ಕಡೂರು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕಡೂರು ಬ್ಲಾಕ್ ಕಾಂಗ್ರೆಸ್ ಮುಖಂಡರು ಪಟ್ಟಣದ ಪೆಟ್ರೋಲ್ ಬಂಕ್‌ಗಳ ಮುಂದೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಮಲ್ಲಿಕಾರ್ಜುನ ಚಿತ್ರಮಂದಿರದ ಪಕ್ಕದಲ್ಲಿರುವ ಪೆಟ್ರೋಲ್ ಬಂಕ್‌ನ ಮುಂದೆ ಕೆ.ಎಸ್. ಆನಂದ್, ಕೆ.ಎಂ. ಕೆಂಪರಾಜು, ಶರತ್ ಕೃಷ್ಣಮೂರ್ತಿ, ವನಮಾಲ ದೇವರಾಜು, ಎಂ.ಎಚ್. ಚಂದ್ರಪ್ಪ, ಬಾಸೂರು ಚಂದ್ರಮೌಳಿ ಮತ್ತಿತರ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನು ದ್ದೇಶಿಸಿ ಜಿಪಂ ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜು ಮಾತನಾಡಿ, ಮನಮೋಹನ್‌ಸಿಂಗ್ ಪ್ರಧಾನಿಯಾದ ಸಂದರ್ಭದಲ್ಲಿ 65 ರೂ. ಇದ್ದ ಪೆಟ್ರೋಲ್ ಬೆಲೆ ಇದೀಗ 100 ರೂ.ಗಳ ಗಡಿ ದಾಟಿದ್ದು, ಅಡುಗೆ ಅನಿಲದ ಸಬ್ಸಿಡಿ ವಾಪಸ್ ಪಡೆದಿದ್ದು 900 ರೂ.ಗಳಿಗೆ ಏರಿಕೆಯಾಗಿರುವುದು ಮೋದಿ ಸರಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಲೇವಡಿ ಮಾಡಿದರು.
ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸಮಿತಿಯ ಸೂಚನೆ ಮೇರೆಗೆ ಶುಕ್ರವಾರ ಜಿಲ್ಲಾ ಕೇಂದ್ರಗಳಲ್ಲಿ, ಶನಿವಾರ ತಾಲೂಕು ಕೇಂದ್ರಗಳಲ್ಲಿ, ಭಾನುವಾರ ಹೋಬಳಿ ಮಟ್ಟದಲ್ಲಿ ನಂತರ ಗ್ರಾಮೀಣ ಭಾಗಗಳಲ್ಲಿರುವ ಪೆಟ್ರೋಲ್ ಬಂಕ್‌ಗಳ ಮುಂದೆ ಇದೇ ರೀತಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದರು.
ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ. ಎಚ್. ಚಂದ್ರಪ್ಪ ಜಿಪಂ ಮಾಜಿ ಸದಸ್ಯೆ ವನಮಾಲ ದೇವರಾಜು, ಪುರಸಭೆ ಸದಸ್ಯ ತೋಟದಮನೆ ಮೋಹನ್, ಯುವ ಕಾಂಗ್ರೆಸ್‌ನ ವಿನಯ್ ಹೊಳ್ಳ, ಚಿಕ್ಕಂಗಳ ಪ್ರಕಾಶ್, ದಾಸಯ್ಯನಗುತ್ತಿ ಚಂದ್ರಪ್ಪ ಮಾತನಾಡಿದರು.