ಚಿಕ್ಕಮಗಳೂರು: ಶ್ರೀರಾಮಸೇನೆ ವತಿಯಿಂದ ಪ್ರತೀವರ್ಷ ಆಯೋಜಿಸುವ ದತ್ತಮಾಲಾ ಅಭಿಯಾನಕ್ಕೆಸೋಮವಾರ ವಿಧ್ಯುಕ್ತ ಚಾಲನೆ ದೊರೆಯಿತು.ನಗರದ ಶಂಕರಮಠದಲ್ಲಿ ಕಾರ್ಯಕರ್ತರುಮಾಲಾಧಾರಣೆ ಮಾಡುವ ಮೂಲಕ 17ನೇ ವರ್ಷದದತ್ತಮಾಲಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಶಂಕರಮಠದ ಆಡಳಿತಾಧಿಕಾರಿ ಚನ್ನಕೇಶವ ರಾವ್‌ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನುನೆರವೇರಿಸಲಾಯಿತು.ಧಾರ್ಮಿಕ ವಿಧಿ- ವಿಧಾನಗಳ ಬಳಿಕ ದತ್ತಭಕ್ತರುಮಾಲೆಯನ್ನು ಧರಿಸಿದರು. ಸೋಮವಾರದಿಂದ ಏಳು ದಿನಗಳ ಕಾಲ ಅಭಿಯಾನ ನಡೆಯಲಿದ್ದು, ನ.14ರಂದು ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾದಲ್ಲಿ ದತ್ತಪಾದುಕೆ ದರ್ಶನ ಪಡೆಯುವ ಮೂಲಕ ಅಭಿಯಾನಕ್ಕೆ ತೆರೆ ಬೀಳಲಿದೆ.
ಈ ಸಂದರ್ಭ ಶ್ರೀರಾಮಸೇನೆ ಕಾರ್ಯಾಧ್ಯಕ್ಷಗಂಗಾಧರ್ ಕುಲಕರ್ಣಿ, ಮುಖಂಡರಾದಆನಂದಶೆಟ್ಟಿ ಅಡ್ಯಾರು, ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿಸೇರಿದಂತೆ ಅನೇಕರು ಮಾಲಾಧಾರಣೆ ಮಾಡಿದರು.ಇವರೂ ಸೇರಿದಂತೆ ಮಠಾ ಧೀಶರು ಮತ್ತುಸ್ವಾಮೀಜಿಗಳು ನ.14ಕ್ಕೆ ದತ್ತಪಾದುಕೆ ದರ್ಶನ ಪಡೆದುಕೊಳ್ಳುವರು.
ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ಮಾತನಾಡಿ, 17ನೇ ವರ್ಷದ ದತ್ತಮಾಲಾ ಅಭಿಯಾನನಡೆಯುತ್ತಿದೆ. 13 ವರ್ಷದಿಂದಲೂ ನನ್ನ ನೇತೃತ್ವದಲ್ಲೇಅಭಿಯಾನ ಆಯೋಜಿಸಲಾಗಿದೆ. 2018ರಲ್ಲಿದತ್ತವಿಗ್ರಹ ಮೆರವಣಿಗೆಗೆ ಜಿಲ್ಲಾಡಳಿತ ಅನುಮತಿನೀಡದೆ ವಿಗ್ರಹ ವಶಕ್ಕೆ ಪಡೆಯಲಾಗಿದೆ.
ನಮ್ಮ ಮೇಲೆ107 ಪ್ರಕರಣಗಳನ್ನು ದಾಖಲಿಸಲಾಗಿದೆ. ರಾಜಕೀಯಒತ್ತಡ ತಂದು ಮಾನಸಿಕವಾಗಿ ಕುಗ್ಗಿಸುವ ಕೆಲಸನಡೆಯುತ್ತಿದೆ. ದತ್ತವಿಗ್ರಹ ನಮಗೆ ಒಪ್ಪಿಸುವವರೆಗೆನಗರದಲ್ಲಿ ಶೋಭಾಯಾತ್ರೆ ಮಾಡಬಾರದು ಎಂದುನಿರ್ಣಯಿಸಿದ್ದೇವೆ ಎಂದರು.