Advertisement

ಪರಿಷತ್‌ “ಕೈ’ಅಭ್ಯರ್ಥಿ ನಾಮಪತ್ರ ಸಲ್ಲಿಕೆ

10:26 AM Nov 20, 2021 | Team Udayavani |

ಚಿಕ್ಕಮಗಳೂರು: ವಿಧಾನ ಪರಿಷತ್‌ ಚುನಾವಣೆಘೋಷಣೆಯಾಗಿದ್ದು, ಕಾಂಗ್ರೆಸ್‌ ಅಭ್ಯರ್ಥಿಯಾಗಿಗಾಯತ್ರಿ ಶಾಂತೇಗೌಡ ಶುಕ್ರವಾರ ನಾಮಪತ್ರಸಲ್ಲಿಸಿದರು.ಶುಕ್ರವಾರ ಮಧ್ಯಾಹ್ನ ಜಿಲ್ಲಾ ಧಿಕಾರಿ ಕಚೇರಿಗೆ ಪಕ್ಷದಕಾರ್ಯಕರ್ತರೊಂದಿಗೆ ಆಗಮಿಸಿದ ಅವರು ಜಿಲ್ಲಾ ಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿ ಕಾರಿ ಕೆ.ಎನ್‌. ರಮೇಶ್‌ಅವರನ್ನು ಭೇಟಿ ಮಾಡಿ ನಾಮಪತ್ರ ಸಲ್ಲಿಸಿದರು.

Advertisement

ನಾಮಪತ್ರ ಸಲ್ಲಿಸುವ ವೇಳೆ ಶೃಂಗೇರಿ ಕ್ಷೇತ್ರದ ಶಾಸಕಟಿ.ಡಿ. ರಾಜೇಗೌಡ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ| ಕೆ.ಪಿ.ಅಂಶುಮಂತ್‌, ಮಾಜಿ ಸಚಿವ ಸಗೀರ್‌ ಅಹಮದ್‌,ತರೀಕೆರೆ ಕ್ಷೇತ್ರದ ಮಾಜಿ ಶಾಸಕ ಜಿ.ಎಚ್‌. ಶ್ರೀನಿವಾಸ್‌,ಮಹಡಿಮನೆ ಸತೀಶ್‌ ಸೇರಿದಂತೆ ಅನೇಕರು ಇದ್ದರು. ವಿಧಾನ ಪರಿಷತ್‌ ಚುನಾವಣೆ ಘೋಷಣೆಯಾದ ಬಳಿಕ ಜಿಲ್ಲೆಯಲ್ಲಿ ಇಂದು ಮೊದಲ ನಾಮ ಪತ್ರಸಲ್ಲಿಕೆಯಾಗಿದ್ದು, ನಾಮಪತ್ರ ಸಲ್ಲಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಗಾಯತ್ರಿ ಶಾಂತೇಗೌಡ,ಇಂದಿರಾ ಗಾಂ ಧಿ ಅವರ 104ನೇ ಜನ್ಮದಿನದಂದು ನಾಮಪತ್ರ ಸಲ್ಲಿಸಿದ್ದೇನೆ.

ಬಿಜೆಪಿ ಸರ್ಕಾರದ ದೌರ್ಜನ್ಯ,ದಬ್ಟಾಳಿಕೆಯಿಂದ ಜನರು ಬೇಸತ್ತಿದ್ದು, ನನ್ನನ್ನು ವಿಧಾನಪರಿಷತ್‌ ಚುನಾವಣೆಯಲ್ಲಿ ಗೆಲ್ಲಿಸುವ ವಿಶ್ವಾಸವಿದೆಎಂದರು.ಈ ಹಿಂದೆ ವಿಧಾನ ಪರಿಷತ್‌ ಸದಸ್ಯೆಯಾಗಿದ್ದಸಂದರ್ಭದಲ್ಲಿ ಉತ್ತಮ ಕೆಲಸಗಳನ್ನು ಮಾಡುವಮೂಲಕ ಪಕ್ಷ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದೇನೆ.ಎಐಸಿಸಿ ಅಧ್ಯಕ್ಷೆ ಸೋನಿಯ ಗಾಂಧಿ ಹಾಗೂ ರಾಹುಲ್‌ಗಾಂಧಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ ಮುಖಡರ ಅಭಿಲಾಷೆಯಂತೆ ಚಿಕ್ಕಮಗಳೂರು ಕ್ಷೇತ್ರದಅಭ್ಯರ್ಥಿಯನ್ನಾಗಿ ಮಾಡಿದ್ದಾರೆ ಎಂದರು.

ಗ್ರಾಪಂ ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರು,ಮುಖಂಡರು ಉತ್ಸುಕ ರಾಗಿದ್ದು, ಈ ಬಾರಿಯಚುನಾವಣೆಯಲ್ಲಿ ಗೆಲ್ಲುವುದರೊಂದಿಗೆ ಗ್ರಾಮಗಳಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದ ಅವರು, ವಿಧಾನಪರಿಷತ್‌ ಸದಸ್ಯರಿಗೆ ತಮ್ಮ ಅವ ಧಿಯಲ್ಲಿ 12 ಕೋಟಿರೂ. ಅನುದಾನ ಬರುತ್ತದೆ. ಆದರೆ, ಈ ಹಿಂದಿನ ವಿಧಾನಪರಿಷತ್‌ ಶಾಸಕರ ಸಾಧನೆ ಶೂನ್ಯವಾಗಿದ್ದು, ಗ್ರಾಪಂಗಳಿಗೆಜನರೇಟರ್‌ಗಳನ್ನು ನೀಡಿದ್ದನ್ನು ಹೊರತುಪಡಿಸಿಉಳಿದಂತೆ ಅವರ ಸಾಧನೆ ಶೂನ್ಯವಾಗಿದೆ.

ಮೊದಲ ಬಾರಿವಿಧಾನ ಪರಿಷತ್‌ ಸದಸ್ಯೆಯಾಗಿದ್ದ ಸಂದರ್ಭದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದು ಕ್ಷೇತ್ರದ ಜನತೆಅವಕಾಶ ನೀಡಿದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನುಮಾಡುತ್ತೇನೆ ಎಂದರು.ಮಾಜಿ ಸಚಿವ ಸಗೀರ್‌ ಅಹಮದ್‌ ಮಾತನಾಡಿ,ವಿಧಾನ ಪರಿಷತ್‌ ಸ್ಥಾನಕ್ಕೆ ಗಾಯತ್ರ ಶಾಂತೇಗೌಡಅವರನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಒಮ್ಮತದಿಂದಆಯ್ಕೆ ಮಾಡಿದ್ದು ಬಿಜೆಪಿಯವರ ದುರಾಡಳಿತದಿಂದಬೇಸತ್ತ ಜನರು ಕಾಂಗ್ರೆಸ್‌ ಅಭ್ಯರ್ಥಿಯನ್ನುಬೆಂಬಲಿಸಲಿದ್ದಾರೆ ಎಂದರು.

Advertisement

ತರೀಕೆರೆ ಕ್ಷೇತ್ರದ ಮಾಜಿ ಶಾಸಕ ಜಿ.ಎಚ್‌. ಶ್ರೀನಿವಾಸ್‌ಮಾತನಾಡಿ, ಎಲ್ಲರೂ ಒಮ್ಮತದಿಂದ ಗಾಯತ್ರಿಶಾಂತೇಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆಮಾಡಿದ್ದು, ಗಾಯತ್ರಿ ಶಾಂತೇಗೌಡ ಅವರು ಗೆಲವು ಸಾಧಿಸಲಿದ್ದಾರೆ ಎಂದರು.ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ,ಬಿಜೆಪಿ ಸರ್ಕಾರದ ದುರಾಡಳಿತದಿಂದ ಪಂಚಾಯತ್‌ಗಳಿಗೆ ನೀಡಿದ ಅನುದಾನದ ಬಡ್ಡಿ ಹಣವನ್ನು ವಾಪಸ್‌ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಥಳೀಯಸಂಸ್ಥೆಗಳಿಗೆ ಶಕ್ತಿ ಬರಬೇಕಾದರೆ ಮತ್ತು ವೀಕೇಂದ್ರೀಕರಣವ್ಯವಸ್ಥೆ ಉಳಿಯಬೇಕಾದರೆ ಕಾಂಗ್ರೆಸ್‌ ಅಭ್ಯರ್ಥಿಯನ್ನುಗೆಲ್ಲಿಸುವಂತೆ ಮನವಿ ಮಾಡಿದರು.ಕಾಂಗ್ರೆಸ್‌ ಮುಖಂಡರಾದ ಎಂ.ಎಲ್‌. ಮೂರ್ತಿ,ಮಹಡಿಮನೆ ಸತೀಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷಎಚ್‌.ಪಿ. ಮಂಜೇಗೌಡ, ಬಿ.ಎಂ. ಸಂದೀಪ್‌,ಅಕ್ಮಲ್‌, ಜಿಪಂ ಮಾಜಿ ಅಧ್ಯಕ್ಷ ಕೆ. ಮಹಮದ್‌,ಡಾ| ವಿಜಯಕುಮಾರ್‌, ಹಿರೇಮಗಳೂರು ಪುಟ್ಟಸ್ವಾಮಿಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next