Advertisement

ಮಹಿಳಾ ದೌರ್ಜನ್ಯ ನಿಲ್ಲದಿರುವುದು ಆತಂಕಕಾರಿ

06:13 PM Jan 29, 2021 | Team Udayavani |

ಶೃಂಗೇರಿ: ಮಹಿಳೆಯರ ರಕ್ಷಣೆಗೆ ಹಲವಾರು ಕಾನೂನುಗಳಿದ್ದು, ಅದರ ಅರಿವನ್ನು ಪ್ರತಿಯೊಬ್ಬ ಮಹಿಳೆಯೂ ಅರಿತಿರಬೇಕು ಎಂದು ಜಿಪಂ
ಸದಸ್ಯೆ ಶಿಲ್ಪಾ ರವಿ ಹೇಳಿದರು.

Advertisement

ಪಟ್ಟಣದ ಸರಕಾರಿ ಪಪೂ ಕಾಲೇಜಿನ ಪ್ರೌಢಶಾಲಾ ಸಭಾಂಗಣದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ
ಕಾನೂನು ಅರಿವು- ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಹೊಸ ಕಾಯ್ದೆಗಳನ್ನು ರೂಪಿಸಲಾಗುತ್ತಿದ್ದರೂ, ದೌರ್ಜನ್ಯ ಇನ್ನೂ ಮುಂದುವರಿಯುತ್ತಿರುವುದು ಆತಂಕ ಕಾರಿಯಾಗಿದೆ.

ಪ್ರತಿಯೊಬ್ಬರೂ ಕಾನೂನಿನ ಕನಿಷ್ಟ ಜ್ಞಾನ ಹೊಂದಿರುವುದು ಅತ್ಯಗತ್ಯ ಎಂದರು. ಭ್ರೂಣ ಹತ್ಯೆ ನಿಷೇದ ಕಾಯ್ದೆ ಬಗ್ಗೆ ಉಪನ್ಯಾಸ ನೀಡಿದ ವಕೀಲ ಎಸ್‌.ಜಿ. ಶಶಿಭೂಷಣ್‌, ಇಂದಿನ ಸಮಾಜದಲ್ಲಿ ಹೆಣ್ಣು- ಗಂಡು ಎಂಬ ಬೇಧ ಭಾವವಿಲ್ಲ. ಹೆಣ್ಣು ಮಕ್ಕಳು ಈಗ ಎಲ್ಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಪುರುಷರಿಗೆ ಸರಿಸಮನಾಗಿದ್ದಾರೆ. ಆದರೆ ಈಗಲೂ ಗಂಡು ಮಕ್ಕಳೇ ಬೇಕೆಂಬ ಹಠದಿಂದ ಸಮಾಜದಲ್ಲಿ
ಅಸಮತೋಲನ ಉಂಟಾಗುತ್ತಿದೆ ಎಂದರು.

ವಕೀಲೆ ರಾಜೇಶ್ವರಿ ಹೆಗ್ಡೆ ಹೆಣ್ಣು ಮಕ್ಕಳ ರಕ್ಷಣಾ ಕಾಯ್ದೆ ಬಗ್ಗೆ ಮಾತನಾಡಿದರು. ತಾಪಂ ಅಧ್ಯಕ್ಷೆ ಜಯಶೀಲ, ಜಿಪಂ ಸದಸ್ಯ ಬಿ. ಶಿವಶಂಕರ್‌, ಸಿಡಿಪಿಒ ಎನ್‌.ಜಿ. ರಾಘವೇಂದ್ರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಲೋಚಕಿ ರೇಣುಕಾ ಇದ್ದರು.

 

Advertisement

ಓದಿ : ಅಕ್ರಮ ನಳ ಸಕ್ರಮಕ್ಕೆ ತೀರ್ಮಾನ

Advertisement

Udayavani is now on Telegram. Click here to join our channel and stay updated with the latest news.

Next