Advertisement
ತರೀಕೆರೆ ತಾಲ್ಲೂಕಿನ ನಾಲ್ಕು ಪೊಲೀಸ್ ಸಿಬ್ಬಂದಿ, ಮಹಾರಾಷ್ಟ್ರದಿಂದ ಇತ್ತೀಚೆಗೆ ಎನ್‍ಆರ್‍ಪುರ ತಾಲ್ಲೂಕಿಗೆ ಬಂದಿದ್ದ ಇಬ್ಬರು, ತಮಿಳುನಾಡಿನಿಂದ ಕೊಪ್ಪ ತಾಲ್ಲೂಕಿಗೆ ಬಂದ ಒಬ್ಬರಿಗೆ ಹಾಗೂ ಕುವೈತ್‍ನಿಂದ ಶೃಂಗೇರಿ ತಾಲ್ಲೂಕಿಗೆ ಬಂದಿದ್ದ ಒಬ್ಬರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾಣ ಬಗಾದಿ ಗೌತಮ್ ತಿಳಿಸಿದ್ದಾರೆ.
Related Articles
Advertisement
ಕುವೈತ್‍ನಿಂದ ಶೃಂಗೇರಿ ಪಟ್ಟಣಕ್ಕೆ ಬಂದಿದ್ದ 23ವರ್ಷದ ಮಹಿಳೆ ಗರ್ಭಿಣಿ ಸೇರಿದಂತೆ ನಾಲ್ವರು ಪೊಲೀಸರು ಹಾಗೂ ಹೊರ ರಾಜ್ಯದಿಂದ ಬಂದವರಲ್ಲಿ ಸೋಂಕು ಪತ್ತೆಯಾಗಿದೆ. ಇನ್ನೂ ತರೀಕೆರೆ ಪಟ್ಟಣದ ಡಿವೈಎಸ್‍ಪಿ ಸೇರಿದಂತೆ ನಾಲ್ಕು ಜನ ಪೊಲೀಸ್ ಸಿಬ್ಬಂದಿಗೆ ಸೋಂಕು ಹೇಗೆ ತಗುಲಿದೆ ಎಂದು ಪತ್ತೆ ಹಚ್ಚಲಾಗುತ್ತಿದೆ.
ತರೀಕೆರೆ ತಾಲ್ಲೂಕು ಡಿವೈಎಸ್‍ಪಿ ಕಚೇರಿಯನ್ನೇ ಸೀಲ್‍ಡೌನ್ ಮಾಡಲು ಜಿಲ್ಲಾಡಳಿತ ಮುಂದಾಗಿದ್ದು, ಪೊಲೀಸರ ಟ್ರಾವೆಲ್ ಹಿಸ್ಟರಿ ಭಯಾನಕವಾಗಿದೆ ಎಂದು ತಿಳಿದು ಬಂದಿದೆ. ಒಟ್ಟಾರೆ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಸೋಂಕು ಏರಿಕೆಯಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಇಷ್ಟು ದಿನಗಳ ಕಾಲ ಹೊರ ರಾಜ್ಯದಿಂದ ಜಿಲ್ಲೆಗೆ ಬಂದವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿತ್ತು, ಆದರೆ, ಕಳೆದ ಮೂರ್ನಾಕು ದಿನಗಳಿಂದ ಕಂಡು ಬರುತ್ತಿರುವ ಕೆಲವು ಸೋಂಕಿತ ಪ್ರಕರಣಗಳು ಸ್ಥಳೀಯರಾಗಿದ್ದು ಸೋಂಕು ಸಮುದಾಯಿಕವಾಗಿ ಹರಡುತ್ತಿದೇಯಾ ಎಂಬ ಅನುಮಾನವು ಕಾಡುತ್ತಿದೆ.
ಜೂನ್ ತಿಂಗಳ ಎರಡು ಮತ್ತು ಮೂರನೇ ವಾರ ಜಿಲ್ಲೆಗೆ ಕೋವಿಡ್-19 ಕಂಟಕವಾಗಿ ಪರಿಣಮಿಸಿದೆ. ಅಜ್ಜಂಪುರದ 72ವರ್ಷದ ವೃದ್ಧೆಯನ್ನು ಬಲಿ ಪಡೆದುಕೊಳ್ಳುವ ಮೂಲಕ ಕೋವಿಡ್-19 ಗೆ ಜಿಲ್ಲೆಯಲ್ಲಿ ಮೊದಲ ಬಲಿ ಪಡೆದುಕೊಂಡಿತು. ಅದರ ಬೆನ್ನಲ್ಲೇ ಕಾರಾಗೃಹದಲ್ಲಿರುವ ಖೈದಿಗೆ ಕೋವಿಡ್-19 ವಕ್ಕರಿಸಿಕೊಂಡಿದೆ. ಕಾರಾಗೃಹ ಸಿಬ್ಬಂದಿ ಬೆಚ್ಚಿಬೀಳುವಂತೆ ಮಾಡಿತು. ಶನಿವಾರ ತರೀಕೆರೆ ತಾಲ್ಲೂಕಿನ ನಾಲ್ಕುಮಂದಿ ಪೊಲೀಸ್ ಸಿಬ್ಬಂದಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಹೆಮ್ಮಾರಿ ಖಾಕಿಗೂ ಕಂಟಕವಾಗಿದೆ.