ಚಿಕ್ಕಮಗಳೂರು: ಹವಾಮಾನವೈಪರೀತ್ಯದಿಂದ ಕಾಫಿ ಮತ್ತುಕಾಳುಮೆಣಸು ಬೆಳೆ ಬಹುತೇಕನಾಶವಾಗಿದ್ದು, ಸರ್ಕಾರ ಬೆಳೆಗಾರರಿಗೆಶೀಘ್ರವೇ ಸೂಕ್ತ ಪರಿಹಾರನೀಡಬೇಕೆಂದು ಆವತಿ ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಚ್.ಎನ್. ಶ್ರೀಧರ್ ಆಗ್ರಹಿಸಿದರು.
ಬುಧವಾರ ನಗರದಲ್ಲಿಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿಸುರಿದ ಅಕಾಲಿಕ ಮಳೆಯಿಂದ ಹೂವಾಗಿದ್ದ ಕಾಫಿ ಶೇ.50ರಷ್ಟು ಹಣ್ಣಾಗಿಕೊಯ್ಲಿಗೆ ಬಂದಿದೆ. ಕಳೆದ 10 ದಿನದಿಂದಸುರಿಯುತ್ತಿರುವ ಮಳೆಯಿಂದ ಕೊಯ್ಲು ಸಾಧ್ಯವಾಗದೆ. ಉಳದಿದಂತೆ ಕಾಫಿ ನೆಲಕಚ್ಚಿದೆ ಎಂದರು.
ಹವಾಮಾನ ಇಲಾಖೆಯಂತೆಮಳೆ ಮುಂದುವರೆಯುವ ಸಾಧ್ಯತೆಇದ್ದು, ಕಾಫಿ ಬೆಳೆ ಉಳಿಸಿಕೊಳ್ಳಲು ಕಷ್ಟವಾಗಿದೆ. ಕಷ್ಟಕಾಲದಲ್ಲಿ ಬೆಳೆಗಾರರಕೈಹಿಡಿಯುತ್ತಿದ್ದ ಕಾಳುಮೆಣಸುಶೇ.90ರಷ್ಟು ಇಳುವರಿ ಕಡಿಮೆಯಾಗಿದೆ.ಇದರಿಂದ ಬೆಳೆಗಾರರು ಮತ್ತಷ್ಟು ನಷ್ಟಕ್ಕೆಒಳಗಾಗಿದ್ದಾರೆ ಎಂದರು.
ಬೆಳೆಗಾರರು ಬ್ಯಾಂಕ್‌ಗಳಲ್ಲಿಪಡೆದಿರುವ ಸಾಲವನ್ನು ಮರುಪಾವತಿಮಾಡಲು ಸಾಧ್ಯ ವಾಗುತ್ತಿಲ್ಲ,ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಬೆಳೆಗಾರರುಸರ್ಫೆಸಿ ಕಾಯ್ದೆಯಡಿ ಬ್ಯಾಂಕ್‌ಗಳುನೋಟಿಸ್ ಜಾರಿ ಮಾಡಿವೆ. ಈ ಕುರಿತುಕೇಂದ್ರ ಸಚಿವರು, ರಾಜ್ಯ ಸರ್ಕಾರದಗಮನ ಕ್ಕೆ ತಂದರೂ ಯಾವುದೇಪ್ರಯೋಜನವಾಗಿಲ್ಲ ಎಂದುತಿಳಿಸಿದರು.ಚಿಕ್ಕಮಗಳೂರು ತಾಲೂಕುಅತೀವೃಷ್ಟಿ ಪ್ರದೇಶ ಎಂದು ಸರ್ಕಾರ ಘೋಷಿಸಿದೆ.
ಆದರೆ, ಬೆಳೆನಷ್ಟಹೊಂದಿದ ಯಾವುದೇ ರೈತ,ಬೆಳೆಗಾರರಿಗೂ ಈವರೆಗೆ ಪರಿಹಾರನೀಡಿಲ್ಲ, ಕೂಡಲೇ ತೋಟಗಾರಿಕೆಇಲಾಖೆ ಬೆಳೆನಷ್ಟ ಸರ್ವೇಕಾರ್ಯನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದಕಾರ್ಯದರ್ಶಿ ಮಹೇಶ್, ಕೆ.ಜಿ.ಎಫ್‌ಉಪಾಧ್ಯಕ್ಷ ಎ.ಕೆ. ವಸಂತೇಗೌಡ,ಬೆಳೆಗಾರರಾದ ಮಲ್ಲೇಶಗೌಡ, ಪ್ರಸನ್ನ,ಎ.ಟಿ.ವಸಂತಕುಮಾರ್, ಪ್ರಭಾ ಕರ,ನಾರಾಯಣಗೌಡ ಇದ್ದರು.