ಚಿಕ್ಕಮಗಳೂರು: ಕೋವಿಡ್ ಸೆಂಟರ್‌ನಲ್ಲಿರುವ ಸೋಂಕಿತರಲ್ಲಿ ಆತ್ಮಸ್ಥೈರ್ಯ ಮೂಡಿಸುವ ನಿಟ್ಟಿನಲ್ಲಿ ನಗರದ ಬೇಲೂರು ರಸ್ತೆಯಲ್ಲಿರುವ ವಸತಿನಿಲಯದಲ್ಲಿ ಜಿಲ್ಲಾಡಳಿತ ತೆರೆಯಲಾಗಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಗಾನಸುಧೆ ನಡೆಸುವ ಮೂಲಕ ಸೋಂಕಿತರಿಗೆ ನಿಮ್ಮ ಜೊತೆ ನಾವಿದ್ದೇವೆ ಎಂದು ವಿಶ್ವಾಸ ತುಂಬುವ ಕೆಲಸವನ್ನು ಹಿರಿಯ ಅಧಿಕಾರಿಗಳು ಮಾಡಿದರು.
ಉಪ ವಿಭಾಗಾಧಿ ಕಾರಿ ಡಾ| ಎಚ್.ಎಲ್. ನಾಗರಾಜ್, ತಹಶೀಲ್ದಾರ್ ಡಾ| ಕೆ.ಜೆ. ಕಾಂತರಾಜ್, ಕಾರಾಗೃಹ ಅಧಿಧೀಕ್ಷಕ ರಾಕೇಶ್ ಕಾಂಬಳೆ, ಪತ್ರಕರ್ತ ಪಿ. ರಾಜೇಶ್ ನೇತೃತ್ವದಲ್ಲಿ ಶನಿವಾರ ಸಂಜೆ 7 ಗಂಟೆಗೆ ಆರಂಭಗೊಂಡ ಗಾನಸುಧೆಯನ್ನು ರಾತ್ರಿ 10 ಗಂಟೆಯವರೆಗೂ ನಡೆಸಿಕೊಟ್ಟರು. ಉಪ ವಿಭಾಗಾಧಿಕಾರಿ ಡಾ| ಎಚ್.ಎಲ್. ನಾಗರಾಜ್, ತಹಶೀಲ್ದಾರ್ ಡಾ| ಕೆ.ಜೆ. ಕಾಂತರಾಜ್, ಕಾರಾಗೃಹ ಅ ಧೀಕ್ಷಕ ರಾಕೇಶ್ ಕಾಂಬಳೆ ಹಾಗೂ ಪತ್ರಕರ್ತ ಪಿ. ರಾಜೇಶ್ ಸುಮಧುರ ಹಳೆಯ ಕನ್ನಡ ಗೀತೆಗಳನ್ನು ಭಕ್ತಿಗೀತೆ, ಭಾವಗೀತೆಗಳನ್ನು ಹಾಡುವ ಮೂಲಕ ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಸೋಂಕಿತರನ್ನು ರಂಜಿಸಿದರು. ಕನ್ನಡದ ಸುಪ್ರಸಿದ್ಧ ಗೀತೆ “ಕುಲದಲ್ಲಿ ಕೀಳಾವುದೋ ಹುಚ್ಚಪ್ಪಾ’ ಹಾಡಿಗೆ ಅ ಧಿಕಾರಿಗಳು ಹೆಜ್ಜೆ ಹಾಕಿದರು.
ಅಧಿಕಾರಿಗಳು ಹಾಡಿಗೆ ಹೆಜ್ಜೆ ಹಾಕುತ್ತಿದ್ದಂತೆ ಸೋಂಕಿತರು ತಾವಿರುವ ಜಾಗದಲ್ಲೇ ಕುಣಿದು ಸಂಭ್ರಮಪಟ್ಟರೆ, ಮತ್ತೇ ಕೆಲವು ಸೋಂಕಿತರು ಹಾಡು ಹೇಳುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿದರು. ಕೋವಿಡ್ ಸೋಂಕಿಗೆ ಒಳಗಾಗಿ ಕೋವಿಡ್ ಕೇರ್‌ಸೆಂಟರ್‌ನಲ್ಲಿ ದಿನದೂಡುತ್ತಿರುವ ಅವರಲ್ಲಿ ಮಾನಸಿಕವಾಗಿ ಮನೋಸ್ಥೈರ್ಯವನ್ನು ತುಂಬುವ ನಿಟ್ಟಿನಲ್ಲಿ ಅ ಧಿಕಾರಿಗಳು ಕೈಗೊಂಡ ಈ ಕ್ರಮಕ್ಕೆ ಜಿಲ್ಲೆಯಲ್ಲಿ ಮೆಚ್ಚುಗೆಯೂ ವ್ಯಕ್ತವಾಗಿದೆ.
ಉಪ ವಿಭಾಗಾ ಕಾರಿ ಡಾ|ಎ ಚ್.ಎಲ್.ನಾಗರಾಜ್ ಮಾತನಾಡಿ, ಜಿಲ್ಲೆ ಯ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಸೋಂಕಿತರನ್ನು ಇರಿಸಲಾಗಿದೆ. ಅವರಿಗೆ 10 ದಿನಗಳ ಕಾಲ ಅವರನ್ನು ಕೇಂದ್ರದಲ್ಲಿಟ್ಟು ಆರೈಕೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಸೋಂಕಿತರಿಗೆ ಮಾನಸಿಕವಾಗಿ ಖನ್ನತೆ ಕಾಡುತ್ತಿರಬಹುದು, ಬೇಸರ ಉಂಟಾಗಿರಬಹುದು. ಗೃಹಬಂಧನದಲ್ಲಿ ಇದ್ದೇವೆ ಎಂಬ ಭಾವನೆ ಇರಬಹುದು. ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮತ್ತು ಅವರಲ್ಲಿ ಚೈತನ್ಯ ಮೂಡಿಸಲು ಗಾನಸುಧೆ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದರು.
ಡಾ| ಕೆ.ಜೆ. ಕಾಂತರಾಜ್ ಮಾತನಾಡಿ, ಕೋವಿಡ್ ಕೇರ್‌ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಮನರಂಜನೆ ನೀಡುವ ಜೊತೆಗೆ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇವೆ. ಕಾರ್ಯಕ್ರಮದ ಮೂಲಕ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಅವರ ಜೊತೆಗಿರುತ್ತೇವೆ ಎಂಬ ಸಂದೇಶವನ್ನು ಸಾರಿದ್ದೇವೆ ಎಂದು ಹೇಳಿದರು. ಕಾರಾಗೃಹ ಅಧಿಧೀಕ್ಷಕ ರಾಕೇಶ್ ಕಾಂಬಳೆ ಮಾತನಾಡಿ, ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬಿ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಅವರಲ್ಲಿ ಧೈರ್ಯ ತುಂಬುವಂತಹ ಕೆಲಸವನ್ನು ಹಿರಿಯ ಅಧಿ ಕಾರಿಗಳ ಜೊತೆ ಸೇರಿ ಮಾಡಿದ್ದೇವೆ.
ಸೋಂಕಿತರು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಿ, ವೈದ್ಯರ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದರೊಂದಿಗೆ ಶೀಘ್ರವೇ ಗುಣಮುಖರಾಗಲಿ ಎಂದು ಬಯಸುತ್ತೇನೆ ಎಂದರು. ಪತ್ರಕರ್ತ ಪಿ. ರಾಜೇಶ್ ಮಾತನಾಡಿ, ಕೋವಿಡ್ ನಿಂದ ಅನೇಕರು ಕಷ್ಟಕ್ಕೆ ಗುರಿಯಾಗಿದ್ದಾರೆ. ಸೋಂಕಿತರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
10ರಿಂದ 15 ದಿನಗಳ ಕಾಲ ಹೊರ ಪ್ರಪಂಚದಿಂದ ದೂರ ಇರಬೇಕಾದ ಪರಿಸ್ಥಿತಿ ಇದೆ. ಅವರನ್ನು ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ. ಇದಕ್ಕೆ ಹಿರಿಯ ಅಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿ ಕಾರಿಗಳು ಮತ್ತು ಸಿಬ್ಬಂದಿ ಇದ್ದರು.