ್ಠಾನದಲ್ಲಿ ಯೋಗಾಭ್ಯಾಸ ಪ್ರಾರಂಭಿಸಿದರು. ಕಲಿಕೆ ವೇಳೆ ಯೋಗಶಿಕ್ಷಕರಾದ ಸೀತಾರಾಮ್‌ ಮತ್ತು ಚಿಕ್ಕಮಗಳೂರಿನಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದ ಸಿ.ಉಮೇಶ್‌ ಅವರ ಕಲಿತ ಯೋಗವನ್ನು ಒಂದಿಷ್ಟು ಜನರಿಗೆ ಕಲಿಸಿಕೊಡುವ ಜೊತೆ ಸಮಾಜಸೇವೆ ಮಾಡಬೇಕು ಎಂಬ ಮಾತು ಶಿವಪ್ಪ ಅವರಿಗೆ ಸ್ಫೂರ್ತಿಯಾಯಿತು.

ಹೀಗಾಗಿ ಪ್ರಭೋದಿನಿ ಯೋಗಶಿಕ್ಷಣ ಟ್ರಸ್ಟ್‌ ಸಹಯೋಗದಲ್ಲಿ ಸಾವಿರಾರು ಜನರಿಗೆ ಉಚಿತ ಯೋಗ ಪಾಠ ಮಾಡುವ ತಮ್ಮ ಕಾಯಕ ಮುಂದುವರಿಸಿದ್ದಾರೆ.. ನಗರದ ಮಿಲನ್‌ ಚಿತ್ರಮಂದಿರದಲ್ಲಿ ಮ್ಯಾನೇಜರ್‌ ಆಗಿ 50 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಇವರು ಪ್ರತೀದಿನ ಬೆಳಗ್ಗೆ ಯೋಗಾಸನ, ಪ್ರಾಣಾಯಾಮ, ಅಗ್ನಿಹೋತ್ರ ಹೇಳಿಕೊಡುತ್ತಾರೆ.

ಭಾನುವಾರ ರೋಪ್‌ ಬಾಡಿ ಬೆಂಡಿಂಗ್‌ನಂತಹ ಆಸನಗಳನ್ನು ಕಲಿಸುತ್ತ ನೂರಾರು ಜನರಿಗೆ ತರಬೇತಿ ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next