ಚಿಕ್ಕಮಗಳೂರು: ಜಿಲ್ಲೆಯ ಭದ್ರಾ ಜಲಾಶಯ ಹಿನ್ನೀರುಪ್ರದೇಶ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದ್ದು,ಪ್ರವಾಸಿಗರು ಪ್ರತಿ ನಿತ್ಯ ಇಲ್ಲಿಗೆ ಭೇಟಿ ನೀಡಿ ಇಲ್ಲಿನಪರಿಸರವನ್ನು ಸವಿಯುತ್ತಾರೆ. ಸದ್ಯ ಜಲಾಶಯದನೀರು ಕಡಿಮೆ ಇದ್ದು, ಅಲ್ಲಿರುವ ನಡುಗಡ್ಡೆಗಳುಪಕ್ಷಿಗಳ ಹೆರಿಗೆ ಆಸ್ಪತ್ರೆಯಾಗಿ ಮಾರ್ಪಟ್ಟಿವೆ..!
ಇದೇನು ಎಂದು ಅಚ್ಚರಿ ಪಡಬೇಡಿ. ಬೇಸಿಗೆಕಾಲ ಆರಂಭವಾಗುತ್ತಿದ್ದಂತೆ ಇಲ್ಲಿಗೆ ಲಕ್ಷಾಂತರಕಿ.ಮೀ. ದೂರದಿಂದ ಪಕ್ಷಗಳು ವಲಸೆ ಬರುತ್ತವೆ.ನಡುಗಡ್ಡೆಯಲ್ಲಿ ತಮ್ಮ ಸಂತಾನೋತ್ಪತಿವೃದ್ಧಿಸಿಕೊಂಡು ಮತ್ತೆ ತಮ್ಮೂರಿಗೆ ಮರಳುತ್ತವೆ.ಪಕ್ಷಿಗಳು ಇಲ್ಲಿ ನೆಲೆಸಿದ ದಿನವಷ್ಟು ಇಂಪಾದಅವುಗಳ ಕೂಗು, ಹಾರಾಟ ಪ್ರವಾಸಿಗರಿಗೆ ಮುದನೀಡುತ್ತವೆ.ರಿವರ್‌ಟರ್ನ್ ಪಕ್ಷಿಗಳು ಇಲ್ಲಿ ನೆಲೆ ನಿಂತಿದ್ದು,ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ನಿರತವಾಗಿದ್ದುಸಾವಿರಾರು ಪಕ್ಷಿಗಳನ್ನು ನೋಡಬಹುದಾಗಿದೆ.
ರಿವರ್‌ಟರ್ನ್ ಪಕ್ಷಿ ಮೂಲತಃ ಉತ್ತರ ಭಾರತದಹಿಮಾಲಯದಲ್ಲಿ ನೆಲೆಸಿರುವ ಪಕ್ಷಿಯಾಗಿದ್ದು,ಮೈಮೇಲೆ ಐದು ಬಣ್ಣ ಹಾಗೂ ಸುಂದರದೇಹಾ ಕಾರವನ್ನು ಹೊಂದಿದ್ದು ಪ್ರವಾಸಿಗರನ್ನುಆಕರ್ಷಿಸುತ್ತಿವೆ.ಜಲಾಶಯದಲ್ಲಿ 5 ರಿಂದ 6 ಸಣ್ಣ ನಡುಗಡ್ಡೆಗಳಿದ್ದುಮಳೆಗಾಲದಲ್ಲಿ ನೀರಿನಲ್ಲಿ ಮುಳುಗಿರುತ್ತವೆ.
ಬೇಸಿಗೆ ಆರಂಭವಾಗುತ್ತಿದಂತೆ ನೀರಿನ ಪ್ರಮಾಣಕಡಿಮೆಯಾಗುತ್ತಿದ್ದಂತೆ ನಡುಗಡ್ಡೆಗಳು ತಲೆಎತ್ತುತ್ತವೆ. ಮಳೆಗಾಲಕ್ಕೂ 4 ತಿಂಗಳ ಮುಂಚೆ3 ರಿಂದ 4 ಸಾವಿರದಷ್ಟು ಗಂಡು ಮತ್ತು ಹೆಣ್ಣುಪಕ್ಷಿಗಳು ಜೊತೆ ಯಾಗಿ ಇಲ್ಲಿಗೆ ಬಂದು ದ್ವೀಪಪ್ರದೇಶದಲ್ಲಿ ನೆಲೆಸುತ್ತವೆ.
ಸಂದೀಪ ಜಿ.ಎನ್. ಶೇಡ್ಗಾರ್