Advertisement

ಜೂ.1ರವರೆಗೆ ಲಾಕ್‌ಡೌನ್‌ ವಿಸ್ತರಣೆ

09:03 PM May 28, 2021 | Team Udayavani |

ಚಿಕ್ಕಮಗಳೂರು: ಗ್ರಾಮೀಣ ಜನಜೀವನಕ್ಕೆ ಅನುಕೂಲವಾಗುವಂತೆ ಕೆಲವು ಮಾರ್ಪಾಡುಗೊಳಿಸಿ ಜೂ.1 ಬೆಳಗ್ಗೆ 6 ಗಂಟೆಯವರೆಗೆ ಕಠಿಣ ಲಾಕ್‌ ಡೌನ್‌ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಧಿಕಾರಿ ಕೆ.ಎನ್‌.ರಮೇಶ್‌ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೇ 20ರಿಂದ ಲಾಕ್‌ಡೌನ್‌ ವಿಧಿಸಿದ್ದು, ಕೋವಿಡ್‌ ಸೋಂಕು ಪ್ರಕರಣ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಕಠಿಣ ಲಾಕ್‌ಡೌನ್‌ನಿಂದ ಗ್ರಾಮೀಣ ಪ್ರದೇಶದ ಜನರಿಗೆ ಆಹಾರದ ಸಮಸ್ಯೆ ಎದುರಾಗಿದ್ದು, ಈ ನಿಟ್ಟಿನಲ್ಲಿ ಬೆಳಗ್ಗೆ 6 ಗಂಟೆಯಿಂದ 10ಗಂಟೆಯವರೆಗೆ ದಿನಸಿ ಅಂಗಡಿ ಬಾಗಿಲು ತೆರೆದು ವ್ಯಾಪಾರ ನಡೆಸಲು ಅವಕಾಶ ನೀಡಲಾಗಿದೆ. ಕೃಷಿ ಚಟುವಟಿಕೆಗೆ ಅನುಕೂಲವಾಗುವ ದೃಷ್ಟಿಯಿಂದ ರಸಗೊಬ್ಬರ ಬಿತ್ತನೆ ಬೀಜ ಖರೀದಿಗೆ ಬೆಳಿಗ್ಗೆ 10ಗಂಟೆವರೆಗೂ ಅವಕಾಶ ಕಲ್ಪಿಸಲಾಗಿದೆ ಎಂದರು.

ನಗರ, ಪುರಸಭೆ, ಪಪಂ ವ್ಯಾಪ್ತಿಯಲ್ಲಿ ಕಠಿಣ ಲಾಕ್‌ ಡೌನ್‌ ಮುಂದುವರಿಯಲಿದ್ದು, ಅಂಗಡಿ ಮುಂಗಟ್ಟು ತೆರೆಯಲು ಅವಕಾಶವಿಲ್ಲ, ದಿನಸಿ ಅಂಗಡಿ ಹೋಟೆಲ್‌ ಮಾಲೀಕರು ಎಂದಿನಂತೆ ಹೋಂ ಡೆಲಿವರಿಗೆ ಅವಕಾಶ ನೀಲಾಗಿದೆ. ಹಣ್ಣು, ತರಕಾರಿ ತಳ್ಳುಗಾಡಿ ಮತ್ತು ಗೂಡ್ಸ್‌ ವಾಹನದಲ್ಲಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ಕೃಷಿ ಚಟುವಟಿಕೆ ನಡೆಸಲು ಅವಕಾಶವಿದೆ. ಹಾಪ್‌ಕಾಮ್ಸ್‌ ಮೂಲಕ ತರಕಾರಿ ಹಣ್ಣುಯನ್ನು ವಾಹನದಲ್ಲಿ ತೆಗೆದು ಕೊಂಡು ಹೋಗಿ ಗ್ರಾಮೀಣ ಪ್ರದೇಶಗಳಲ್ಲಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾದ್ಯಂತ ಕಳೆದ 8 ದಿನಗಳಿಂದ ಕಠಿಣ ಲಾಕ್‌ ಡೌನ್‌ ವಿ ಧಿಸಿದ್ದರಿಂದ ಕೋವಿಡ್‌ ಸೋಂಕು ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಮೇ 19ರಂದು 100 ಜನರನ್ನು ಪರೀಕ್ಷೆಗೆ ಒಳಪಡಿಸಿದ ರೇ, ಶೇ.37ರಷ್ಟು ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಮೇ.27ರಂದು ಈ ಪ್ರಮಾಣ ಶೇ.31ಕ್ಕೆ ಇಳಿಕೆ ಕಂಡಿದೆ.

ಅಂದರೇ ಶೇ.6ರಿಂದ 7ರಷ್ಟು ಇಳಿಕೆ ಕಂಡಿದೆ ಎಂದರು. ಕಳೆದೆರೆಡು ದಿನಗಳಲ್ಲಿ ತಾಲೂಕುವಾರು ಪರಿಗಣಿಸಿದಾಗ ಚಿಕ್ಕಮಗಳೂರು 213, ಕಡೂರು 149, ಮೂಡಿಗೆರೆ 65, ನರಸಿಂಹರಾಜಪುರ 47, ಕೊಪ್ಪ 42, ಶೃಂಗೇರಿಯ 34 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿನ ಸರಾಸರಿ ಪ್ರಕರಣವನ್ನು ಲೆಕ್ಕಹಾಕಿದಾಗ 649 ಇದದ್ದು 585ಕ್ಕೆ ಬಂದಿದ್ದು, ಕಠಿಣ ಲಾಕ್‌ಡೌನ್‌ಗೆ ಜನರು ಸಕಾರಾತ್ಮಕವಾಗಿ ಸ್ಪಂದಿ  ಸಿದ್ದರಿಂದ ಸೋಂಕು ಸ್ವಲ್ಪಮಟ್ಟಿಗೆ ಇಳಿಕೆ ಕಂಡಿದ್ದು, ಸೋಂಕು ಕಡಿಮೆ ಯಾಗುತ್ತಿದ್ದರೂ ಸೋಂಕು ಇನಷ್ಟು ಕ್ಷೀಣಿಸಬೇಕಿದೆ. ಈ ದೃಷ್ಟಿಯಿಂದ ಲಾಕ್‌ ಡೌನ್‌ ಮುಂದುವರಿಕೆ ಅನಿವಾರ್ಯ ವಾಗಿದೆ ಎಂದು ತಿಳಿಸಿದರು.

Advertisement

ವಾಹನ ಸಂಚಾರ ನಿಷೇಧಿ ಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಮತ್ತು ಆರೋಗ್ಯ ಸಂಬಂಧಿ  ಸಮಸ್ಯೆ ಇದ್ದ ಸಂದರ್ಭಗಳಲ್ಲಿ ಅಗತ್ಯ ದಾಖಲೆಗಳನ್ನು ತೋರಿಸಿ ವಾಹನಗಳಲ್ಲಿ ಓಡಾಡಬಹುದಾಗಿದೆ. ಬೇರೆ ರಾಜ್ಯ ಮತ್ತು ಬೇರೆ ಜಿಲ್ಲೆಗಳಿಂದ ಬಂದವರನ್ನು 14 ದಿನಗಳ ಕಾಲ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಎಂದ ಅವರು, ನ್ಯಾಯಾಲಯಗಳು ಆರಂಭವಾಗಿರುವುದರಿಂದ ವಕೀಲರು ಕಚೇರಿಯಲ್ಲಿ ಕೋವಿಡ್‌ ನಿಯಮ ಪಾಲಿಸಿ ಕೆಲಸ ನಿರ್ವಹಿಸಲು ಅವಕಾಶ ನೀಡಲಾಗಿದೆ. ಸಾರ್ವಜನಿಕರ ಪ್ರವೇಶವನ್ನು ನಿಷೇಧಿ ಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಪಿ ಎಂ.ಎಚ್‌.ಅಕ್ಷಯ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next