Advertisement

ಕಿರು ಉದ್ಯಾನವನ ನಿರ್ಮಾಣಕ್ಕೆ ಚಾಲನೆ

03:59 PM Dec 12, 2021 | Team Udayavani |

ಚಿಕ್ಕಮಗಳೂರು: ಮುಂದಿನ ಪೀಳಿಗೆಗೆಪರಿಸರ ಉಳಿಸುವ ನಿಟ್ಟಿನಲ್ಲಿವಿದ್ಯಾರ್ಥಿಗಳು ಈಗಿನಿಂದಲೇಗಿಡಮರಗಳನ್ನು ನೆಟ್ಟು ಬೆಳೆಸಲುಮುಂದಾಗಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್‌ ಹೇಳಿದರು.

Advertisement

ಶುಕ್ರವಾರ ನಗರದ ಹೊರವಲಯದಹಿರೇಮಗಳೂರು ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ ಆವರಣದಲ್ಲಿ ಕಿರು ಉದ್ಯಾನವನ ನಿರ್ಮಾಣಕ್ಕೆ ಚಾಲನೆನೀಡಿ ಅವರು ಮಾತನಾಡಿದರು.ಆಧುನೀಕರಣಗೊಳ್ಳುವ ಭರದಲ್ಲಿಪರಿಸರ ನಾಶ ಮಾಡಿದ ಪರಿಣಾಮಇಂದು ಅತಿವೃಷ್ಠಿ, ಅನಾವೃಷ್ಠಿ, ಪ್ರಕೃತಿವಿಕೋಪಗಳು ಸಂಭವಿಸುತ್ತಿವೆ.

ಪರಿಸರನಾಶದಿಂದ ವಾಯು ಮಾಲಿನ್ಯಉಂಟಾಗುತ್ತಿದ್ದು ಉಸಿರಾಡಲು ಶುದ್ಧಆಮ್ಲಜನಕ ಇಲ್ಲದಂತಾಗಿದೆ ಎಂದುವಿಷಾ ದಿಸಿದರು.ಹಿರೇಮಗಳೂರು ಸರ್ಕಾರಿ ಹಿರಿಯಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಎ.ಈ. ಅಶೋಕ್‌ ಮಾತನಾಡಿ, ಶಾಲೆಯಅಭಿವೃದ್ಧಿ ಮತ್ತು ಉದ್ಯಾನವನನಿರ್ಮಾಣಕ್ಕೆ ಸಹಕರಿಸಿದ ಶಾಲಾಸಮಿತಿ, ಗ್ರಾಮಸ್ಥರು ಹಾಗೂ ದಾನಿಗಳಿಗೆಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.ಕಿರು ಉದ್ಯಾನವನ ನಿರ್ಮಾಣದ ಹಿನ್ನೆಲೆಶಾಲಾ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು.

ಜಿಲ್ಲಾಶಿಕ್ಷಣಾ ಧಿಕಾರಿ ರಂಗನಾಥಸ್ವಾಮಿ, ಕ್ಷೇತ್ರಸಮನ್ವಯಾ ಧಿಕಾರಿ ಜಯರಾಮ್‌,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಜಿಲ್ಲಾಧ್ಯಕ್ಷ ಪರಮೇಶ್ವರಪ್ಪ, ತಾಲೂಕುಅಧ್ಯಕ್ಷ ಕಿರಣ್‌ಕುಮಾರ್‌, ಶಿಕ್ಷಕರಾದಗೀತಾ, ವಾಣೇಶ್ವರಿ, ಸುಧಾ, ವಿಲ್ಮಾಗೊನ್ಸಾಲ್ವಿಸ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next