ಬಾಳೆಹೊನ್ನುರು: ಹೋಂ ಕ್ವಾರಂಟೈನ್‌ನಿಂದಾಗಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ತಕ್ಷಣವೇ ಹೋಂ ಕ್ವಾರಂಟೈನ್‌ನಲ್ಲಿರುವ ಸೋಂಕಿತರನ್ನು ಸರಕಾರ ನಿಗದಿಪಡಿಸಿದ ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರ ಮಾಡಿ ಸೋಂಕು ಹರಡುವುದನ್ನು ನಿಯಂತ್ರಿಸಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ತಿಳಿಸಿದರು.
ಬಾಳೆಹೊನ್ನೂರು ಸಮೀಪದ ಬನ್ನೂರು ಶ್ರೀ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಕೊರೊನಾ ಸೋಂಕು ನಿಯಂತ್ರಣದ ಬಗ್ಗೆ ಹಮ್ಮಿಕೊಂಡಿದ್ದ ಕೊರೊನಾ ಟಾಸ್ಕ್ಫೋರ್ಸ್ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ಬಾರಿ ಕೊರೊನಾ ಸೋಂಕಿತರನ್ನು ನೋಡುವ ದೃಷ್ಟಿ ಬೇರೆಯಾಗಿತ್ತು, ಆದರೆ 2ನೇ ಕೊರೊನಾ ಅಲೆಯಲ್ಲಿ ನಾಗರಿಕರಿಗೆ ಕೊರೊನಾ ಸೋಂಕಿನ ಬಗ್ಗೆ ಭಯವಿಲ್ಲ. ಸೋಂಕಿತರು ರಾಜಾರೋಷವಾಗಿ ತಿರುಗುತ್ತಿದ್ದಾರೆ.
ಸೋಂಕಿತರ ಗಂಟಲು ದ್ರವ ತಪಾಸಣೆ ನಡೆಸಿ ಅದರ ವರದಿ ಬರುವುದು ಕಾರಣಾಂತರದಿಂದ ವಿಳಂಬವಾಗುತ್ತಿದ್ದು, ತಪಾಸಣೆಗೆ ಒಳಗಾದ ವ್ಯಕ್ತಿ ಸಾರ್ವಜನಿಕವಾಗಿ ರಾಜಾರೋಷವಾಗಿ ತಿರುಗಾಡುತ್ತಿರುವುದೇ ಸೋಂಕು ಹೆಚ್ಚಲು ಕಾರಣವಾಗಿದೆ ಎಂದರು.
ತಕ್ಷಣವೇ ಸೋಂಕಿತರನ್ನು ಸ್ಥಳಾಂತರ ಮಾಡಿ ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಬೇಕು. ಇಲ್ಲದಿದ್ದರೆ ತಹಶೀಲ್ದಾರರು, ತಾ.ಪಂ ಕಾರ್ಯನಿರ್ವಹಣಾ ಧಿಕಾರಿ ಹಾಗೂ ಗ್ರಾ.ಪಂ ಅಭಿವೃದ್ಧಿ ಅ ಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು. ವಿಧಾನಸಭಾ ಉಪ-ಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ 100 ಜನರಿಗೆ ತಪಾಸಣೆ ನಡೆಸಿದರೆ ಶೇ.70ರಷ್ಟು ಸೋಂಕಿತರು ಪತ್ತೆಯಾಗುತ್ತಾರೆ. ಸಾರ್ವಜನಿಕರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಆಯಾ ಭಾಗದ ಗ್ರಾ.ಪಂ ವಾರ್ಡ್‌ಗಳಲ್ಲಿ ಗ್ರಾ.ಪಂ ಸದಸ್ಯರು, ಪಿಡಿಒ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಮಾತನಾಡಿ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯ ಬೇಡಿಕೆಯಂತೆ ಮುಖ್ಯಮಂತ್ರಿಗಳು ಪ್ರತೀ ಗ್ರಾ.ಪಂಗೆ 50 ಸಾವಿರ ಹಣ ಬಿಡುಗಡೆ ಮಾಡಿದ್ದಾರೆ. ಆ ಅನುದಾನದಲ್ಲಿ ಮಾಸ್ಕ್, ಸ್ಯಾನಿಟೈಸರ್, ಪೇಸ್ ಶೀಲ್ಡ್, ಗ್ಲೌಸ್ ಇನ್ನಿತರೆ ವಸ್ತುಗಳನ್ನು ವಿಳಂಬ ಮಾಡದೇ ಗ್ರಾ.ಪಂ ಪಿಡಿಒ ಅವರು ವಿತರಿಸಬೇಕೆಂದು ತಿಳಿಸಿದರು. ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಶಾಸಕರ ಅಭಿವೃದ್ಧಿ ನಿಧಿಯಿಂದ 50ಲಕ್ಷ ಅನುದಾನ ಬಳಸಿಕೊಳ್ಳುವಂತೆ ಜಿಲ್ಲಾ ಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ತಾಲೂಕು ಹಾಗೂ ಗ್ರಾ.ಪಂ ಮಟ್ಟದ ಅ ಧಿಕಾರಿಗಳು ಕರ್ತವ್ಯ ಲೋಪವಾಗದಂತೆ ಕೊರೊನಾ ನಿಯಂತ್ರಣಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು. ವೈದ್ಯಾ ಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು.
ಸಭೆಯಲ್ಲಿ ಬನ್ನೂರು ಗ್ರಾ.ಪಂ ಅಧ್ಯಕ್ಷೆ ಮಧುರಾ, ಉಪಾಧ್ಯಕ್ಷ ಗೋಪಾಲ್, ಚಿಕ್ಕಮಗಳೂರು ಜಿಲ್ಲಾ ಎಸಿ.ನಾಗರಾಜ್, ಎನ್.ಆರ್.ಪುರ ತಹಶೀಲ್ದಾರ್, ಇಒ ನಯನಾ, ಬನ್ನೂರು ಗ್ರಾಪಂ ಪಿಡಿಒ ಪಿ.ಕೆ.ಪ್ರಕಾಶ್, ಬಿ.ಕಣಬೂರು ಗ್ರಾಪಂಅಧ್ಯಕ್ಷೆ ಅಂಬುಜಾ, ಪಿಡಿಒ ಸೋಮಶೇಖರ್, ಮಾಗುಂಡಿ ಗ್ರಾಪಂ ಅಧ್ಯಕ್ಷೆ ಪ್ರಮಿಳಾ ಸಿಲ್ವಿಯಾ ಸೆರಾವೋ, ವೈದ್ಯಾ ಧಿಕಾರಿ ಡಾ| ಎಲೊªàಸ್ ವರ್ಗೀಸ್, ಉಪ-ತಹಶೀಲ್ದಾರ್ ನಾಗೇಂದ್ರ, ಆರೋಗ್ಯ ನಿರೀಕ್ಷಕ ಭಗವಾನ್, ಎನ್.ಆರ್.ಪುರ ಕ್ಷೇತ್ರ ಶಿಕ್ಷಣಾ ಧಿಕಾರಿ ದುರುಗಪ್ಪ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಪಾಲ್ಗೊಂಡಿದ್ದರು.