Advertisement

ಕೊರೊನಾ ತಡೆಗೆ ಮಹತ್ವ ನೀಡಿ: ಸಚಿವ ಅಂಗಾರ

09:13 PM May 19, 2021 | Team Udayavani |

 ತರೀಕೆರೆ: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ತಡೆಗಟ್ಟಲು ಅಧಿ  ಕಾರಿಗಳು ಮತ್ತು ವೈದ್ಯಾ ಧಿಕಾರಿಗಳು ಹೆಚ್ಚಿನ ಮಹತ್ವ ನೀಡಬೇಕು. ಕೆಳಮಟ್ಟದ ಅ ಧಿಕಾರಿಗಳು ಗಮನಕ್ಕೆ ತರುವ ಸಮಸ್ಯೆಗಳ ಬಗ್ಗೆ ಉತ್ಪ್ರೇಕ್ಷೆ ಮಾಡದೆ ತಕ್ಷಣ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಮೇಲಧಿ  ಕಾರಿಗಳು ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ ಹೇಳಿದರು.

Advertisement

ತಾಪಂ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿ ಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಗ್ರಾಮಾಂತರ ಪ್ರದೇಶಗಳಲ್ಲಿ ವಲಸೆ ಬಂದವರಿಂದ ಸೋಂಕು ಹೆಚ್ಚಾಗಿದ್ದು ಅದನ್ನು ತಹಬದಿಗೆ ತರಬೇಕಾಗಿದೆ. ಹಿಂದಿನ ಬಾರಿ ಕೊರೊನಾ ಸೋಂಕಿನ ಬಗ್ಗೆ ಜನರಲ್ಲಿ ಭಯದ ವಾತಾವರಣ ಮೂಡಿತ್ತು. ಈಗ ಆ ಭಯವಿಲ್ಲದಂತಾಗಿದೆ.

ಕೊರೊನಾ ಸೋಂಕನ್ನು ಪತ್ತೆ ಹಚ್ಚಲು ಹಳ್ಳಿಗಳಲ್ಲಿ ಮನೆ- ಮನೆಗೆ ತೆರಳಿ ಟೆಸ್ಟ್‌ಗಳನ್ನು ಮಾಡಬೇಕು ಮತ್ತು ಕೋವಿಡ್‌ ಸೋಂಕಿನ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಕೋವಿಡ್‌ ಸೋಂಕಿತರನ್ನು ಹೋಮ್‌ ಕ್ವಾರಂಟೈನ್‌ ಮಾಡುವ ಬದಲು ಆಸ್ಪತ್ರೆ ಅಥವಾ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಬೇಕು.

ಅದಕ್ಕಾಗಿ ಸರಕಾರಿ ಕಟ್ಟಡಗಳನ್ನು ಬಳಸಿಕೊಳ್ಳಬೇಕು ಎಂದು ಅ ಧಿಕಾರಿಗಳಿಗೆ ಸೂಚನೆ ನೀಡಿದರು. ಗ್ರಾಮಾಂತರ ಪ್ರದೇಶಗಳಲ್ಲಿ ಕೊರೊನಾ ಪಾಸಿಟಿವ್‌ ಬಂದವರು ಅನಗತ್ಯ ಓಡಾಟ ನಡೆಸುತ್ತಿದ್ದಾರೆ ಎಂಬ ದೂರುಗಳಿವೆ. ಸೋಂಕಿತರು ಅಗತ್ಯವಿಲ್ಲದೆ ಓಡಾಟ ನಡೆಸಿದಲ್ಲಿ ಅವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಎಫ್‌.ಐ.ಆರ್‌. ದಾಖಲು ಮಾಡಬೇಕು ಎಂದರು.

ವಿಧಾನ ಪರಿಷತ್‌ಸದಸ್ಯ ಎಸ್‌.ಎಲ್‌. ಭೋಜೇಗೌಡ ಮಾತನಾಡಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗಳು ಇದ್ದರೂ ಸಹ ಅದರ ಬಳಕೆ ಮಾಡುತ್ತಿಲ್ಲ. ಆಸ್ಪತ್ರೆಯಲ್ಲಿ ಎಷ್ಟು ವೆಂಟಿಲೇಟರ್‌ಗಳಿವೆ ಎಂದು ವೈದ್ಯಾ ಧಿಕಾರಿಯನ್ನು ಪ್ರಶ್ನಿಸಿದರು. ಆಗ ಮಧ್ಯ ಪ್ರವೇಶಿಸಿ ಮಾತನಾಡಿದ ಸಚಿವರು ಒಂದು ವೆಂಟಿಲೇಟರ್‌ ಬಳಕೆ ಮಾಡಲು 12 ಆಮ್ಲಜನಕದ ಸಿಲಿಂಡರ್‌ ಅಗತ್ಯವಿದೆ. ನಾವು ಈಗಾಗಲೇ ಆಕ್ಸಿಜನ್‌ ಕೊರತೆ ಎದುರಿಸುತ್ತಿದ್ದೇವೆ ಮತ್ತು ತಂತ್ರಜ್ಞರ ಮತ್ತು ಶುಶ್ರೂಷಕರ ಅಗತ್ಯವಿದೆ ಎಂದರು.

Advertisement

ಸಭೆಯಲ್ಲಿ ಸಭಾಪತಿ ಎಂ.ಕೆ. ಪ್ರಾಣೇಶ್‌, ಶಾಸಕ ಡಿ.ಎಸ್‌. ಸುರೇಶ್‌, ಉಪ ವಿಭಾಗಾ ಧಿಕಾರಿ ಸಿದ್ದಲಿಂಗ ರೆಡ್ಡಿ, ಡಿ.ವೈ. ಎಸ್‌.ಪಿ. ಏಗನಗೌಡರ್‌, ತಹಶೀಲ್ದಾರ್‌ ನಂದಕುಮಾರ್‌, ಅಜ್ಜಂಪುರ ತಹಶೀಲ್ದಾರ್‌ ವಿಶ್ವೇಶ್ವರ ರೆಡ್ಡಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next