ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹಾವು ಏಣಿಯ ಆಟವಾಡುತ್ತಿದ್ದು, ಜನರು ಸಂಕಟ ಪಡುವಂತೆ ಮಾಡಿದೆ. ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಮೇ 20ರಿಂದ ಜೂ.1ರವರೆಗೆ ಲಾಕ್‌ಡೌನ್ ಮಾಡಿದೆ. ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ ಎನ್ನುವಷ್ಟರಲ್ಲಿ ಮತ್ತೆ ಏರಿಕೆಯಾಗುತ್ತದೆ.
ಮತ್ತೆ ಇಳಿಕೆಯಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮೇ 1ರಂದು 550, ಮೇ 2ರಂದು 166, ಮೇ 3ರಂದು 206, ಮೇ 4ರಂದು 735, ಮೇ 5ರಂದು 1009, ಮೇ 6ರಂದು 452, ಮೇ 7ರಂದು 632, ಮೇ 8ರಂದು 356, ಮೇ 9ರಂದು 582, ಮೇ10ರಂದು 362, ಮೇ 11ರಂದು 537, ಮೇ 12ರಂದು 642, ಮೇ 13 ರಂದು 642, ಮೇ14ರಂದು 835, ಮೇ 15ರಂದು 1093 ಸೋಂಕಿತರು ಪತ್ತೆಯಾಗಿದ್ದಾರೆ. ಮೇ 16ರಂದು 963, ಮೇ 17ರಂದು 732, ಮೇ 18ರಂದು 401, ಮೇ 19ರಂದು 1047, ಮೇ 20ರಂದು 945, ಮೇ 21ರಂದು 675, ಮೇ 22ರಂದು 652, ಮೇ 23ರಂದು 577, ಮೇ24 ರಂದು 633, ಮೇ 25ರಂದು 797, ಮೇ 26ರಂದು 585, ಮೇ 27ರಂದು 715, ಮೇ 28ರಂದು 559 ಹಾಗೂ ಮೇ 29ರಂದು 843 ಸೋಂಕು ಪ್ರಕರಣ ಕಂಡುಬಂದಿದೆ. ಈ ಸೋಂಕು ಪ್ರಕರಣವನ್ನು ಗಮನಿಸಿದಾಗ ಪ್ರತೀ ದಿನ ಸೋಂಕಿತರ ಸಂಖ್ಯೆಯಲ್ಲಿ ಏರುಪೇರಾಗುತ್ತಿದೆ. ಸೋಂಕಿನ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಜಿಲ್ಲಾಡಳಿತ ಮೇ 20ರಿಂದ ಜೂ.1ರ ವರೆಗೂ ಜಿಲ್ಲಾದ್ಯಂತ ಕಠಿಣ ನಿರ್ಬಂಧಗಳನ್ನು ವಿ ಧಿಸಿದೆ. ಜನಸಾಮಾನ್ಯರು ಅತ್ಯಂತ ಸಂಕಷ್ಟಕ್ಕೆ ಸಿಲುಕಿದ್ದಾರೆ.
ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಜೀವನ ನಡೆಸುವುದು ಕಷ್ಟಕರವಾಗಿದೆ. ಜಿಲ್ಲಾಡಳಿತ ಲಾಕ್‌ಡೌನ್ ವಿ ಧಿಸಿದ ಬಳಿಕ ಪ್ರತೀ ದಿನವು ಸೋಂಕಿನ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದಿದೆ. ಒಂದುದಿನ ಕಡಿಮೆಯಾದರೆ ಮತ್ತೂಂದು ದಿನ ನಿಧಾನಗತಿಯಲ್ಲಿ ಏರಿಕೆಯಾಗಿದೆ. ಈ ರೀತಿ ಸೋಂಕು ಹಾವು- ಏಣಿ ಆಟವಾಡುತ್ತಿದ್ದು, ಇದರಿಂದ ಜನರು ಸಂಕಷ್ಟದಲ್ಲಿ ದಿನದೂಡುವಂತೆ ಮಾಡಿದೆ. ಜಿಲ್ಲಾಡಳಿತ 12 ದಿನಗಳ ಕಾಲ ಲಾಕ್‌ಡೌನ್ ವಿ ಧಿಸಿದ್ದು, ಜಿಲ್ಲಾಡಳಿತದ ಸಮೀಕ್ಷೆಯಂತೆ ಜಿಲ್ಲೆಯಲ್ಲಿ ಶೇ.6ರಿಂದ7ರಷ್ಟು ಸೋಂಕಿನ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಲಾಕ್‌ಡೌನ್ ಸಮಯದಲ್ಲೂ ಸೋಂಕು ಹಾವು- ಏಣಿಯ ಆಟವಾಡುತ್ತಿದೆ. ಲಾಕ್‌ಡೌನ್ ಅವ ಧಿಯ ° 10 ದಿನಗಳನ್ನು ಕಳೆದಿದ್ದು, ಮೇ 20ರಂದು 945, ಮೇ 21 ರಂದು 675, ಮೇ 22ರಂದು 652, ಮೇ 23ರಂದು 577, ಮೇ 24ರಂದು 633, ಮೇ 25ರಂದು 797, ಮೇ26ರಂದು 585, ಮೇ27ರಂದು 715, ಮೇ 28ರಂದು 559, ಮೇ 29ರಂದು 843 ಸೋಂಕು ಪ್ರಕರಣ ಪತ್ತೆಯಾಗಿದೆ.
ಈ ಸೋಂಕು ಪ್ರಮಾಣವನ್ನು ನೋಡಿದಾಗ ಸೋಂಕು ಕ್ಷೀಣಿಸುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ. ಜಿಲ್ಲಾದ್ಯಂತ ಕಠಿಣ ಲಾಕ್‌ಡೌನ್ ನಿಜವಾದ ಫಲ ನೀಡಿದೆಯಾ ಎಂಬ ಪ್ರಶ್ನೆ ಕಾಡುತ್ತಿದ್ದು. ಲಾಕ್ ಡೌನ್ ಫಲ ನೀಡಬೇಕಾದರೆ, ಇನ್ನಷ್ಟು ಸಮಯ ಬೇಕಾಗುತ್ತದೆ ಎಂಬುದು ಅಭಿಪ್ರಾಯವಾಗಿದೆ. ಒಟ್ಟಾರೆ ಈ ಕೋವಿಡ್ ಸೋಂಕು ದೂರವಾದರೆ ಸಾಕು ಎಂದು ದೇವರಲ್ಲಿ ಪ್ರತೀ ನಿತ್ಯ ಜನರು ಬೇಡುತ್ತಿದ್ದು ಕೊರೊನಾದ ಹಾವು- ಏಣಿ ಆಟಕ್ಕೆ ಬೇಸತ್ತು ಹೋಗಿದ್ದಾರೆ. ಏರುತ್ತಿರುವ ಸಾವಿನ ಸಂಖ್ಯೆ: ಕೊರೊನಾ ಸೋಂಕು ಒಂದು ಕಡೆ ಜನರ ಬದುಕಿನ ನಡುವೆ ಕಣ್ಣಾಮುಚ್ಚಾಲೆ ಆಡುತ್ತಿದ್ದರೆ ಮತ್ತೂಂದು ಕಡೆ ಸೋಂಕಿಗೆ ಉಸಿರು ಚೆಲ್ಲುತ್ತಿರುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
ಮೊದಲ ಅಲೆಗಿಂತ 2ನೇ ಅಲೆ ಜನರ ಉಸಿರು ಬೇಗ ಕಿತ್ತುಕೊಳ್ಳುತ್ತಿದೆ. ಕಾμನಾಡಿನಲ್ಲಿ ಮೊದಲ ಅಲೆಗೆ 139 ಮಂದಿ ತಮ್ಮ ಉಸಿರು ಚೆಲ್ಲಿದ್ದರು. 2ನೇ ಅಲೆಗೆ ಕೆಲವೇ ದಿನಗಳಲ್ಲಿ 113 ಜನರ ಉಸಿರು ಕಿತ್ತುಕೊಂಡಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಸಾವಿನ ಸಂಖ್ಯೆ ಜನತೆಯಲ್ಲಿ ಆತಂಕವನ್ನು ಮೂಡಿಸಿದೆ. ಗ್ರಾಮೀಣ ಜನರನ್ನು ಕಾಡುತ್ತಿರುವ ಕೊರೊನಾ: ಕೊರೊನಾ ಸೋಂಕು ಗ್ರಾಮೀಣ ಪ್ರದೇಶಕ್ಕೆ ಪ್ರವೇಶ ಪಡೆದುಕೊಂಡು ಸ್ವಚ್ಚಂದವಾಗಿದ್ದ ಗ್ರಾಮೀಣ ಪ್ರದೇಶದ ಜನರ ಜದುಕನ್ನು ಅತಂತ್ರ ಮಾಡಿಬಿಟ್ಟಿದೆ.
ನಗರ ಪ್ರದೇಶದಲ್ಲಿ ಕಂಡುಬರುತ್ತಿದ್ದ ಸೋಂಕು ಪ್ರಮಾಣ ಈಗ ಗ್ರಾಮೀಣ ಪ್ರದೇಶದಿಂದ ಬರುತ್ತಿದ್ದು ಇದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಗ್ರಾಮೀಣ ಪ್ರದೇಶದ ಜನರನ್ನು ಸೋಂಕಿನಿಂದ ರಕ್ಷಿಸಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ.