Advertisement

ವಿದ್ಯುತ್‌ ಕಣ್ಣಾಮುಚ್ಚಾಲೆ: ಹೈರಾಣಾದ ಜ®

09:10 PM Jun 01, 2021 | Team Udayavani |

ಆಲ್ದೂರು: ಪಟ್ಟಣದಲ್ಲಿ ವಿದ್ಯುತ್‌ ಸಮಸ್ಯೆಯಿಂದಾಗಿ ಜನ ಪರದಾಡುವಂತಾಗಿದೆ. ಲಾಕ್‌ಡೌನ್‌ ನಿಯಮದಿಂದ ಬೆಳಗ್ಗೆ 6-10 ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಅವಧಿಯಲ್ಲಿ ವಿದ್ಯುತ್‌ ಕಣ್ಣಮುಚ್ಚಾಲೆಯಿಂದಾಗಿ ಹಿಟ್ಟಿನ ಗಿರಣಿಗಳು ಕಾರ್ಯ ನಿರ್ವಹಿಸಲು ಸಾಧ್ಯವಾಗದೆ ತೊಂದರೆ ಉಂಟಾಗಿದೆ.

Advertisement

ಗ್ರಾಮೀಣ ಭಾಗದ ಜನ ಪಟ್ಟಣಕ್ಕೆ ಅಗತ್ಯ ವಸ್ತುಗಳ ಖರೀದಿಗೆ ಬಂದಾಗ ಹಿಟ್ಟಿನ ಗಿರಣಿ ಅಂಗಡಿಗಳಿಗೆ ಅಕ್ಕಿ, ರಾಗಿ, ಗೋಧಿ, ಜೋಳ ಸಾಂಬಾರ ಪದಾರ್ಥಗಳನ್ನು ಪುಡಿ ಮಾಡಿಸಲು ತೆಗೆದುಕೊಂಡು ಬಂದಿರುತ್ತಾರೆ. ಆದರೆ ಈ ಸಮಯದಲ್ಲಿ ವಿದ್ಯುತ್‌ ಸಮಸ್ಯೆಯಿಂದ ಹಿಟ್ಟಿನ ಗಿರಣಿಗಳು ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.

ಗ್ರಾಮೀಣ ಭಾಗದಿಂದ ಬರುವ ಜನ ತಾವು ಗಿರಣಿಗೆ ತಂದ ಜನರು ತಂದಿರುವ ಪದಾರ್ಥಗಳನ್ನು ಕೊಡಲು ಆಗದೆ, ತೆಗೆದುಕೊಂಡು ಹೋಗಲು ಸಾಧ್ಯವಾಗದೆ ತೊಂದರೆ ಅನುಭವಿಸುವಂತಾಗಿದೆ. ಕಿರಾಣಿ ಅಂಗಡಿಯವರು ನಿಗದಿ ಮಾಡಿದ ಸಮಯದಲ್ಲಿ ಕೆಲಸ ನಿರ್ವಹಿಸ ಬೇಕು. ಈ ಸಮಯದಲ್ಲಿ ವಿದ್ಯುತ್‌ ಸಮಸ್ಯೆಯಾದರೆ ಬಂದಂತಹ ಗ್ರಾಹಕರನ್ನು ವಾಪಸ್‌ ಕಳುಹಿಸಬೇಕು.

ಮತ್ತೆ ಅದೇ ಕೆಲಸಕ್ಕೆ ಪಟ್ಟಣಕ್ಕೆ ಬರಬೇಕು. ಆದರೆ ಬೆಳಗ್ಗೆ 10 ಗಂಟೆಯ ನಂತರ ಜನರು ಓಡಾಟ ಮಾಡುವಂತಿಲ್ಲ. ಗಿರಣಿ ಅಂಗಡಿಯವರು ಹಿಟ್ಟು ಮಾಡಿಕೊಡುವಂತಿಲ್ಲ. ಇದರಿಂದಾಗಿ ಜನರು ಹೈರಾಣಾಗುತ್ತಿದ್ದಾರೆ. ಬೆಳಗ್ಗೆ 6-ರಿಂದ 10 ಗಂಟೆಯವರೆಗೆ ಮಾತ್ರ ಅವಕಾಶ ನೀಡಿದ್ದು ಈ ಸಮಯದಲ್ಲಿ ವಿದ್ಯುತ್‌ ಸರಬರಾಜು ವ್ಯತ್ಯಯವಾದರೆ ಜನರನ್ನು ವಾಪಸ್‌ ಕಳುಹಿಸಬೇಕು.

ಈ ಸಮಸ್ಯೆಯಿಂದಾಗಿ ಕಳೆದ ಎರಡು ದಿನಗಳ ಹಿಂದೆ ಕೊಟ್ಟಿರುವ ಪದಾರ್ಥಗಳನ್ನು ಪುಡಿ ಮಾಡಿಕೊಡಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಭಾಗದ ಜನರಿಗೆ ತೊಂದರೆ ಯಾಗುತ್ತಿದೆ. ನಮಗೆ ಬೆಳಗ್ಗೆ 10 ಗಂಟೆಯ ನಂತರ ಗ್ರಾಹಕರು ಕೊಟ್ಟಿರುವ ಪದಾರ್ಥಗಳನ್ನು ಬಾಗಿಲು ಹಾಕಿಕೊಂಡು ಪುಡಿ ಮಾಡಲು ಅವಕಾಶ ನೀಡಬೇಕು. ಇದರಿಂದಾಗಿ ನಮಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಪಟ್ಟಣದ ಹಿಟ್ಟಿನ ಗಿರಣಿ ಮಾಲೀಕ ಭಾನು ಶೆಟ್ಟಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next