ಚಿಕ್ಕಮಗಳೂರು: ಕಡೂರು ತಾಲೂಕು ಎಮ್ಮೆದೊಡ್ಡಿಯಲ್ಲಿ36ಲಕ್ಷ ರೂ. ವೆಚ್ಚದಲ್ಲಿ ಗೋಶಾಲೆ ನಿರ್ಮಾಣವಾಗುತ್ತಿದ್ದು,15 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಶೀಘ್ರದಲ್ಲೆಉದ್ಘಾಟನೆಗೊಳ್ಳಲಿದೆ ಎಂದು ಪಶುಪಲನಾ ಮತ್ತು ಪಶುವೈದ್ಯಸೇವಾ ಇಲಾಖೆ ಉಪನಿರ್ದೇಶಕ ಡಾ|ಎಂ.ಪ್ರಕಾಶ್‌ತಿಳಿಸಿದರು.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗೋಶಾಲೆ 11 ಎಕರೆ ಪ್ರದೇಶ ದಲ್ಲಿ ನಿರ್ಮಿಸಲಾಗಿದ್ದು, 250ಜಾನುವಾರುಗಳಿಗೆ ಆಶ್ರಯ ನೀಡಬಹುದಾಗಿದೆ.
ಈ ಹಿಂದೇಇಲ್ಲಿ ಗೋಶಾಲೆ ಇದ್ದು ಅದನ್ನು ನವೀಕರಿಸಿ ನಿರ್ಮಿಸುವಜವಬ್ದಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದೆ ಎಂದರು.ಜಿಲ್ಲೆಯಲ್ಲಿ ಡಿ.16ರಿಂದ ಜಾನುವಾರುಗಳಿಗೆ ಕಾಲುಬಾಯಿಲಸಿಕೆ ಹಾಕಲಾಗುತ್ತಿದೆ. ಈ ಕಾರ್ಯಕ್ಕೆ 82ತಂಡಗಳನ್ನುರಚಿಸಲಾಗಿದೆ. ಪ್ರತೀ ತಂಡದಲ್ಲಿ ಇಬ್ಬರು ಅಥವಾ ಒಬ್ಬರುಕಾರ್ಯನಿರ್ವಹಿಸಲಿದ್ದಾರೆ ಲಸಿಕೆ ಹಾಕುವ ಕಾರ್ಯ ಇನ್ನೂ15ದಿನ ಹೆಚ್ಚುವರಿಯಾಗಿ ಪಡೆದುಕೊಳ್ಳಲಾಗಿದೆ ಎಂದುಹೇಳಿದರು. ಜಿಲ್ಲೆಯಲ್ಲಿ ಪ್ರತೀನಿತ್ಯ 1.61 ಲಕ್ಷ ಲೀಟರ್ ಹಾಲುಉತ್ಪಾದನೆಯಾಗುತ್ತಿದೆ.
ಸರ್ಕಾರ ಪ್ರತೀ ಲೀಟರ್ ಹಾಲಿಗೆ 5ರೂ. ಪ್ರೋತ್ಸಾಹಧನ ನೀಡುತ್ತಿದೆ. ಚಿಕ್ಕಮಗಳೂರು, ಕಡೂರು,ತರೀಕೆರೆ ತಾಲೂಕಿನಲ್ಲಿ ಉತ್ಪಾದನೆಯಾಗುವ ಹಾಲನ್ನು ಹಾಸನಡೈರಿ ಖರೀದಿಸುತ್ತಿದೆ. ಮಲೆನಾಡು ಭಾಗದಲ್ಲಿ ದೊರೆಯುವಹಾಲನ್ನು ಖಾಸಗಿ ವ್ಯಕ್ತಿಗಳು ಸಂಗ್ರಹಿಸಿ ಶಿವಮೊಗ್ಗ ಡೈರಿಗೆನೀಡುತ್ತಿದ್ದಾರೆ ಎಂದು ತಿಳಿಸಿದರು.ನ.15ರಿಂದ ಫೆ.15ರ ವರೆಗೆ ಪ್ರತೀ ಶುಕ್ರವಾರ ಹೊಸ ಕಿಸಾನ್‌ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸುವ ವಿಶೇಷ ಅಭಿಯಾನವನ್ನುಹಮ್ಮಿಕೊಳ್ಳಲಾಗಿದೆ.
ರಾಷ್ಟ್ರೀಕೃತ ಬ್ಯಾಂಕ್, ಸಹಕಾರ ಸಂಸ್ಥೆಗಳಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ಒದಗಿಸಲುನಿರ್ದೇಶಿಸಲಾಗಿದೆ. ಪಶುಸಂಗೋಪನೆ ಚಟುವಟಿಕೆಗಳಿಗೆಹೊಸ ಕಿಸಾನ್‌ಕ್ರೆಡಿಟ್‌ಕಾರ್ಡ್ ವಿತರಣಾ ಅಭಿಯಾನವನ್ನುಕೇಂದ್ರ ಸರ್ಕಾರ ಹಮ್ಮಿಕೊಂಡಿದ್ದು, ಪಶುಸಂಗೋಪನಾಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ನಿರ್ವಹಣಾವೆಚ್ಚಭರಿಸಲು ಕುರಿ, ಮೇಕೆ, ಹಂದಿ, ಕೋಳಿ ಸಾಕಾಣಿಕೆಗೆದುಡಿಮೆ ಬಂಡವಾಳವನ್ನು ಅರ್ಹ ರೈತರಿಗೆ ನೆರವುಒದಗಿಸಲಾಗುವುದು ಎಂದು ಹೇಳಿದರು.
ಯೋಜನೆಯಡಿ ಒಟ್ಟು 250 ಅರ್ಜಿಗಳು ಬಂದಿದ್ದು,ಅವುಗಳನ್ನು ಬ್ಯಾಂಕ್‌ಗಳಿಗೆ ಕಳುಹಿಸಿಕೊಡಲಾಗಿದೆ.ಹೆ„ನುಗಾರಿಕೆಯಲ್ಲಿ ಮಿಶ್ರತಳಿ ದನಗಳ ಸಾಕಲು ಪ್ರತಿಹಸುವಿಗೆಗರಿಷ್ಟ 14ಸಾವಿರ ರೂ. ಸೇರಿದಂತೆ ಎರಡು ರಾಸುಗಳಿಗೆ 28ಸಾವಿರ, ಸುಧಾರಿತ ಎಮ್ಮೆ ಸಾಕಾಣಿಕೆಗೆ ಪ್ರತಿ ಎಮ್ಮೆಗೆ 15ಸಾವಿರರೂ.ನಂತೆ 2 ಎಮ್ಮೆಗಳಿಗೆ 32ಸಾವಿರ ರೂ. ಸಾಲಸೌಲಭ್ಯನೀಡಲಾಗುವುದು ಎಂದರು.