Advertisement

ಮೆಸ್ಕಾಂ  ಬಿಲ್‌ ತನಿಖೆ ನಡೆಸಿ: ರವಿ

05:04 PM Jun 08, 2022 | Team Udayavani |

ಚಿಕ್ಕಮಗಳೂರು: ತಾಲೂಕಿನ ಮರ್ಲೆ ಪಂಚಾಯತ್‌ವ್ಯಾಪ್ತಿಯಲ್ಲಿ 8 ಕೊಳವೆ ಬಾವಿಗಳನ್ನುಕೊರೆಸಲಾಗಿದ್ದು, ವಿದ್ಯುತ್‌ ಸಂಪರ್ಕ ನೀಡಿಲ್ಲ.ಮೆಸ್ಕಾಂ ಇಲಾಖೆಯಿಂದ ಬಿಲ್‌ ಬಂದಿದ್ದು ಈಸಂಬಂಧ ತನಿಖೆ ನಡೆಸುವಂತೆ ಶಾಸಕ ಸಿ.ಟಿ. ರವಿಸಂಬಂಧಪಟ್ಟ ಅ ಧಿಕಾರಿಗೆ ಸೂಚಿಸಿದರು.

Advertisement

ಮಂಗಳವಾರ ನಗರದ ತಾಪಂ ಸಭಾಂಗಣದಲ್ಲಿನಡೆದ ತ್ತೈಮಾಸಿಕ ವಿವಿಧ ಇಲಾಖೆಗಳ ಪ್ರಗತಿಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರುಮಾತನಾಡಿದರು. ಮರ್ಲೆ ಪಂಚಾಯತ್‌ವ್ಯಾಪ್ತಿಯಲ್ಲಿ 8 ಕೊಳವೆ ಬಾವಿ ಕೊರೆಯಲಾಗಿದೆ.ವಿದ್ಯುತ್‌ ಸಂಪರ್ಕ ನೀಡಲಾಗಿಲ್ಲ, ಮೆಸ್ಕಾಂಇಲಾಖೆಯಿಂದ ಬಿಲ್‌ ಬಂದಿದೆ ಎಂದು ಕೆಡಿಪಿಸಭೆಯ ನಾಮಕರಣ ಸದಸ್ಯ ರಾಜು ಸಭೆಯಗಮನಕ್ಕೆ ತಂದರು.

ವಿದ್ಯುತ್‌ ಸಂಪರ್ಕ ನೀಡದೆಬಿಲ್‌ ಬರಲು ಸಾಧ್ಯವಿಲ್ಲ. ಈ ಸಂಬಂಧ ತನಿಖೆನಡೆಸುವಂತೆ ಶಾಸಕ ಸಿ.ಟಿ. ರವಿ ಜಿಲ್ಲಾ ಧಿಕಾರಿಗಳಿಗೆಸೂಚಿಸಿದರು.ತಾಲೂಕಿನಲ್ಲಿ 181 ಸ್ಮಶಾನ ಭೂಮಿಒತ್ತುವರಿಯಾಗಿದ್ದು, 96 ಒತ್ತುವರಿತೆರವುಗೊಳಿಸಲು ಬಾಕಿ ಇದೆ ಎಂದು ಇಲಾಖೆ ಅಧಿಕಾರಿ ಸಭೆಯ ಗಮನಕ್ಕೆ ತಂದರು. ಸ್ಮಶಾನ ಭೂಮಿಒತ್ತುವರಿಯನ್ನು 3 ತಿಂಗಳಲ್ಲಿ ತೆರವುಗೊಳಿಸಬೇಕುಹಾಗೂ ಸ್ಮಶಾನ ಇಲ್ಲದ ಗ್ರಾಮಗಳನ್ನು ಗುರುತಿಸಿವರದಿ ನೀಡುವಂತೆ ಸಿ.ಟಿ. ರವಿ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next