Advertisement
ತಾಲೂಕು ಸಾರ್ವಜನಿಕ ಆಸ್ಪತ್ರೆ: ತಾಲೂಕಿನಲ್ಲಿ ಸುಸಜ್ಜಿತ ಸಾರ್ವಜನಿಕ ಆಸ್ಪತ್ರೆ ಇದ್ದರೂ ರೋಗಿಗಳ ಸೇವೆ ಮಾತ್ರ ಮರೀಚಿಕೆಯಾಗಿದೆ. ತಜ್ಞ ವೈದ್ಯರು ಇಲ್ಲದೆ ಪಕ್ಕದ ಜಿಲ್ಲೆಯಾದ ಶಿವಮೊಗ್ಗ, ದ.ಕ. ಜಿಲ್ಲೆಗಳಿಗೆ ಹೋಗಬೇಕಾದ ಅನಿವಾರ್ಯ ಸ್ಥಿತಿ ಇದೆ. ಸುಮಾರು 35,520 ಜನಸಂಖ್ಯೆ ಹೊಂದಿರುವ ಪುಟ್ಟ ತಾಲೂಕು ಶೃಂಗೇರಿ. ಇಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳೇ ಜಾಸ್ತಿ. ಜೀವನ ನಿರ್ವಹಣೆಗೆ ಪರದಾಡುವಂತಹ ಪರಿಸ್ಥಿತಿ.
Related Articles
Advertisement
ಶಿರಸ್ತೇದಾರ್, ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರು, ಗ್ರಾಮ ಲೆಕ್ಕಿಗರು, ಡಿ- ದರ್ಜೆ ನೌಕರರಿದ್ದರೂ ಇನ್ನಿತರ ಸಿಬ್ಬಂದಿ ಕೊರತೆಯಿಂದ ತೊಂದರೆ ಪಡುವಂತಾಗಿದೆ. ಇದರೊಂದಿಗೆ 8 ಅಧಿ ಕಾರಿಗಳು ಬೇರೆ ಇಲಾಖೆಗೆ ನಿಯೋಜನೆಗೊಂಡವರಾಗಿದ್ದಾರೆ. ಒಟ್ಟು 15 ಹುದ್ದೆಗಳು ಖಾಲಿ ಬಿದ್ದಿವೆ. ಸರ್ವೆ ಇಲಾಖೆ, ಉಪನೋಂದಣಿ, ಚುನಾವಣಾ ಕಚೇರಿ, ಆಹಾರ- ನಾಗರಿಕ ಪೂರೈಕೆ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ನೆಮ್ಮದಿ ಕೇಂದ್ರದಲ್ಲಿ ಸಾರ್ವಜನಿಕರು ಅರ್ಜಿ ಸಲ್ಲಿಸಿದರೆ ಸರ್ವರ್ ಸಮಸ್ಯೆಯಿಂದಾಗಿ ದಾಖಲೆ ಪಡೆಯಲು ಕಾಲಮಿತಿಯೊಳಗೆ ಸಾಧ್ಯವಾಗುತ್ತಿಲ್ಲ.
ಈಗಾಗಲೇ ತಾಲೂಕಿನಲ್ಲಿ ಕೊರೊನಾ ಸೋಂಕಿಗೆ ಸಾಕಷ್ಟು ಜನರು ಬಲಿಯಾಗಿದ್ದು ತಾಲೂಕು ಆಡಳಿತ ಕೊರೊನಾ ನಿರ್ವಹಣೆಯಲ್ಲಿ ತೊಡಗಿದ್ದಾರೆ. ಆದರೆ ತಾಲೂಕಿನಲ್ಲೀಗ ಕೊರೊನಾ ಸಂಕಷ್ಟ ಸಂದರ್ಭ ಎದುರಿಸಬೇಕಾದ ಮುಖ್ಯಸ್ಥರಾದ ತಾಲೂಕು ದಂಡಾಧಿಕಾರಿಗಳೇ ಇಲ್ಲದೆ ತಾಲೂಕು ಆಡಳಿತವೇ ಮಸುಕಾಗಿದೆ. ಮುಖ್ಯ ದಂಡಾಧಿ ಕಾರಿ ತಹಶೀಲ್ದಾರ್‌ರಿಗೆ ಕೋವಿಡ್ ಪಾಸಿಟಿವ್ ಬಂದಿರುವುದರಿಂದ ರಜೆ ಮೇಲೆ ತೆರಳಿದ್ದಾರೆ ಎನ್ನಲಾಗಿದೆ. ಕೊಪ್ಪ ತಹಶೀಲ್ದಾರ್‌ಗೆ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಬೇರೆ ಬೇರೆ ಇಲಾಖೆಗಳಲ್ಲಿ ಹುದ್ದೆ ಖಾಲಿ ಇದ್ದು ಕ್ಷೇತ್ರ ಶಿಕ್ಷಣಾಧಿ ಕಾರಿ ಡಾ|ನಾಗರಾಜ್ ಇತ್ತೀಚೆಗೆ ಕೊರೊನಾದಿಂದ ಮೃತಪಟ್ಟಿದ್ದು ಇವರ ಜಾಗಕ್ಕೆ ಇದೀಗ ಕ್ಷೇತ್ರ ಸಂಪನ್ಮೂಲ ಕೇಂದ್ರ ಅ ಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಎನ್.ಜಿ. ರಾಘವೇಂದ್ರ ಅವರನ್ನು ಕ್ಷೇತ್ರ ಶಿಕ್ಷಣಾ ಧಿಕಾರಿಯಾಗಿ ನೇಮಕ ಮಾಡಲಾಗಿದೆ. ಇವರಿಗೆ ಈಗಾಗಲೇ ಕ್ಷೇತ್ರ ಸಂಪನ್ಮೂಲ ಕೇಂದ್ರದ ಹುದ್ದೆಯ ಜೊತೆಗೆ ಸಿಡಿಪಿಒ ಅ ಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದರೊಂದಿಗೆ ಈಗ ಕ್ಷೇತ್ರ ಶಿಕ್ಷಣಾಧಿ ಕಾರಿಯಾಗಿಯೂ ಕಾರ್ಯ ನಿರ್ವಹಿಸಬೇಕಾಗಿದೆ. ಒಟ್ಟಾರೆ ಮೂರು ಇಲಾಖೆಗಳಿಗೆ ಒಬ್ಬರೇ ಅ ಧಿಕಾರಿಯಾಗಿ ಹೊಣೆ ಹೊರಬೇಕಾಗಿರುವುದು ವಿಪರ್ಯಾಸವೇ ಸರಿ. ಕೊರೊನಾ ಸಂದರ್ಭದಲ್ಲಿ ತಾಲೂಕಿನ ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದ ಹುದ್ದೆಗಳಿಗೆ ಸರ್ಕಾರ ಶೀಘ್ರವಾಗಿ ನೇಮಕ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.