ಚಿಕ್ಕಮಗಳೂರು: ಜಿಲ್ಲೆಗೆ ವಿಧಾನ ಪರಿಷತ್ ಉಪಸಭಾಪತಿ ಸ್ಥಾನ ಮತ್ತೆ ಒಲಿಯುವ·ಸಾಧ್ಯತೆ ಬಹುತೇಕ ಖಚಿತವಾಗಿದ್ದು, ಗುರುವಾರ ವಿಧಾನ ಪರಿಷತ್ ಸದಸ್ಯ ಎಂ.ಕೆ.·ಪ್ರಾಣೇಶ್ ನಾಮಪತ್ರ ಸಲ್ಲಿಸಿದ್ದಾರೆ. ಕಳೆದ ತಿಂಗಳು ಜೆಡಿಎಸ್ ಮುಖಂಡ, ಸಹಕಾರಿಧುರೀಣ ಎಸ್.ಎಲ್. ಧರ್ಮೇಗೌಡ ಅಕಾಲಿಕ ನಿಧನದಿಂದ ವಿಧಾನ ಪರಿಷತ್‌ಉಪ ಸಭಾಪತಿ ಸ್ಥಾನ ಖಾಲಿಯಾಗಿದ್ದು ಆ ಸ್ಥಾನ ಮತ್ತೆ ಜಿಲ್ಲೆಗೆ ಒಲಿಯಲಿದೆಯೇನೋಡಬೇಕಿದೆ. ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಜಿಲ್ಲೆಯ ಮೂಡಿಗೆರೆತಾಲೂಕು ಗಟ್ಟದಹಳ್ಳಿ ಗ್ರಾಮದಲ್ಲಿ 1961, ನ.28ರಂದು ಎಂ.ಯು.ಕಾಳೇಗೌಡ ಮತ್ತು ರತ್ನಮ್ಮ ದಂಪತಿ ಪುತ್ರನಾಗಿ ಜನಿಸಿದರು. ಎಂ.ಕೆ.ಪ್ರಾಣೇಶ್ ಬಿಎ ಪದವಿ ಪಡೆದಿದ್ದಾರೆ. 1989ರಿಂದ ಬಿಜೆಪಿಯಲ್ಲಿಸಕ್ರಿಯರಾದ ಅವರು, 1991ರಿಂದ 1998ರವರೆಗೆ ತಾಲೂಕುಯುವ ಮೋರ್ಚಾ ಅಧ್ಯಕ್ಷರಾಗಿ, 1998ರಿಂದ 2001ರವರೆಗೆ ಬಿಜೆಪಿಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.2000ದಿಂದ 2005ರವರೆಗೆ ಜಿಪಂ ಸದಸ್ಯರಾಗಿದ್ದರು. 2004ರಿಂದ 2007ರವರೆಗೆ ಬಿಜೆಪಿರಾಜ್ಯ ಕಾರ್ಯಕಾರಿ ಸದಸ್ಯರಾಗಿ, 2001ರಿಂದ 2004 ಮತ್ತು 2007ರಿಂದ 2011ರವರೆಗೆಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. 2010ರಿಂದ2013ರವರೆಗೆ ಜಂಗಲ್ ಲಾಡ್ಜ್$Õ ಮತ್ತು ರೆಸಾರ್ಟ್ ನಿಗಮದ ಅಧ್ಯಕ್ಷರಾಗಿದ್ದರು.
2016ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಕಾರ್ಯ ನಿರ್ವಹಿಸಿದ್ದಾರೆ.ಸದ್ಯ ವಿಧಾನ ಪರಿಷತ್ ಸದಸ್ಯರಾಗಿರುವ ಅವರು ಉಪಸಭಾಪತಿ ಸ್ಥಾನಕ್ಕೆ ನಾಮಪತ್ರಸಲ್ಲಿಸಿದ್ದು, ಅ ಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
ಓದಿ :·ಜಲಭದ್ರತಾ ಯೋಜನೆಗೆ ಜೆ.ಸಿ.ಪುರ ಗ್ರಾಪಂ ಆಯ್ಕೆ