Advertisement

ಕಾಂಗ್ರೆಸ್‌ನಿಂದ ಆ್ಯಂಬುಲೆನ್ಸ್‌ ಸೇಕಾಂಗ್ರೆಸ್‌ನಿಂದ ಆ್ಯಂಬುಲೆನ್ಸ್‌ ವ್ಯವಸ್ಥೆ

09:11 PM May 28, 2021 | Team Udayavani |

ಕಡೂರು: ರೋಗಿಗಳ ಶೀಘ್ರ ಆರೈಕೆಗಾಗಿ ಅನುಕೂಲವಾಗುವಂತೆ ಆ್ಯಂಬುಲೆನ್ಸ್‌ ವಾಹನವನ್ನು ಕಾಂಗ್ರೆಸ್‌ ವತಿಯಿಂದ ವ್ಯವಸ್ಥೆ ಮಾಡಲಾಗಿದೆ ಎಂದು ಕೆಪಿಸಿಸಿ ಸದಸ್ಯ ಕೆ.ಎಸ್‌.ಆನಂದ್‌ ತಿಳಿಸಿದರು.

Advertisement

ಪಟ್ಟಣದ ಕಾಂಗ್ರೆಸ್‌ ಕಚೇರಿ ಆವರಣದಲ್ಲಿ ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್‌ ಅವರು ಪಕ್ಷದ ನೂತನ ಆ್ಯಂಬುಲೆನ್ಸ್‌ ವಾಹನಕ್ಕೆ ಹಸಿರು ನಿಶಾನೆ ತೋರಿದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತು ರೋಗಿಗಳ ಚಿಕಿತ್ಸೆಗೆ ಇತರೆ ಆಸ್ಪತ್ರೆಗಳಿಗೆ ಹೋಗಲು ಆ್ಯಂಬುಲೆನ್ಸ್‌ ಅವಶ್ಯಕತೆ ಇರುವುದನ್ನು ಮನಗಂಡ ಪಕ್ಷವು ತಾಲೂಕು ಮಟ್ಟದ ವ್ಯಾಪ್ತಿಗೆ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದ್ದು, ಇದು ಸಂಪೂರ್ಣ ಉಚಿತವಾಗಿರುತ್ತದೆ ಎಂದರು.

ದೇಶಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚಿರುವ ಕೋವಿಡ್‌ ರೋಗ ಸಾವಿರಾರು ಜನರನ್ನು ತೊಂದರೆಗೆ ಈಡು ಮಾಡಿದೆ. ಈ ಹಿನ್ನೆಲೆಯಲ್ಲಿ ತೊಂದರೆಗೆ ಒಳಗಾದ ಬಡವರು ದೀನ ದಲಿತರು ಮತ್ತು ಶೋಷಿತರಿಗೆ ನೆರವಾಗುವಂತೆ ಪಕ್ಷವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮುಂಗಾರು ರಾಜ್ಯವನ್ನು ಪ್ರವೇಶಿಸುತ್ತಿದ್ದು, ಈ ಹೊತ್ತಿನಲ್ಲಿ ಲಾಕ್‌ಡೌನ್‌ ಇರುವುದರಿಂದ ರೈತಾಪಿ ವರ್ಗ ಸಹಜವಾಗಿ ಸಂಕಷ್ಟಕ್ಕೆ ತುತ್ತಾಗಿದ್ದು ಹೊಲಗದ್ದೆಗಳಿಗೆ ತೆರಳುವುದು ಕಷ್ಟವಾಗಿದೆ.

ಬಿತ್ತನೆ ಬೀಜ ಗೊಬ್ಬರ ಮತ್ತಿತರ ವಸ್ತುಗಳನ್ನು ಖರೀದಿಸಲು ಪರದಾಡುತ್ತಿದ್ದಾರೆ. ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಕೂಡಲೇ ರೈತರ ನೆರವಿಗೆ ಧಾವಿಸಬೇಕೆಂದರು. ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ 6 ವೆಂಟಿಲೇಟರ್‌ಗಳಿದ್ದು, ಇದರ ಸಮರ್ಪಕ ಸದ್ಬಳಕೆಗೆ ಸರ್ಕಾರ ಹೆಚ್ಚಿನ ವೈದ್ಯರು ದಾದಿಯರು ಮತ್ತು ಇತರೆ ಸಿಬ್ಬಂದಿಯನ್ನು ಮಂಜೂರು ಮಾಡಬೇಕು. ಇದರಿಂದ ಅನೇಕ ಅಮೂಲ್ಯ ಜೀವಗಳನ್ನು ಉಳಿಸಬಹುದು ಎಂದರು.

ಪಕ್ಷದ ವಿವಿಧ ಮುಖಂಡರಾದ ಶರತ್‌ ಕೃಷ್ಣಮೂರ್ತಿ, ಎಂ.ಎಚ್‌.ಚಂದ್ರಪ್ಪ,ಆಸಂದಿ ಕಲ್ಲೇಶ್‌,ಬಾಸೂರು ಚಂದ್ರಮೌಳಿ, ಕೆ.ಜಿ.ಶ್ರೀನಿವಾಸಮೂರ್ತಿ, ಖಾದರ್‌, ನಟರಾಜು, ಮಲ್ಲಪ್ಪನಹಳ್ಳಿ ಶಶಿ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next