Advertisement

ಕೋವಿಡ್‌ ಸೆಂಟರ್‌ಗೆ ಧನಸಹಾಯ

07:42 PM May 12, 2021 | Team Udayavani |

ಕಡೂರು: ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಜಿಲ್ಲೆಯಲ್ಲಿರುವ 5 ಕೋವಿಡ್‌ ಆಸ್ಪತ್ರೆಗಳ ಆರೋಗ್ಯ  ಸಮಿತಿಗೆ ತಲಾ 5 ಲಕ್ಷ ರೂ. ಸಹಾಯ ನೀಡಲಾಗಿದೆ ಎಂದು ರಾಜ್ಯ ಅಪೆಕ್ಸ್‌ ಬ್ಯಾಂಕಿನ ಅಧ್ಯಕ್ಷ ಹಾಗೂ ಶಾಸಕ ಬೆಳ್ಳಿಪ್ರಕಾಶ್‌ ತಿಳಿಸಿದರು.

Advertisement

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಾಧಿ ಕಾರಿ ಡಾ| ದೀಪಕ್‌ ಅವರಿಗೆ ಮಂಗಳವಾರ 5 ಲಕ್ಷ ರೂ.ಗಳ ಚೆಕ್‌ ನೀಡಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ತರೀಕೆರೆ ಶಾಸಕ ಎಸ್‌. ಸುರೇಶ್‌ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು ಜಿಲ್ಲೆಯಲ್ಲಿರುವ ತಾಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ  ಸಮಿತಿಗೆ ಕೋವಿಡ್‌ ನಿರ್ವಹಣೆಗಾಗಿ 5 ಲಕ್ಷ ರೂ.ಗಳನ್ನು ಕಡೂರು ಸೇರಿದಂತೆ ಇತರೆ 4 ಆಸ್ಪತ್ರೆಗಳಿಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ  ಸಮಿತಿಗೆ ಜಿಲ್ಲಾ ಸಹಕಾರ ಬ್ಯಾಂಕ್‌ ಸಹಾಯ ನೀಡಲಿದೆ ಎಂದರು.

ಕಡೂರು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರûಾ ಸಮಿತಿಗೆ ತಾಲೂಕು ಜೆಡಿಎಸ್‌ 1 ಲಕ್ಷ ರೂ.ಗಳನ್ನು ನೀಡಿದೆ. ಜೊತೆಗೆ ಚೌಳಹಿರಿಯೂರಿನ ರವಿ, ಡಾ| ಧನರಾಜ್‌, ರಾಜೇಶ್‌ ಬಾಬು ಮತ್ತಿತರರು ಔಷ ಧಗಳನ್ನು ನೀಡಿರುವುದಕ್ಕೆ ಸಮಿತಿ ಪರವಾಗಿ ಅಭಿನಂದಿಸುತ್ತೇವೆ. ದಾನಿಗಳು ಆರೋಗ್ಯ ರûಾ ಸಮಿತಿಗೆ ಚೆಕ್‌ ಮೂಲಕ ಸಹಾಯ ನೀಡಬಹುದು ಎಂದರು.

ಕೊರೊನಾ ಎರಡನೇ ಅಲೆಯು ಭೀಕರವಾಗಿದ್ದು ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಕಡೂರು ಕೋವಿಡ್‌ ಸೆಂಟರ್‌ನಲ್ಲಿ ಈಗಾಗಲೇ 194 ಜನ ಚಿಕಿತ್ಸೆಗೆ ಸೇರಿದ್ದು 135 ಜನ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 36 ಜನ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ 6 ಜನ ಸಾವನ್ನಪ್ಪಿದ್ದು ಇದರಲ್ಲಿ 3 ಜನ ಕೊರೊನಾದಿಂದ, ಉಳಿದ 3 ಜನರು ಬೇರೆ ಕಾಯಿಲೆಯಿಂದ ಮೃತಪಟ್ಟಿದ್ದಾರೆ.

ತಾಲೂಕಿನಲ್ಲಿ ಇಲ್ಲಿಯವರೆವಿಗೆ 30 ಸಾವುಗಳು ದಾಖಲಾಗಿದ್ದು ಇವುಗಳಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಆಸ್ಪತ್ರೆಗಳಿಂದ ಮೃತರಾಗಿರುವ ಮಾಹಿತಿ ಇದೆ ಎಂದರು.

Advertisement

ತಾಲೂಕು ವೈದ್ಯಾ ಧಿಕಾರಿ ಡಾ| ರವಿ, ಕಡೂರು ಸಾರ್ವಜನಿಕ ಆಸ್ಪತ್ರೆಯ ವೈದ್ಯಾ  ಧಿಕಾರಿ ಡಾ| ದೀಪಕ್‌, ಆರೋಗ್ಯ ರûಾ ಸಮಿತಿಯ ಸದಸ್ಯರಾದ ಡಾ| ದಿನೇಶ್‌, ಡಾ| ಶಿವಕುಮಾರ್‌, ಸಿ.ಕೆ.ಮೂರ್ತಿ, ಜಿಪಂ ಮಾಜಿ ಸದಸ್ಯ ಕೆ.ಆರ್‌. ಮಹೇಶ್‌ ಒಡೆಯರ್‌, ಬಿಜೆಪಿ ವಕ್ತಾರ ಶಾಮಿಯಾನ ಚಂದ್ರು, ಕಡೂರು ವೃತ್ತ ನಿರೀಕ್ಷಕ ಮಂಜುನಾಥ್‌, ಪುರಸಭೆ ಮುಖ್ಯಾಧಿಕಾರಿ ಎಚ್‌.ಎನ್‌. ಮಂಜುನಾಥ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next